ಇತ್ತೀಚಿನ ಸುದ್ದಿ
ಕರಡಿ ಜತೆ ಮಣ್ಣಿನ ಮಗನ ವೀರೋಚಿತ ಹೋರಾಟ: ರಕ್ತ ಸುರಿಯುತ್ತಿದ್ದಂತೆ ಗ್ರಾಮಕ್ಕೆ ಓಡಿ ಬಂದ ರೈತ
30/01/2026, 17:16
ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ತೋಟದ ಕೆಲಸ ಮಾಡುತ್ತಿದ್ದ ರೈತರೊಬ್ಬರ ಮೇಲೆ ಕರಡಿ ದಾಳಿ ನಡೆಸಿದ ಪರಿಣಾಮ ತೀವ್ರವಾಗಿ ಗಾಯಗೊಂಡ ಘಟನೆ ನಡೆದಿದೆ.
ಗಾಯಗೊಂಡ ರೈತನನ್ನು ತರೀಕೆರೆ ತಾಲೂಕಿನ ಎ.ರಾಮನಹಳ್ಳಿ ಗ್ರಾಮದ ರಾಮಕೃಷ್ಣ ಎಂದು ಗುರುತಿಸಲಾಗಿದೆ.
ರಾಮಕೃಷ್ಣ ಅವರ ಕೈ ಹಾಗೂ ಕಾಲಿಗೆ ಕರಡಿ ದಾಳಿಯಿಂದ ತೀವ್ರವಾದ ಗಾಯಗಳಾಗಿವೆ.




ಬೆಳಗ್ಗೆಯೇ ತೋಟಕ್ಕೆ ಟ್ರಿಪ್ ಬಳ್ಳಿ ಬಿಡಲು ರಾಮಕೃಷ್ಣ ಹೊರಟಿದ್ದರು. ಕರಡಿ ದಾಳಿ ವೇಳೆ ಕರಡಿ ಜತೆ ಫೈಟ್ ಮಾಡಿ ಕೈ ಕಾಲಿನಲ್ಲಿ ರಕ್ತ ಸುರಿಯುತ್ತಿದ್ದರೂ ಕರಡಿಯಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಓಡಿ ಬಂದಿದ್ದರು. ನಂತರ ಗ್ರಾಮಸ್ಥರ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.
ರೈತನ ಮಂಡಿ ಹಾಗೂ ಮೊಣಕೈ ಮೇಲೆ ಕರಡಿ ತೀವ್ರ ತರಹದ ದಾಳಿ ಮಾಡಿದೆ.
ತರೀಕೆರೆ ವಲಯ ಅರಣ್ಯ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.












