ಇತ್ತೀಚಿನ ಸುದ್ದಿ
ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ಹೆಜ್ಜೇನು ದಾಳಿ: ಮಹಿಳೆ ಸಹಿತ 3 ಮಂದಿಗೆ ತೀವ್ರ ಗಾಯ
05/12/2025, 20:43
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕುಶಾಲನಗರದ ಕಣಿವೆ ಗ್ರಾಮದಲ್ಲಿ ಹೆಜ್ಜೇನು ದಾಳಿ ನಡೆಸಿ ಮೂವರು ಗಂಭೀರ ಗಾಯಗೊಂಡ ಘಟನೆ ನಡೆದಿದೆ.
ಸೋಮವಾರಪೇಟೆ ತಹಸೀಲ್ದಾರ್ ಕಚೇರಿ ಸಿಬ್ಬಂದಿ ಕಾರ್ತಿಕ್ ಕುಮಾರ್, ಅವರ ತಾಯಿ ಉಷಾ ಮತ್ತು ಚಿಕ್ಕಪ್ಪ ಪ್ರಕಾಶ್ ಗಾಯಗೊಂಡವರು. ಹುತ್ತರಿ ಅಂಗವಾಗಿ ಕಚೇರಿಗೆ ರಜೆ ಇದ್ದುದರಿಂದ ಕಾರ್ತಿಕ್ ತಾಯಿಯೊಂದಿಗೆ ತೋಟಕ್ಕೆ ತೆರಳಿದ್ದ ಸಂದರ್ಭ ಏಕಾಏಕಿ ದಾಳಿ ನಡೆಸಿದೆ.
ತಕ್ಷಣವೇ ಕಿರುಚಿಕೊಂಡು ಕಾರಿನತ್ತ ಓಡಿ ಬಂದು ರಕ್ಷಿಸಿಕೊಂಡಿದ್ದಾರೆ, ಬಳಿಕ ತಾವೇ ಕಾರಿನಲ್ಲಿ ಕುಶಾಲನಗರ ಆಸ್ಪತ್ರೆಗೆ ಆಗಮಿಸಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚಿಕ್ಕಪ್ಪ ಪ್ರಕಾಶ್ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.











