ಇತ್ತೀಚಿನ ಸುದ್ದಿ
Udupi | ‘ಜೈ ಶ್ರೀ ಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದ ಪ್ರಧಾನಿ ಮೋದಿ
28/11/2025, 14:06
ಉಡುಪಿ(reporterkarnataka.com): ಪರ್ಯಾಯ ಪುತ್ತಿಗೆ ಮಠ ಆಯೋಜಿಸಿರುವ ‘ಲಕ್ಷ ಕಂಠ ಗೀತಾ ಪಾರಾಯಣ’ ಕಾರ್ಯಕ್ರಮದಲ್ಲಿ ಭಾಗವಹಿಸಿದ ಪ್ರಧಾನಿ ನರೇಂದ್ರ ಮೋದಿ ಅವರು ‘ಜೈ ಶ್ರೀಕೃಷ್ಣ’ ಎಂದು ಕನ್ನಡದಲ್ಲೇ ಭಾಷಣ ಆರಂಭಿಸಿದರು.



ಉಡುಪಿಯ ಶ್ರೀಕೃಷ್ಣ ಮಠಕ್ಕೆ ಆಗಮಿಸಿದ ಪ್ರಧಾನಿ ಮೋದಿ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟನೆ ಮಾಡಿದ್ದಾರೆ.
ಉಡುಪಿಯ ರಥ ಬೀದಿಯಲ್ಲಿ ಅದ್ದೂರಿ ರೋಡ್ ಶೋ ಮಾಡಿದ ಪ್ರಧಾನಿ ಮೋದಿ ಕನಕ ಗೋಪುರದ ಮುಂದೆ ಇಳಿದು ಅಷ್ಟಮಠಗಳನ್ನು ವೀಕ್ಷಿಸುತ್ತಾ ಕನಕದಾಸರ ಪುತ್ತಳಿಗೆ ಪುಷ್ಪಾರ್ಚನೆ ಮಾಡಿದರು. ಬಳಿಕ ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ ಮಾಡಿ ನಂತರ ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟಿಸಿದರು.
ಕೃಷ್ಣ ಮಠದ ಮುಖ್ಯದ್ವಾರದ ಮೂಲಕ ಪ್ರವೇಶಿಸಿದ ಪ್ರಧಾನಿ ಮೋದಿಗೆ ಪೂರ್ಣ ಕುಂಭದ ಸ್ವಾಗತ ಮಾಡಲಾಗಿದ್ದು, ಬಳಿಕ ಮಧ್ವ ಸರೋವರಕ್ಕೆ ತೆರಳಿ ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಮಠದೊಳಗೆ ತೆರಳಿದ್ದರು.
ದೇವಸ್ಥಾನದ ಒಳಗೆ ಪ್ರವೇಶಿಸಿದ ಪ್ರಧಾನಿ ಮೋದಿ ದೀಪ ಬೆಳಗುವ ಮೂಲಕ ಸ್ವರ್ಣ ಲೇಪಿತ ತೀರ್ಥ ಮಂಟಪ ಉದ್ಘಾಟಿಸಿದರು. ಈ ವೇಳೆ ಮಠಾಧೀಶರು ಗಣ್ಯರ ಉಪಸ್ಥಿತರಿದ್ದರು.













