ಇತ್ತೀಚಿನ ಸುದ್ದಿ
Kodagu | ಕುಶಾಲನಗರ ಹನುಮ ಜಯಂತಿ ಶೋಭಾಯಾತ್ರೆ: 4 ಮಂಟಪಗಳಿಗೆ ಪ್ರಶಸ್ತಿ ಪ್ರಕಟ
03/12/2025, 18:26
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಳೆದ 40 ವರ್ಷಗಳಿಂದ ಕುಶಾಲನಗರದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಚರಿಸಿಕೊಂಡು ಬರಲಾಗುತ್ತಿರುವ ಹನುಮ ಜಯಂತಿ ಅಂಗವಾಗಿ ನಡೆದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡ ಮಂಟಪಗಳಿಗೆ ಪ್ರಶಸ್ತಿ ಪ್ರಕಟಿಸಲಾಗಿದೆ.


ಒಟ್ಟು 8 ಮಂಟಪಗಳು ಆಂಜನೇಯ ಸಾಹಸ ಘಾತೆಯ ವಿವಿಧ ಪ್ರದರ್ಶನ ನೀಡಿದ್ದು, ಉತ್ತಮ ಪ್ರದರ್ಶನ ನೀಡಿದ ಗುಡ್ಡೆಹೊಸೂರು-ಬಸವನಹಳ್ಳಿ ಯ ವೀರಾಂಜನೇಯ ಸೇವಾ ಸಮಿತಿ ಪ್ರಥಮ (82), ಹಾರಂಗಿ ಗ್ರಾಮದ ವೀರ ಹನುಮ ಸೇವಾ ಸಮಿತಿಗೆ ದ್ವಿತೀಯ(74),ಹೆಚ್. ಆರ್. ಪಿ ಕಾಲೋನಿ ಅಂಜನಿ ಪುತ್ರ ಸಮಿತಿಗೆ ತ್ರಿತೀಯ ಬಹುಮಾನ(72), ಕೂಡಿಗೆ-ಕೂಡು ಮಂಗಳೂರು (68) ಅಂಕದೊಂದಿಗೆ ನಾಲ್ಕನೇ ಸ್ಥಾನ ಪಡೆದು ಕೊಂಡಿದೆ.













