11:50 AM Wednesday19 - November 2025
ಬ್ರೇಕಿಂಗ್ ನ್ಯೂಸ್
ಕೊಡಗಿನಲ್ಲಿ ಹೆಚ್ಚಾಗುತ್ತಿರುವ ಬೀದಿ ನಾಯಿ ಹಾವಳಿ ತಡೆಗೆ ಜಿಲ್ಲಾಡಳಿತ ಕ್ರಮ: ಶ್ವಾನಗಳ ಸ್ಥಳಾಂತರಕ್ಕಾಗಿ… Mandya | ಶಿವನಸಮುದ್ರ: 4 ದಿನಗಳಿಂದ ನಾಲೆಯಲ್ಲಿ ಸಿಲುಕಿದ್ದ ಮರಿಯಾನೆಯ ರಕ್ಷಣೆ Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ…

ಇತ್ತೀಚಿನ ಸುದ್ದಿ

ಮೈಸೂರು: ರೈತನ ಬಲಿ ಪಡೆದ ಹುಲಿ ಸೇರಿ 32 ದಿನಗಳಲ್ಲಿ 8 ಮರಿ ಸಹಿತ 15 ವ್ಯಾಘ್ರಗಳ ಸೆರೆ

19/11/2025, 11:49

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnataka@gmail.com

ಕಳೆದ 32 ದಿನಗಳಲ್ಲಿ 7 ದೊಡ್ಡ ಹುಲಿಗಳು ಹಾಗೂ 8 ಮರಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಡಿಸಿಎಫ್ ಪರಮೇಶ್ವರ್ ತಿಳಿಸಿದ್ದಾರೆ.
ಇತ್ತೀಚಿಗೆ ಮುಳ್ಳೂರು ತಾಲೂಕಿನ ರೈತರ ಮೇಲೆ ದಾಳಿ ಮಾಡಿದ್ದ ಹೆಣ್ಣು ಹುಲಿ ಹಾಗೂ ಮೂರು ಮರಿಗಳನ್ನು ಅರಣ್ಯಾಧಿಕಾರಿಗಳು ಸೆರೆಹಿಡಿಯಲಾಗಿದ್ದು,ಈ ಹುಲಿ ರೈತನ ಬಲಿ ಪಡೆದ ಬಳಿಕ ದನಗಳನ್ನು ಕೊಂದಿದ್ದು, ಗ್ರಾಮದ ಸುತ್ತಮುತ್ತ ಸಂಚಾರ ನಡೆಸುವ ಗ್ರಾಮ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಇದನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ ಬಳಿಕ ಇದೀಗ ಈ ಹುಲಿ ಸೆರೆಸಿಕ್ಕಿದೆ.
ಹುಲಿಗಳ ಸೆರೆ ಕಾರ್ಯಾಚರಣೆ ಮತ್ತು ಜನರಿಗೆ ಸಲಹೆ ನೀಡಿದ ಡಿಸಿಎಫ್​, ಈ ಹುಲಿ ಬಗ್ಗೆ ಜನರಲ್ಲಿ ಆತಂಕವನ್ನು ಹೊಡೆದೋಡಿಸುವ ಜೊತೆಗೆ ಹುಲಿ ಸೆರೆ ಕಾರ್ಯಾಚರಣೆ ಹಾಗೂ ಕಾಡಂಚಿನ ಗ್ರಾಮಗಳ ಜನರಿಗೆ ಅರಿವು ಮೂಡಿಸುವ ಯತ್ನವನ್ನು ಅರಣ್ಯಾಧಿಕಾರಿಗಳು ನಡೆಸಿದ್ದರು. ಅಕ್ಟೋಬರ್ 16ರಂದು ಬಡಗಲಪುರದ ರೈತನ ಮೇಲೆ ನಡೆದ ಹುಲಿ ದಾಳಿಯಿಂದ ಶುರುವಾದ ಬೇಟೆ ಅಲ್ಲಿಂದ ಇಲ್ಲಿಯವರಗೆ 3 ಜನ ರೈತರನ್ನು ಬಲಿ ಪಡೆದಿದೆ. ದಾಳಿ ನಡೆಸಿದ ಹುಲಿ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ಇರುವ ಸುಮಾರು 7 ದೊಡ್ಡ ಹುಲಿ ಹಾಗೂ 8 ಮರಿಗಳು ಸೇರಿದಂತೆ ಒಟ್ಟು 15 ಹುಲಿಗಳನ್ನು ಸೆರೆ ಹಿಡಿಯಲಾಗಿದೆ ಎಂದು ಮಾಹಿತಿ ನೀಡಿದರು.
ನವೆಂಬರ್ 18 ರಂದು ಮುಳ್ಳೂರು ರೈತರ ಮೇಲೆ ದಾಳಿ ಮಾಡಿದ ಹೆಣ್ಣು ಹುಲಿ ಹಾಗೂ ಮೂರು ಮರಿಗಳನ್ನು ಇಂದು ಸೆರೆಹಿಡಿಯಲಾಗಿದೆ. ಸೆರೆ ಸಿಕ್ಕ ಹುಲಿಗಳೆಲ್ಲವೂ ಆರೋಗ್ಯವಾಗಿವೆ ಎಂದು ತಿಳಿಸಿದರು.
*ಕಾಡಿನಿಂದ ಹುಲಿ ಹೊರಬರಲು ಕಾರಣ ಏನು?*: ಕಾಡಂಚಿನ ಗ್ರಾಮಗಳಲ್ಲಿ ಹುಲಿ ಬರಲು ಪ್ರಮುಖ ಕಾರಣಗಳು ಹಲವು ಇವೆ. ಅಂಗವೈಕಲ್ಯಗೊಂಡ ಹುಲಿ ಸುಲಭ ಆಹಾರ ಸಿಗುವ ಕಾಡಂಚಿನ ಗ್ರಾಮಗಳಿಗೆ ಬರುತ್ತದೆ. ಪ್ರದೇಶವಾರು ಹೋರಾಟದಲ್ಲಿ ಸೋತ ಹುಲಿಗಳು ಕಾಡಂಚಿನ ಗ್ರಾಮಗಳತ್ತ ಸುಲಭವಾಗಿ ಸಿಗುವ ಸಾಕು ಪ್ರಾಣಿಗಳ ಬೇಟೆಗಾಗಿ ಬರುತ್ತವೆ. ಮುಖ್ಯವಾಗಿ ಹೆಣ್ಣು ಹುಲಿ ತನ್ನ ಮರಿಗಳೊಂದಿಗೆ ಕಾಡಂಚಿನ ಗ್ರಾಮಗಳಲ್ಲಿ ಆಹಾರ ಆರಸಿ ಬರುವುದು ಸಹಜ ಎಂದು ಹೇಳಿದರು.
ಸೆರೆ ಹಿಡಿಯಲಾದ 7 ದೊಡ್ಡ ಹುಲಿಗಳು ಹಾಗೂ ಮರಿಗಳನ್ನು ಮೈಸೂರಿನ ಕೂರ್ಗಳಿಯ ಪುನವರ್ಸತಿ ಕೇಂದ್ರಕ್ಕೆ ಮತ್ತೆ ಹುಲಿ ಮರಿಗಳನ್ನು ಬನ್ನೇರುಘಟ್ಟಕ್ಕೆ ಹಾಗೂ ಮತ್ತೆ ಕೆಲವು ತಾಯಿ ಮತ್ತು ಮರಿಗಳನ್ನು ಕಾಡಿಗೆ ಬಿಡಲಾಗುತ್ತದೆ. ಸೆರೆ ಸಿಕ್ಕ ಹುಲಿಯಲ್ಲಿ ಒಂದು ಮಾತ್ರ ಗಾಯಗೊಂಡಿದ್ದು ಅದಕ್ಕೆ ಚಿಕಿತ್ಸೆ ನೀಡಲಾಗಿದೆ ಎಂದು ಅವರು ವಿವರಿಸಿದರು.

