4:09 PM Saturday19 - April 2025
ಬ್ರೇಕಿಂಗ್ ನ್ಯೂಸ್
Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ… ಭಾರತದಲ್ಲಿ ಪ್ರಪ್ರಥಮವಾಗಿ ಮುಳಿಯದ ಮತ್ತೊಂದು ಸಾಧನೆ: ಲ್ಯಾಬ್ ಗ್ರೋನ್ ಡೈಮಂಡ್ ಟೆಸ್ಟಿಂಗ್ ಮಿಷನ್… Police Encounter | ಹುಬ್ಬಳ್ಳಿ: 5 ವರ್ಷದ ಬಾಲಕಿಯ ಅಪಹರಿಸಿ ಕೊಲೆ: ಆರೋಪಿ… DCM | ಬಿಜೆಪಿಗರು ತಮ್ಮ ಹೋರಾಟ ಕೇಂದ್ರ ಸರಕಾರದ ವಿರುದ್ಧ ಎಂದು ಬೋರ್ಡ್… CET | ಪಿಯುಸಿ ಅಂಕ ಕಡಿಮೆ ಬಂತೆಂದು ಸಿಇಟಿ ಮಿಸ್ ಮಾಡ್ಕೊಬೇಡಿ: ಕರ್ನಾಟಕ…

ಇತ್ತೀಚಿನ ಸುದ್ದಿ

ಸಿಎಂ ಬೊಮ್ಮಾಯಿಯ ‘ಬೊಂಬಾಯಿ’ ಅಂದ್ರು ಕೇಂದ್ರ ಗೃಹ ಸಚಿವರು!; ರಾಜ್ಯ ಗೃಹ ಸಚಿವ ಅರಗರ ‘ಅಗರ’ ಅಂದ್ರು ಸಚಿವ ಭೈರತಿ !!

02/09/2021, 21:45

ದಾವಣಗೆರೆ(reporterkarnataka.com): ಒಬ್ರು ಬೊಂಬಾಯಿ ಅಂದ್ರು. ಇನ್ನೊಬ್ಬರು ಅಗರ ಅಂದ್ರು. ಜನ ಮಾತ್ರ ಮುಸಿ ಮುಸಿ ನಕ್ಕು ಸಮ್ಮನಾದರು.

ಇದು ಇವತ್ತು ಬೆಣ್ಣೆನಗರಿ ದಾವಣಗೆರೆಯ ಜಿಎಂಐಟಿಯಲ್ಲಿ ನಡೆದ ಸ್ವಾರಸ್ಯ ಘಟನೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ರು. ಗೃಹ ಸಚಿವರು ಹಲವು ಉದ್ಘಾಟನೆಗಳನ್ನು ನೆರವೇರಿಸಿದರು. ನಂತರ ಮಾತಾಡಿದ ಅಮಿತ್ ಶಾ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಹೆಸರು ಹೇಳುವಾಗ ತಪ್ಪಿ ‘ಬೊಂಬಾಯಿ’ ಅಂತ ಹೇಳಿ ಬಿಟ್ರು. ಇದು ನೆರೆದ ಜನರಲ್ಲಿ ನಗು ತರಿಸಿತು. ಹೆಚ್ಚಿನವರು ನಗುವನ್ನು ಅದುಮಿಟ್ಟುಕೊಂಡು ಮುಸಿ ಮುಸಿ ನಕ್ಕರು. 

ಹಾಗೆ ಸ್ವಾಗತ ಭಾಷಣ ಮಾಡಿದ ಜಿಲ್ಲಾ ಉಸ್ತುವಾರಿ ಸಚಿವರೂ ಆಗಿರುವ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅವರು ರಾಜ್ಯ ಗೃಹ ಸಚಿವರಾದ ಆರಗ ಜ್ಞಾನೇಂದ್ರ ಹೆಸರು ಹೇಳಲು ತಡವರಿಸಿದರು. ” ಅಗರ… ಅಗರ.. ಎಂದು ಹೇಳಿ ಭೈರತಿ  ತಡವರಿಸಿದರು‌. ಇದು ಕೂಡ ಜನರಿಗೆ ಪುಕ್ಕಟೆ ಮನರಂಜನೆ ನೀಡಿತು.

ಅಮಿತ್ ಶಾ ಅವರು ಗುಜರಾತಿನವರು ಅವರಿಗೆ ಇಲ್ಲಿನ ಹೆಸರು ಉಚ್ಚರಣೆ ಮಾಡುವುದು ಕಷ್ಟವಾದೀತು. ಆದರೆ ಇಲ್ಲಿಯವರೇ ಆದ ಭೈರತಿಗೇನು ಕಷ್ಟ ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ದಶಕಗಳ ಕಾಲ ಬಿಜೆಪಿಯಲ್ಲಿ ಶಾಸಕರಾಗಿದ್ದ ಅರಗ ಜ್ಞಾನೇಂದ್ರ ಅವರಿಗೆ ಕೊನೆಗೂ ಸಚಿವ ಸ್ಥಾನ ದೊರಕಿ ಆಯಕಟ್ಟಿನ ಖಾತೆ ದೊರಕಿದೆ. ಆದರೆ ಅವರದೇ ಪಕ್ಷದ ಸಚಿವರಿಗೆ ಮಾತ್ರ ಅವರ ಹೆಸರು ಗೊತ್ತಿಲ್ಲ.

ಇತ್ತೀಚಿನ ಸುದ್ದಿ

ಜಾಹೀರಾತು