ಇತ್ತೀಚಿನ ಸುದ್ದಿ
ಕೊಡಗಿನ ಅಳಿಯನಿಗೆ ಭರ್ಜರಿ ಪಾರ್ಟಿ: ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತವರಿನಲ್ಲಿ ಅದ್ದೂರಿ ರಿಸೆಪ್ಶನ್
07/04/2026, 19:05
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಬಹುಭಾಷ ನಟಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ಜೋಡಿಯು ಕೊಡಗಿನ ವಿರಾಜಪೇಟೆಯಲ್ಲಿ ಅದ್ಧೂರಿ ಆರತಕ್ಷತೆ ಸಮಾರಂಭವನ್ನು ಆಯೋಜಿಸಿದೆ. ರಾಜಸ್ಥಾನದಲ್ಲಿ ನಡೆದ ಖಾಸಗಿ ವಿವಾಹದ ನಂತರ, ಮಂದಣ್ಣ ಕುಟುಂಬದ ಆಪ್ತರಿಗಾಗಿ ಕೊಡವ ಸಂಪ್ರದಾಯದೊಂದಿಗೆ ಈ ವಿಶೇಷ ರಿಸೆಪ್ಷನ್ ನಡೆಸಲಾಯಿತು. ವಿರಾಜಪೇಟೆಯ ಸುಂದರ ಪರಿಸರದಲ್ಲಿರುವ ‘ಸಿರಿನಿಟಿ ಹಾಲ್’ ನಲ್ಲಿ ಈ ತಾರಾ ಜೋಡಿಯ ರಿಸೆಪ್ಷನ್‌ಗೆ ಸಾಕ್ಷಿಯಾಗಿದೆ. ಕೊಡವ ಸಂಪ್ರದಾಯದ ಕೆಲವು ಮೆರುಗುಗಳೊಂದಿಗೆ ಈ ಸಮಾರಂಭ ನಡೆದಿದ್ದು, ಮಂದಣ್ಣ ಕುಟುಂಬಸ್ಥರು ತಮ್ಮ ಮನೆಮಗಳ ಮದುವೆಯ ಸಂಭ್ರಮವನ್ನು ಸಡಗರದಿಂದ ಆಚರಿಸಿದ್ದಾರೆ. ಸಭಾಂಗಣದ ಸುತ್ತಮುತ್ತ ಬಿಗಿ ಭದ್ರತೆ ಏರ್ಪಡಿಸಲಾಗಿದ್ದು, ಕೇವಲ ಆಹ್ವಾನಿತರಿಗೆ ಮಾತ್ರ ಪ್ರವೇಶ ನೀಡಲಾಗಿತ್ತು.



ರಶ್ಮಿಕಾ ಮತ್ತು ವಿಜಯ್ ದೇವರಕೊಂಡ ಅವರ ವಿವಾಹವು ರಾಜಸ್ಥಾನದ ಉದಯಪುರದಲ್ಲಿ ಗೌಪ್ಯ ವಾಗಿ ಸದ್ದಿಲ್ಲದೆ ನಡೆದ ಬೆನ್ನಲ್ಲೇ ಕೊಡಗಿನ ಅನೇಕ ಸಂಬಂಧಿಕರಿಗೆ ಹೋಗಲು ಸಾಧ್ಯವಾಗಿರದ ಕಾರಣ. ಮಂದಣ್ಣ ಕುಟುಂಬದವರು ತಮ್ಮ ಜಿಲ್ಲೆಯ ಹಾಗೂ ರಾಜ್ಯದ ಆಪ್ತರಿಗಾಗಿ ಮತ್ತು ಮಂದಣ್ಣ ಕುಟುಂಬದ ದೊಡ್ಡ ಬಳಗಕ್ಕಾಗಿ ಈ ವಿಶೇಷ ರಿಸೆಪ್ಷನ್ ಏರ್ಪಡಿಸಿದ್ದಾರೆ. ಮದುವೆಯಾಗಿ ಒಂದೂವರೆ ತಿಂಗಳ ನಂತರ ಈ ಕಾರ್ಯಕ್ರಮ ನಡೆಯುತ್ತಿರುವುದು ಅಭಿಮಾನಿಗಳಲ್ಲಿ ಸಂತಸ ಮೂಡಿಸಿದೆ.












