ಇತ್ತೀಚಿನ ಸುದ್ದಿ
ವಿರಾಜಪೇಟೆ: ರಸ್ತೆ ಕಾಮಗಾರಿ ಆರಂಭಿಸುವಂತೆ ಒತ್ತಾಯಿಸಿ ಬಿಜೆಪಿ ಪ್ರತಿಭಟನೆ
26/11/2025, 12:29
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@ail.com
ಮಳೆ ನಿಂತ ಮೇಲೆ ಮುಖ್ಯ ರಸ್ತೆಯ ಕಾಮಗಾರಿ ಮಾಡುತ್ತೇವೆ ಎಂದು ಹೇಳಿದ್ದ ಶಾಸಕರು ಮಳೆಗಾಲ ಮುಗಿದು ಬಿಸಿಲು ಆರಂಭಿಸಿದೆ ಆದರೂ ಕೂಡ ರಸ್ತೆಯ ಕಾಮಗಾರಿ ಮಾಡಲು ನಿರ್ಲಕ್ಷ್ಯ ತೋರಿದ್ದಾರೆ ಎಂದು ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು.

ವಿರಾಜಪೇಟೆ ಮಂಡಳ ಬಿಜೆಪಿ ವತಿಯಿಂದ ನಡೆದ ಪ್ರತಿಭಟನೆ ನಲ್ಲಿ ಮಾಜಿ ಶಾಸಕರಾದ ಕೆ.ಜಿ.ಬೋಪಯ್ಯ ಮಾತನಾಡಿ ನನ್ನ ಅಧಿಕಾರದ ಅವಧಿಯಲ್ಲಿ ಮಾಡಿದ್ದ ತಿತಿಮತಿ ಗೋಣಿಕೊಪ್ಪ ವಿರಾಜಪೇಟೆ ಮುಖ್ಯ ರಸ್ತೆ ಮಾತ್ರ ಉತ್ತಮ ರೀತಿಯಲ್ಲಿ ಇದೆ. ಇತ್ತೀಚಿನ ಬಂದ ಶಾಸಕರು ಯಾವುದೇ ಮುಖ್ಯ ರಸ್ತೆಗೆ ಅನುದಾನ ತಂದ್ದಿಲ್ಲ. ಒಂದು ವೇಳೆ ತಂದ್ದಿದ್ದರೆ ಮುಖ್ಯ ರಸ್ತೆಯ ಕಾಮಗಾರಿ ಆಗುತ್ತಿತ್ತು. ಸದ್ಯಕ್ಕೆ ಕ್ಷೇತ್ರದ ಎಲ್ಲಾ ಕಡೆ ರಸ್ತೆ ಕಾಮಗಾರಿ ಕೂಡಲೇ ಆರಂಭಿಸುವಂತೆ ಇದೇ ಸಂದರ್ಭ ಒತ್ತಾಯಿಸಿದರು.
ನಾನು ತಂದ ಅನುದಾನ ಮಾತ್ರ ಬಿಡುಗಡೆ ಅಗಿದೆ ಅಷ್ಟೇ. ನೂತನ ಶಾಸಕರು ಮುಖ್ಯ ರಸ್ತೆಗೆ ಯಾವುದೇ ಅನುದಾನ ಇದುವರೆಗೂ ತರಲಿಲ್ಲ ಎಂದು ಕೆ.ಜಿ ಬೊಪಯ್ಯ ಸ್ಪಷ್ಟಪಡಿಸಿದರು.
ಕೊಡಗಿನ ಎಲ್ಲಾ ಗ್ರಾಮಾಂತರ ರಸ್ತೆಗೆ ತಂದ ಅನುದಾನವನ್ನು ಕಾಂಗ್ರೆಸ್ ಕಾರ್ಯಕರ್ತರು ಅವರ ವ್ಯವಸ್ಥೆಗೆ ತಕ್ಕಂತೆ ಬಳಸಿಕೊಂಡಿದ್ದಾರೆ. ಅದು ಕೂಡ ದೊಡ್ಡ ಸಮಸ್ಯೆ ಆಗಿದೆ ಎಂದು ಜಿಲ್ಲಾ ಅದ್ಯಕ್ಷರಾದ ರವಿ ಕಾಳಪ್ಪ ತಿಳಿಸಿದರು.
ಪ್ರತಿಭಟನೆಯಲ್ಲಿ ವಿರಾಜಪೇಟೆ ನಗರ ಹಾಗೂ ಗ್ರಾಮಾಂತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮಾಜಿ
ಸದಸ್ಯರಾದ ಅಚ್ಚಪಂಡ ಮಹೇಶ್.ಶಶಿ ಸುಬ್ರಹ್ಮಣಿ,ಮಂಡಳ ಅದ್ಯಕ್ಷರಾದ ಸುವಿನ್ ಗಣಪತಿ, ಚೆಪ್ಪುಡಿರ ರಾಕೇಶ್ ವಿರಾಜಪೇಟೆ ಪಟ್ಟಣ ಪಂಚಾಯತಿ ಬಿಜೆಪಿ ಮಾಜಿ ಸದಸ್ಯರು, ಹಾಗೂ ಶಕ್ತಿ ಕೇಂದ್ರದ ಪ್ರಮುಖರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.