*ರೈತರಿಗೆ ಸಂತೋಷವಾಗಿದೆ:* ಕಾರ್ಯಾಚರಣೆಯಲ್ಲಿ ಒಂದು ಹುಲಿ ಹಾಗೂ ಮೂರು ಮರಿಗಳನ್ನು ಸೆರೆಹಿಡಿಯಲಾಗಿದೆ. ಇದರಿಂದ ರೈತರಿಗೆ ಸಂತೋಷವಾಗಿದೆ. ಜೊತೆಗೆ ರೈತರಿಗೆ ತಿಳುವಳಿಕೆ ಹಾಗೂ ಮುನ್ನೆಚ್ಚರಿಕೆ ವಹಿಸುವಂತೆ ಜಾಗೃತಿ ಮೂಡಿಸಲಾಗಿದೆ. ಜಾನುವಾರು ಮೇಯಿಸಲು ಹೋಗುವ ಜನರು ತಮ್ಮ ಜಾನುವಾರುಗಳ ಮೇಲೆ ದಾಳಿಯಾದಾಗ ಅದನ್ನು ಬಿಡಿಸುವ ಪ್ರಯತ್ನ ಮಾಡಬೇಡಿ ಎಂದು ರೈತರಿಗೆ ಸೂಚನೆ ನೀಡಲಾಗಿದೆ. ಕಳೆದ 32 ದಿನಗಳಿಂದ 15 ಹುಲಿ ಮತ್ತು ಮರಿಗಳನ್ನು ಸೆರೆ ಹಿಡಿದಿರುವುದರಿಂದ ರೈತರಿಗೆ ಸಂತೋಷವಾಗಿದೆ ಎಂದು ಡಿಸಿಎಫ್​ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು