ಇತ್ತೀಚಿನ ಸುದ್ದಿ
ರಕ್ತದಾನ ಮಾಡುವ ಮುಖಾಂತರ ಸಮಾಜಕ್ಕೆ ಪುಣ್ಯ ಕಾರ್ಯ ಮಾಡಿ: ವೈದ್ಯಾಧಿಕಾರಿ ವೆಂಕಟೇಶ್
02/09/2021, 19:43
ದೇವಲಾಪುರ ಜಗದೀಶ ನಾಗಮಂಗಲ ಮಂಡ್ಯ
info.reporterkarnataka@gmail.com
ಇಂದಿನ ಸಮಾಜದಲ್ಲಿ ರಕ್ತದಾನ ಮಾಡುವ ಮುಖಾಂತರ ಸಮಾಜದ ಪುಣ್ಯ ಕಾರ್ಯ ಮಾಡಿದಂತೆ ಎಂದು ವೈದ್ಯಾಧಿಕಾರಿ ವೆಂಕಟೇಶ್ ಹೇಳಿದರು .
ಅವರಿಂದು ನಾಗಮಂಗಲದ ಸಾರ್ವಜನಿಕ ಆಸ್ಪತ್ರೆಯಲ್ಲಿ ನಾಗಮಂಗಲದಲ್ಲಿ ರೋಟರಿ ಕ್ಲಬ್ ಆಯೋಜನೆ ಮಾಡಿದ ರಕ್ತದಾನ ಶಿಬಿರದ ಸಮಾರಂಭದಲ್ಲಿ ಮಾತನಾಡಿ, ರಕ್ತದಾನ ಮಾಡುವ ಮುಖಾಂತರ ಬೇರೊಬ್ಬರ ಪ್ರಾಣ ಉಳಿಸಲು ಅಥವಾ ತುರ್ತು ರಕ್ತ ಇತರೆ ಕಾಯಿಲೆಗಳಿಗೂ ಬೇಕಾಗಿರುವುದರಿಂದ ಯುವಕರು ಹೆಚ್ಚೆಚ್ಚು ರಕ್ತದಾನ ಮಾಡುವಂತೆ ತಿಳಿಸಿದರು.
ರಕ್ತದಾನ ಮಾಡುವುದರಿಂದ ಯಾವುದೇ ಅನುಮಾನ ಅಥವಾ ಇತರೆ ಕಾಯಿಲೆಗಳು ಬರುತ್ತದೆ ಎಂಬುದನ್ನು ದೂರ ಮಾಡುವ ಮುಖಾಂತರ ರಕ್ತದಾನ ಮಾಡುವುದರಿಂದ ರಕ್ತವು ಅಷ್ಟೇ ಪ್ರಮಾಣದಲ್ಲಿ ಉತ್ಪತ್ತಿಯಾಗುತ್ತದೆ ಬೇರೆ ಯಾವುದೇ ಮಾತುಗಳಿಗೆ ಕಿವಿಗೊಡದೆ ಇನ್ನೊಬ್ಬರ ಜೀವ ಉಳಿಸುವ ಅವಶ್ಯಕತೆಗೆ ಬೇಕಾಗಿರುವುದರಿಂದ ಇಂತಹ ಶಿಬಿರಗಳು ಅವಶ್ಯಕವೆಂದು ಮಾತನಾಡಿದರು.
ಇದೇ ವೇಳೆ ತಾಲ್ಲೂಕು ರೋಟರಿ ಅಧ್ಯಕ್ಷ
ಮಹೇಶ್ , ಕಾರ್ಯದರ್ಶಿ ಸೋಮೇಶಪ್ಪ,
ಡಾ. ಶಿವಕುಮಾರ್, ಮಂಡ್ಯ ಜಿಲ್ಲೆಯ ರಕ್ತನಿಧಿ ಕೇಂದ್ರದ ಡಾ. ಶಾರ್ವರಿ, ಡಾ.ವಿನೋದ್ ನಾಗರಾಜು ಹಾಗೂ ರೋಟರಿ ಪದಾಧಿಕಾರಿಗಳು ಹಾಜರಿದ್ದರು.