ಇತ್ತೀಚಿನ ಸುದ್ದಿ
ಹಿಂದಿ ಕಲಿತು ಬನ್ನಿ ಎಂದ ಯೂನಿಯನ್ ಬ್ಯಾಂಕ್ ಮೆನೇಜರ್ ಗೆ ತರಾಟೆ: ಕನ್ನಡಪರ ಸಂಘಟನೆಗಳಿಂದ ಭಾರಿ ಪ್ರತಿಭಟನೆ
02/09/2021, 10:29
ರಾಹುಲ್ ಅಥಣಿ ಬೆಳಗಾವಿ
info.reporterkarnataka@gmail.com
ಅಥಣಿ ಪಟ್ಟಣದ ಯೂನಿಯನ್ (ಕಾರ್ಪೋರೇಷನ್) ಬ್ಯಾಂಕ್ ಮ್ಯಾನೇಜರ್ ಕನ್ನಡದಲ್ಲಿ ಮಾತನಾಡದೆ ಕನ್ನಡಿಗರಿಗೆ ಹಿಂದಿ ಕಲಿತುಬನ್ನಿ ಎಂದು ಹೇಳುವ ಮೂಲಕ ಕನ್ನಡಪರ ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ಕನ್ನಡ ಮಾತನಾಡದ ಮತ್ತು ಕನ್ನಡಿಗರಿಗೆ ಅವಮಾನ ಮಾಡಿದ ಬ್ಯಾಂಕ್ ಮ್ಯಾನೆಜರ್ ಅವರನ್ನ ತಕ್ಷಣ ವರ್ಗಾವಣೆ ಮಾಡಿ ಕನ್ನಡಿಗ ಅಧಿಕಾಯನ್ನ ನೇಮಿಸುವಂತೆ ಆಗ್ರಹಿಸಿ ಕನ್ನಡಪರ ಸಂಘಟನೆಗಳು ಯೂನಿಯನ್ ಬ್ಯಾಂಕ್ ಎದುರು ಪ್ರತಿಭಟನೆ ನಡೆಸಿದರು.
ಇನ್ನೂ ಪ್ರತಿಭಟನಾ ಸ್ಥಳಕ್ಕೆ ಅಥಣಿ ಪಿಎಸ್ಐ ಕುಮಾರ್ ಹಾಡಕರ್ ಆಗಮಿಸಿ ಬ್ಯಾಂಕ್ ಮ್ಯಾನೇಜರ್ ಮತ್ತು ಸಿಬ್ಬಂದಿಗಳಿಗೆ ಕನ್ನಡದಲ್ಲಿ ವಿಚರಣಾ ಕೌಂಟರ್ ಮಾಡುವಂತೆ ತಿಳಿಸಿ ಕನ್ನಡ ಭಾಷೆಯಲ್ಲಿ ವ್ಯವಹರಿಸುವಂತೆ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು.
ಇದೆ ಸಂದರ್ಭದಲ್ಲಿ ಕರವೇ ಅಧ್ಯಕ್ಷ ಅಣ್ಣಾಸಾಬ ತೇಲಸಂಗ ಮಾತನಾಡಿ, ಕನ್ನಡಿಗರಿಗೆ ಅವಮಾನ ಮಾಡಿದ ಬ್ಯಾಂಕ್ ಮ್ಯಾನೇಜರ್ ಅವರನ್ನ ತಕ್ಷಣ ವರ್ಗಾವಣೆ ಮಾಡಬೇಕು ಮತ್ತು ಪ್ರತಿ ಬ್ಯಾಂಕ್ ಗಳಲ್ಲಿ ಶೇಕಡಾ ಅರವತ್ತರಷ್ಟು ಕನ್ನಡಿಗ ಸಿಬ್ಬಂದಿಗಳನ್ನ ನೇಮಿಸುವಂತೆ ರಾಜ್ಯ ಸರ್ಕಾರವನ್ನ ಆಗ್ರಹಿಸಿದರು.
ಇನ್ನೂ ಬ್ಯಾಂಕ್ ಮ್ಯಾನೇಜರ್ ಜೈ ಕರ್ನಾಟಕ ಎಂದು ಘೋಷಣೆ ಕೂಗಿ ಆದಷ್ಟು ಬೇಗನೆ ಕನ್ನಡ ಭಾಷೆ ಕಲಿಯುವುದಾಗಿ ತಿಳಿಸಿ ಕ್ಷಮೆ ಕೇಳಿದ್ದರಿಂದ ಪ್ರತಿಭಟನೆ ಹಿಂಪಡೆಯಲಾಯಿತು
ಇದೇ ಸಂದರ್ಭದಲ್ಲಿ ಕನ್ನಡಪರ ಸಂಘಟನೆಯ ಪದಾಧಿಕಾರಿಗಳಾದ ದೀಪಕ ಬುರ್ಲಿ, ಚಿದಾನಂದ ಶೇಗುಣಶಿ, ಶಶಿಧರ ಬರ್ಲಿ, ಜಗನ್ನಾಥ ಬಾಮನೆ, ದೀಪಕ್ ಸಿಂಧೆ, ಮಹಾಂತೇಶ ಬಾಡಗಿ, ಸೇರಿದಂತೆ ಹಲವರು ಉಪಸ್ಥಿತರಿದ್ದರು