ಇತ್ತೀಚಿನ ಸುದ್ದಿ
ಕುಶಾಲನಗರದಲ್ಲಿ ಅದ್ದೂರಿ ಹನುಮ ಜಯಂತಿ ಆಚರಣೆ: ಅಬ್ಬರಿಸಿ ಬೊಬ್ಬಿರಿಸಿದ ದಶ ಮಂಟಪಗಳು
02/12/2025, 22:41
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆ ಕುಶಾಲನಗರ ಪಟ್ಟಣ್ಣದ ಕಳೆದ 40 ವರ್ಷಗಳಿಂದ ಶ್ರೀ ರಾಮಾಂಜನೇಯ ಉತ್ಸವ ಸಮಿತಿ, ದೇವಸ್ಥಾನ ಸೇವಾ ಟ್ರಸ್ಟ್ ಆಚರಿಸಿಕೊಂಡು ಬರುತ್ತಿರುವ ಹನುಮ ಜಯಂತಿ ಅದ್ದೂರಿಯಾಗಿ ನಡೆಯಿತು. ಕಳೆದ ಎರಡು ದಿನಗಳಿಂದ ಹನುಮ ಜಯಂತಿ ಕಳೆಗಟ್ಟಿದ್ದ ಪಟ್ಟಣದ ರಥ ಬೀದಿ ಅದ್ದೂರಿ ಮಂಟಪಗಳ ಮೆರವಣಿಗೆಗೆ ಸಾಕ್ಷಿಯಾಯಿತು. ಆಂಜನೇಯನ ಸಾಹಸ, ಶಕ್ತಿ ಹೊಂದಿರುವ ವಿವಿಧ ಕಥಾಹಂದರದ ಹೊತ್ತು ಸಾಗಿದ ಮಂಟಪಗಳಲ್ಲಿ ಡಿಜೆ, ಆಕರ್ಷಕ ವಿದ್ಯುತ್ ಅಲಂಕಾರಕ್ಕೆ ಸಾರ್ವಜನಿಕರು ಫಿದಾ ಆದರು, ಯುವ ಸಮೂಹ ಕುಣಿದು ಕುಪ್ಪಲಿಸಿ ಸಂಭ್ರಮಿಸಿದರು.





ಕೂಡಿಗೆ, ಮುಳ್ಳುಸೋಗೆ, ಕೊಪ್ಪ, ಮಾದಪಟ್ಟಣ, ಗುಡ್ಡೆಹೊಸೂರು ಭಾಗದಿಂದ ಮಂಟಪಗಳು ಸಂಜೆ 7 ಗಂಟೆ ಸುಮಾರಿಗೆ ಪಟ್ಟಣ ಪ್ರವೇಶಿಸಿದವು. ಇಲ್ಲಿನ ಗಣಪತಿ ದೇವಾಲಯ ಆವರಣದಲ್ಲಿ ಪ್ರದರ್ಶನ ನೀಡಿದ್ದು, ಸಾರ್ವಜನಿಕರು ಮೂಕ ವಿಸ್ಮಿತರಾದರು. ಪ್ರತಿ ವರ್ಷದಂತೆ ಈ ಭಾರಿಯೂ ಪಕ್ಕದ ಜಿಲ್ಲೆ ಮೈಸೂರಿನ ಪಿರಿಯಾಪಟ್ಟಣ ತಾಲ್ಲೂಕು, ಹಾಸನ ಭಗದಿಂದಲೂ ಅದ್ದೂರಿ ಉತ್ಸವಕ್ಕೆ ಸಾಕ್ಷಿಯಾದರು.












