9:26 PM Monday17 - November 2025
ಬ್ರೇಕಿಂಗ್ ನ್ಯೂಸ್
Kodagu | ಪಿರಿಯಾಪಟ್ಟಣ: ಅತ್ತೆ ಮನೆಗೆ ಬಂದು ಈಜಲು ಹೋದ ಬಾಲಕ ನೀರಿನಲ್ಲಿ… Madikeri | ಕಾಡಾನೆ ದಾಳಿಗೆ ಸಿಲುಕಿದ್ದ ಟೀ ಅಂಗಡಿಯಲ್ಲಿ ಆಕಸ್ಮಿಕ ಬೆಂಕಿ ಅನಾಹುತ:… ಪೊಲೀಸರ ಕಟ್ಟುನಿಟ್ಟಿನ ಕ್ರಮಕ್ಕೆ ಸವಾಲು: ಚಾರ್ಮಾಡಿ ಅಡ್ಡದಾರಿಯಲ್ಲಿ ಅಳವಡಿಸಿದ್ದ 12 ಅಡಿ ಗೇಟ್‌… ಡಿಕ್ಕಿ ಹೊಡೆದ ಕಾರಿನ ಮೇಲೆಯೇ ಬಿದ್ದ ಕಾಡಾನೆ: ಕಾರಿನ ಮುಂಭಾಗ ಸಂಪೂರ್ಣ ಜಖಂ;… ಬೆಂಗಳೂರು: ಮತ ಕಳ್ಳತನ ವಿರುದ್ಧ ಯುವ ಕಾಂಗ್ರೆಸ್ ಬೃಹತ್ ಪ್ರತಿಭಟನೆ ಬೆಳಗಾವಿ ಮೃಗಾಲಯದಲ್ಲಿ 19 ಜಿಂಕೆಗಳ ಸಾವು: ತನಿಖೆಗೆ ಅರಣ್ಯ ಸಚಿವ ಈಶ್ವರ ಖಂಡ್ರೆ… ಮೂಡಿಗೆರೆಯಲ್ಲಿ 80 ಮೂಟೆ ಕಾಳುಮೆಣಸು ಕಳ್ಳತನ ಪ್ರಕರಣ: ಮಹಿಳಾ ಆರೋಪಿ ಬಂಧನ, ಮೂವರು… ಸಿಎಂ ಕಾನೂನು ಸಲಹೆಗಾರ ಪೊನ್ನಣ್ಣ ವಿರುದ್ಧ ಅವಾಚ್ಯ ಪದ ಬಳಕೆ: ಆರೋಪಿ ವಿರುದ್ಧ… Kodagu | ಮಡಿಕೇರಿ ಸಮೀಪದ ಚೆಂಬು ಗ್ರಾಮದಲ್ಲಿ ಮನೆಗಳ್ಳತನ ಪ್ರಕರಣ: ಇಬ್ಬರ ಬಂಧನ ವೈಚಾರಿಕ-ವೈಜ್ಞಾನಿಕ ಮನೋಭಾವದ ಮಕ್ಕಳ ಮೇಲೆ ದೇಶದ ಭವಿಷ್ಯ ನಿಂತಿದೆ: ಸಿಎಂ ಸಿದ್ದರಾಮಯ್ಯ

ಇತ್ತೀಚಿನ ಸುದ್ದಿ

ಬಸವಣ್ಣ ಯುನಿವರ್ಸಲ್ ವ್ಯಕ್ತಿ, ಅದಕ್ಕೆ ಅವರನ್ನು ಜಗಜ್ಯೋತಿ ಎಂದು ಕರೆಯೋದು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

17/11/2025, 19:22

ಬೆಂಗಳೂರು(reporterkarnataka.com): ಬಸವಣ್ಣ ಯುನಿವರ್ಸಲ್ ವ್ಯಕ್ತಿ, ಅದಕ್ಕೆ ಅವರನ್ನು ಜಗಜ್ಯೋತಿ ಬಸವೇಶ್ವರ ಎಂದು ಕರೆಯುತ್ತಾರೆ. ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಹಾಗೂ ರಮಣಶ್ರೀ ಪ್ರತಿಷ್ಠಾನ ಜಂಟಿಯಾಗಿ ಏರ್ಪಡಿಸಿದ್ದ ರಮಣಶ್ರೀ ಶರಣ ಪ್ರಶಸ್ತಿ ಪ್ರದಾನ ಹಾಗೂ ಷಡಕ್ಷರಿ ಅವರ ಕ್ಷಣ ಹೊತ್ತು ಅಣಿ ಮುತ್ತು ಭಾಗ 15 ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.


