ಇತ್ತೀಚಿನ ಸುದ್ದಿ
ವೃತ್ತಿಯಲ್ಲಿ ವೈದ್ಯೆ: ಪ್ರವೃತ್ತಿಯಲ್ಲಿ ಸಾಹಿತಿ, ಗಾಯಕಿ, ನಿರ್ಮಾಪಕಿ, ಸಮಾಜ ಸೇವಕಿ ಡಾ.ನೀರಜಾ ನಾಗೇಂದ್ರ
22/05/2025, 20:25

ಸಾಹಿತಿ, ಗಾಯಕಿ, ನಿಮಾ೯ಪಕಿ, ಸಹ ನಿದೇ೯ಶಕಿ, ಅನುವಾದ ತಜ್ಞೆಯಾಗಿರುವ
ಡಾ.ನೀರಜಾ ನಾಗೇಂದ್ರ ಅವರ ಬಹುಮುಖಿ ಸೇವೆಯನ್ನು ಸ್ಮರಿಸುತ್ತಾ ಅವರ ಹುಟ್ಟುಹಬ್ಬದ ಪ್ರಯುಕ್ತ ಈ ಲೇಖನ ಪ್ರಕಟಿಸುತ್ತಿದ್ದೇವೆ.
ಜಯಾನಂದ ಪೆರಾಜೆ ಬಂಟ್ವಾಳ
info.reporterkarnataka.com
ಡಾ.ನೀರಜಾ ಅವರು ವೃತ್ತಿಯಲ್ಲಿ ವೈದ್ಯರು. ಪ್ರವೃತ್ತಿಯಲ್ಲಿ ಕಲೆ-ಸಾಹಿತ್ಯ ಸೇವಕಿ, ಗಾಯಕಿ, ನಿಮಾ೯ಪಕಿ, ಸಹ ನಿದೇ೯ಶಕಿ, ಅನುವಾದ ತಜ್ಞೆ, ನಿಪುಣೆ, ದಕ್ಷೆ, ಸಮರ್ಥೆ, ಸದಾ ಕ್ರಿಯಾಶೀಲೆ, ಸರಳ ಸಜ್ಜನ ಅವರದು ಅಪರೂಪ ವಿಶಿಷ್ಟವಾದ ವ್ಯಕ್ತಿತ್ವ.
ಡಾ.ಎ ಎಸ್ ಧರಣೇದ್ರಯ್ಯ (ಮನಶಾಸ್ತ್ರ ಪ್ರಾಧ್ಯಾಪಕರು ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ) ಹಾಗೂ ಕೌಶಲ್ಯ ಧರಣೇಂದ್ರಯ್ಯ (ಹಿರಿಯ ಮಹಿಳಾ ಸಾಹಿತಿ) ಅವರ ಪುತ್ರಿ. ಹುಬ್ಬಳ್ಳಿಯ ಕಿಮ್ಸ್ನ಼ಲ್ಲಿ ಎಂ.ಬಿ.ಬಿ.ಎಸ್ ಪದವಿಯನ್ನು ಪೂರ್ಣಗೊಳಿಸಿದ ಬಳಿಕ ಬೆಂಗಳೂರಿನ ಡಾ.ನಾಗೇಂದ್ರ ಕುಮಾರ ಅವರನ್ನು ವಿವಾಹವಾದರು. ಈವ೯ರು ಪುತ್ರಿಯರಿದ್ದಾರೆ.
ಬೆಂಗಳೂರಿನ ತಿಪ್ಪಸಂದ್ರದ ತಮ್ಮ ಆಸ್ಪತ್ರೆಯ ಕಾಯ೯ಗಳ ಜೊತೆಗೆ ಜಿನದತ್ತರಾಯ ಚರಿತೆ, ನೇಮಿನಾಥ ಪುರಾಣ ಎಂಬ ಎರಡು ಕಿರು ಕೃತಿಗಳನ್ನು ರಚಿಸಿದ್ದಾರೆ. ಮುನಿಶ್ರೀ ತರುಣಸಾಗರರ ವಿದ್ಯಾರ್ಥಿ ಎಂಬ ಕೃತಿಯನ್ನು ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ್ದಾರೆ. ಮುನಿಶ್ರೀ ಚಿನ್ಮಯಸಾಗರರ “ಸಚ್ಚಾಯಿ ಜೀವನ್ ಕೀ”ಎಂಬ ಕವನ ಸಂಕಲನವನ್ನು ಇಂಗ್ಲಿಷ್ ಗೆ ಭಾಷಾಂತರಿಸಿದ್ದಾರೆ. ಮುನಿಶ್ರೀ ಚಿನ್ಮಯಸಾಗರ ಹಿಂದಿ ಕೃತಿಯನ್ನು ಪ್ರೇಮ ವಿವಾಹ ಮತ್ತು ಪರಿತಾಪಗಳು ಎಂದು ಕನ್ನಡಕ್ಕೆ ಭಾಷಾಂತರಿಸಿದ್ದಾರೆ.
