ಇತ್ತೀಚಿನ ಸುದ್ದಿ
Bhadravathi | ಪತಿಯ ಕಿರುಕುಳ: ಡೆತ್ ನೋಟ್ ಬರೆದು ನಾಲೆಗೆ ಹಾರಿ ನವ ವಿವಾಹಿತೆ ಆತ್ಮಹತ್ಯೆ
27/11/2025, 18:28
ಭದ್ರಾವತಿ(reporterkarnataka.com): ಮದುವೆಯಾದ 6 ತಿಂಗಳಲ್ಲಿ ನವವಿವಾಹಿತೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಭದ್ರಾವತಿಯ ಹಂಚಿನ ಸಿದ್ದಾಪುರ ಗ್ರಾಮದ ಬಳಿ ಘಟನೆ ನಡೆದಿದೆ.
ಆತ್ಮಹತ್ಯೆಗೆ ಶರಣಾದ ನವವಿವಾಹಿತೆ ಲತಾ (25) ಎಂದು ತಿಳಿದುಬಂದಿದೆ.
ಪತಿ ಹಾಗೂ ಪತಿಯ ಮನೆಯವರ ವಿರುದ್ಧ ಕಿರುಕುಳ ಆರೋಪ ಕೇಳಿ ಬಂದಿದೆ. ಡೆತ್ ನೋಟ್ ಬರೆದಿಟ್ಟು ನಾಲೆಗೆ ಹಾರಿ ನವ ವಿವಾಹಿತ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಾಟ್ಸಪ್ ನಲ್ಲಿ ಡೆತ್ ನೋಟ್ ಬರೆದಿದ್ದು ಪತಿ ಹಾಗೂ ಮನೆಯವರ ಕಿರುಕುಳದ ಬಗ್ಗೆ ಉಲ್ಲೇಖಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಿಎಸ್ಸಿ ಬಿಎಡ್ ಪದವೀಧರೆ ಆಗಿದ್ದ ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಹಂಚಿನ ಸಿದ್ದಾಪುರದ ನಿವಾಸಿಯಾಗಿರುವ ಲತಾ ಅವರ ವಿವಾಹ 2025 ಏಪ್ರಿಲ್ 14 ರಂದು ಶಿಕಾರಿಪುರದ ಗುರುರಾಜ್ ಜೊತೆಗೆ ಆಗಿತ್ತು.
ಬಿಆರ್ ಪಿಯ ಕೆಪಿಸಿಎಲ್ ನಲ್ಲಿ ಲತಾ ಅವರ ಪತಿ ಗುರುರಾಜ್ ಎಇಇ ಆಗಿದ್ದಾರೆ.
ಘಟನೆಯ ಬಳಿಕ ಲತಾ ಪತಿ ಹಾಗೂ ಆತನ ಕುಟುಂಬಸ್ಥರು ನಾಪತ್ತೆಯಾಗಿದ್ದಾರೆ.













