ಇತ್ತೀಚಿನ ಸುದ್ದಿ
ಹದಗೆಟ್ಟ ರಸ್ತೆಯಲ್ಲಿ ಅವಘಡಗಳ ಸರಮಾಲೆ: ಮಾಕುಟ್ಟಾ ರಸ್ತೆ ಮದ್ಯ ಲಾರಿ ಮಗುಚ್ಚಿ ಸುಗಮ ಸಂಚಾರಕ್ಕೆ ಅಡಚಣೆ
23/11/2025, 17:19
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕರ್ನಾಟಕ ಕೇರಳ ರಾಜ್ಯ ಹೆದ್ದಾರಿ, ವಿರಾಜಪೇಟೆ ತಾಲ್ಲೂಕಿನ ಪೆರುಂಬಾಡಿ ಗೇಟಿನಿಂದ 15 ಕಿಲೋಮೀಟರ್ ದೂರದ ರಕ್ಷಿತಾ ಅರಣ್ಯದ ನಡುವೆ ಹಾದು ಹೋಗುವ ಮುಖ್ಯರಸ್ತೆಯಲ್ಲಿ ನಿನ್ನೆ ರಾತ್ರಿ ಸರಕು ತುಂಬಿದ ಲಾರಿ ಒಂದು ರಸ್ತೆಗೆ ಮಗುಚಿ ಇರುವ ಘಟನೆ ನಡೆದಿದೆ.
ಘಟನೆಯಿಂದ ಯಾವುದೇ ಪ್ರಾಣ ಹಾನಿ ಆಗಿರುವುದಿಲ್ಲ. ಮಾಕುಟ್ಟ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ಕಳೆದ ಒಂದುವರೆ ತಿಂಗಳ ಹಿಂದೆ ಲೋಕೋಪಯೋಗಿ ಸಚಿವರು ಈ ರಸ್ತೆಯ ದುರಸ್ತಿ ಕಾರ್ಯಕ್ಕೆ ಚಾಲನೆ ನೀಡಿದರು. ಆದರೆ ಈ ರಸ್ತೆಯಲ್ಲಿ ಈ ಹಿಂದೆ ಶೇಖರಿಸಿ ಇಡಲಾದ ಜಲ್ಲಿಕಲ್ಲುಗಳು ಮಾತ್ರ ಕಾಣುತ್ತಿದ್ದು ರಸ್ತೆ ಕಾಮಗಾರಿ ಆರಂಭಗೊಂಡಿಲ್ಲ. ಇಲ್ಲಿ ಸಂಚರಿಸುವ ಭಾರಿ ವಾಹನಗಳು ಸಂಕಟ ಎದುರಿಸುತ್ತಿವೆ.ಪೆರುoಬಾಡಿಯಿಂದ 22 km ದೂರದ ಮಾಕುಟ್ಟ ಗೇಟ್ ತಲುಪಲು ಇದೀಗ ಎರಡು ತಾಸು ಸಮಯ ಬೇಕಾಗಿದೆ. ಒಂದೆಡೆ ಸರ್ಕಾರ ಅನುದಾನ ಬಿಡುಗಡೆ ಮಾಡಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದರು ಕಾಮಗಾರಿ ಮಾತ್ರ ಆರಂಭಗೊಂಡಿಲ್ಲ. ಸದ್ಯಕ್ಕೆ ಗುಳಿ ಮುಚ್ಚುವ ಕಾರ್ಯವಾದರೂ ನಡೆಸಬಹುದಿತ್ತಲ್ಲ ಎಂಬುದು ಇಲ್ಲಿ ಸಂಚರಿಸುವವರ ಅಭಿಪ್ರಾಯವಾಗಿದೆ.













