ಇತ್ತೀಚಿನ ಸುದ್ದಿ
ಕೊಡಗಿನಲ್ಲಿ ಮುಂದುವರಿದ ಆನೆ- ಮಾನವ ಸಂಘರ್ಷ: ಕುಶಾಲನಗರ ಬಳಿ ರೈಲ್ವೆ ಬ್ಯಾರಿಕೇಡ್ ಮುರಿದ ಸಲಗ
04/12/2025, 12:47
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗಿನಲ್ಲಿ ಕಾಡಾನೆಗಳ ಹಾವಳಿ ಸಹಜವಾಗಿದೆ. ಕೊಡಗಿನಲ್ಲಿ ಆನೆಗಳ ಪಡೆ ರಾತ್ರಿ ಹೊತ್ತಿನಲ್ಲಿ ಓಡುತ್ತಿತ್ತು. ಆದರೆ ಇದೀಗ ಇದರ ಓಡಾಟ ಹಗಲಿನಲ್ಲೂ ಶುರುವಾಗಿದೆ.


ಕೊಡಗಿನಲ್ಲಿ ಆನೆ ಮತ್ತು ಮಾನವ ನಡುವೆ ಸಂಘರ್ಷ ಸ್ವಲ್ಪ ದಿನಗಳಿಂದ ಕಡಿಮೆ ಆಗಿತ್ತು.ಇದೀಗ ಮತ್ತೆ ಶುರುವಾಗಿದೆ. ಕುಶಾಲನಗರ ತಾಲ್ಲೂಕಿನ ಅತ್ತೂರು ಗ್ರಾಮದಲ್ಲಿ ರೈಲ್ವೆ ಬ್ಯಾರಿಕೇಡ್ ಮುರಿದ ಊರಿನ ಒಳಗೆ ಬಂದಿದೆ. ಕಾಡಾನೆ ಅರಣ್ಯ ದಾಟದಂತೆ ಅಳವಡಿಸಲಾಗಿದ್ದ ರೈಲ್ವೆ ಕಂಬಿಯನ್ನೇ ಆನೆ ಮುರಿದು ಹಾಕಿದೆ.