ಪ್ರತಿ ಭಾನುವಾರ ಬೆಳಿಗ್ಗೆ 9 ರಿಂದ 9:30 ಚಂದನವಾಹಿನಿಯಲ್ಲಿ ಪ್ರಸಾರವಾಗುವ, 350ಕ್ಕೂ ಹೆಚ್ಚು ಸಂಚಿಕೆಗಳನ್ನು ಪೂರೈಸಿದ
*ರತ್ನತ್ರಯ* ಎಂಬ ಧಾರ್ಮಿಕ ಧಾರವಾಹಿಯ ನಿಮಾ೯ಪಕಿ ಮತ್ತು ನಿದೇ೯ಶಕಿಯಾಗಿ ಜನಪ್ರಿಯರಾಗಿದ್ದಾರೆ. ಜೈನ ಮಹಿಳಾ ಮೊದಲ ನಿದೇ೯ಶಕಿ ಎಂಬ ಕೀರ್ತಿಗೂ ಪಾತ್ರರಾಗಿದ್ದಾರೆ.
ಹಲವಾರು ವೈದ್ಯಕೀಯ ಮಾಹಿತಿಗಳ ಭಾಷಣ ಆಕಾಶವಾಣಿ ಬೆಂಗಳೂರಿನಿಂದ ಬಿತ್ತರಗೊಂಡಿವೆ. ಚಂದನ ದೂರದರ್ಶನ ವಾಹಿನಿಯಲ್ಲಿ ಉಪನ್ಯಾಸಗಳು ಪ್ರಸಾರಗೊಂಡಿವೆ. ದಶಲಕ್ಷಣ ಪರ್ವ ಮತ್ತು ಪಂಚಕಲ್ಯಾಣಗಳಲ್ಲಿ ಇವರು ರಾಜ್ಯದ ವಿವಿಧ ಕಡೆ ಮತ್ತು ವೈನಾಡು, ಶಿಖರಜೀಯಲ್ಲಿ ಉಪನ್ಯಾಸ ನೀಡಿದ್ದಾರೆ.
ಎರಡು ಬಾರಿ ಕರ್ನಾಟಕ ಜೈನ ಅಸೋಸಿಯೇಷನ್ ಕಾರ್ಯಕಾರಿ ಸಮಿತಿಗೆ ಮಹಿಳಾ ಪ್ರತಿನಿಧಿಯಾಗಿ ಚುನಾಯಿತರಾಗಿದ್ದಾರೆ. ಪ್ರಸ್ತುತ ಸಹಕಾಯ೯ದಶಿ೯ಯಾಗಿದ್ದಾರೆ
ಡಾ.ನೀರಜಾ ಅವರು ತಮ್ಮ ಪತಿಯೊಡನೆ ಅನೇಕ ಉಚಿತ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಶಿಬಿರಗಳನ್ನು ಏರ್ಪಡಿಸಿದ್ದಾರೆ. ಸಾಲಿಗ್ರಾಮ ಜೈನ ಮಿತ್ರ ಮಂಡಳಿಯ ಅಧ್ಯಕ್ಷರಾಗಿ, ಸುಮೇರು ಜೈನ ಫೌಂಡೇಶನ್ ನ ಉಪಾಧ್ಯಕ್ಷರಾಗಿ, ಜೈನ ಮಿಲನ್ ಈಸ್ಟ ಅಧ್ಯಕ್ಷರಾಗಿ ಸೇವೆ ಸಲ್ಲಿಸಿ ಮಾದರಿ ವ್ಯಕ್ತಿಯಾಗಿದ್ದಾರೆ. ಭೂ ಮಾತು ಎಂಬ ಆನ್ಲೈನ್ ಪತ್ರಿಕೆಯಲ್ಲಿ ಲೇಖನಗಳು ಪ್ರಕಟವಾಗುತ್ತಿವೆ. ಸ್ಪೀಕಿಂಗ್ ಟ್ರೀ ವೆಬ್ಸೈಟ್ನಲ್ಲಿ blogs ಬರೆಯುತ್ತಿದ್ದಾರೆ.
*ಪ್ರಶಸ್ತಿಗಳು:* ಉದಯೋನ್ಮುಖ ಕವಯಿತ್ರಿ ಪ್ರಶಸ್ತಿ , ಗೊಲ್ಡನ್ ಎಕ್ಸಲೆನ್ಸಿ ಇಂಟರ್ ನ್ಯಾಷನಲ್ ಪ್ರಶಸ್ತಿ, ಕನ್ನಡ ಸಾಹಿತ್ಯ ಪರಿಷತ್ತಿನ ದತ್ತಿ ಪ್ರಶಸ್ತಿ, ಶೃತಸ್ಕಂಧ ಕಾವ್ಯ ಗಣ ಮತ್ತು ಜಿನಗಾನ ಸುಧಾ ಗಣಗಳು ಸದ್ಧರ್ಮ ವಾರಿಧಿ ಪ್ರಶಸ್ತಿ,ಸಾಹಿತ್ಯ ಧಾರೆ ಪ್ರಶಸ್ತಿ, ಜೈನ ಮಾಧ್ಯಮ ಪ್ರಶಸ್ತಿ (ದುಬೈ), ಧರ್ಮ ಪ್ರಭಾವನ ಪ್ರಶಸ್ತಿಗಳು ಸಂದಿವೆ. ಹಲವಾರು ಸಂಘ ಸಂಸ್ಥೆಗಳು ಇವರನ್ನು ಸನ್ಮಾನಿಸಿವೆ. ಸುಮೇರು ಜೈನ್ ಫೌಂಡೇಷನ್ ಡಾ.ನೀರಜಾ ಅವರಿಗೆ *ವಿಶೇಷ ಧರ್ಮ ಪ್ರಭಾವನಾ ಪ್ರಶಸ್ತಿ ನೀಡಿ ಗೌರವಿಸಿದೆ.