ಇತ್ತೀಚಿನ ಸುದ್ದಿ
ಕೇರಳದಿಂದ ಮಡಿಕೇರಿಗೆ ಅಕ್ರಮ ಕೆಂಪು ಕಲ್ಲು ಸಾಗಾಟ: ಸುಳ್ಯ ಪೊಲೀಸರಿಂದ ಲಾರಿ ವಶ
22/11/2025, 19:24
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳದಿಂದ ಮಡಿಕೇರಿ ಕಡೆಗೆ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಕೆಂಪು ಕಲ್ಲು ಸಾಗಿಸುತ್ತಿದ್ದ ಲಾರಿಯನ್ನು ಸುಳ್ಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೇರಳದ ಮಿಂಚಿನ ಪದವು ಎಂಬಲ್ಲಿಂದ ಸುಮಾರು 400 ಕೆಂಪು ಕಲ್ಲುಗಳನ್ನು ಲಾರಿ ಯಲ್ಲಿ ಸಾಗಿಸುತ್ತಿರುವ ಬಗ್ಗೆ ಮಾಹಿತಿ ಅರೆತ ಪೊಲೀಸರು ಕಲ್ಲುಗುಂಡಿ ಹೊರ ಠಾಣೆಯ ಬಳಿ ಪೊಲೀಸರು ವಾಹನ ತಡೆದು ತಪಾಸಣೆ ನಡೆಸಿದ ವೇಳೆ ಪರವಾನಗಿ ಇಲ್ಲದಿರುವುದು ಬೆಳಕಿಗೆ ಬಂದಿದೆ. ತಕ್ಷಣವೇ ಕಲ್ಲುಗುಂಡಿ ಠಾಣಾ ಸಿಬ್ಬಂದಿ ಸುಳ್ಯ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಠಾಣೆಯ ಪಿ ಎಸ್ ಐ ಸರಸ್ವತಿ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿ ಲಾರಿ ಚಾಲಕ ಸೈಯದ್ ಮಾತ್ತು ವಾಹನ ಮಾಲೀಕ ಶೇಷಪ್ಪ ಪೂಜಾರಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಲಾರಿ ಯನ್ನು ವಶಕ್ಕೆ ಪಡೆಯಲಾಗಿದೆ.