ಬಸವಣ್ಣ ಯುನಿವರ್ಸಲ್ ವ್ಯಕ್ತಿ, ಅದಕ್ಕೆ ಅವರನ್ನು ಜಗಜ್ಯೋತಿ ಬಸವೇಶ್ವರ ಎಂದು ಕರೆಯುತ್ತಾರೆ. ಜಗತ್ತಿಗೆ ಜ್ಯೋತಿ ಕೊಡುವ ಶಕ್ತಿ ಬಸವಣ್ಣ, ನಾವ್ಯಾರು ದೇವರಾಗಲು ಬಂದಿಲ್ಲ. ದೇವರಾಗಬಾರದು. ಬಸವಣ್ಣನ ಹಾಗೇ ಒಳ್ಳೆಯ ಮಾನವ ಆಗಬೇಕು. ಸಂಸಾರದಲ್ಲಿರುವ ಮಾನವ ಅತ್ಯಂತ ಸಾರ್ಥಕ ಬದುಕು ನಡೆಸಿದರೆ. ಅವನು ದೇವರ ಸರಿ ಸಮಾನ ಆಗುತ್ತಾನೆ. ನಾವು ಪರಿಪೂರ್ಣ ಆಗಲು ಇಡೀ ಜೀವನ ಬೇಕು. ನನ್ನ ಜಿವನದ ಹುಟ್ಟಿದ ಗುರಿ, ಕಾರಣ ಎನು, ಅಡಚಣೆ ಏನು ಅದನ್ನು ಹೇಗೆ ಸಾಧಿಸಬೇಕು ಎಂದು ತಿಳಿಯಬೇಕು ಅಂತಹ ಗುರಿಯನ್ನು ಷಡಕ್ಷರಿಯವರು ಸಾಧಿಸಿದ್ದಾರೆ ಎಂದು ಹೇಳಿದರು.
ಶರಣ ಸಾಹಿತ್ಯ ದೊಡ್ಡ ಪ್ರಮಾಣದಲ್ಲಿ ಬೆಳೆದಿದ್ದರೆ ಅದಕ್ಕೆ ಗೋ.ರು. ಚನ್ನಬಸಪ್ಪ ಅವರು ಕಾರಣ, ಅವರ ಕಾರ್ಯದ ಬಗ್ಗೆ ಅವರಿಗೆ ಕನ್ನಡ ನಾಡು, ಶರಣ ಭಕ್ತರು ಚಿರ ಋಣಿಯಾಗಿದ್ದಾರೆ ಎಂದರು.
ಮೂಲಭೂತ ಬದಲಾವಣೆ ಅದು ಕಾಲಾತೀತವಾಗಿರುತ್ತದೆ. ಸಮಯ ಮತ್ತು ಗಡಿ ಮೀರಿರುವುದು. ಇವತ್ತು ಶರಣ ಸಾಹಿತ್ಯ ಇಲ್ಲದಿದ್ದರೆ ಇಷ್ಟು ದೊಡ್ಡ ವೈಚಾರಿಕತೆ, ಸಮಾನತೆ ವಿಚಾರ ಚರ್ಚೆಯಾಗುತ್ತಿರಲಿಲ್ಲ. ಬಸವಣ್ಣ, ಬುದ್ದ, ಮಹಾವೀರ ಮಹಮದ್ ಪೈಗಂಬರ ಇವರೆಲ್ಲ ಒಂದು ಗುಂಪು, ಸಂಸ್ಥೆಯಲ್ಲ. ಫ. ಗು ಹಳಕಟ್ಟಿಯವರು ಬಿಎಲ್ ಡಿ ಸಂಸ್ಥೆಯನ್ನು ಹುಟ್ಡು ಹಾಕಿದ್ದರು. ಕೇವಲ ಆಧ್ಯಾತ್ಮಿಕ ಅಲ್ಲ, ಥಾಮಸ್ ಅಲ್ವಾ ಎಡಿಸನ್ಸ್ ಎಲೆಕ್ಟ್ರಿಕ್ಸ ನ್ನು ಕಂಡು ಹಿಡಿದಾಗ ದೊಡ್ಡ ಲ್ಯಾಬೋರೇಟರಿ ಇರಲಿಲ್ಲ. ಕ್ರಾಂತಿಯಾಗಬೇಕಾದರೆ ಬಹಳ ಜನ ಬೇಕು. ಕ್ರಾಂತಿಯಾಗುವವರೆಗೂ ಎಲ್ಲರೂ ಒಟ್ಟಾಗಿ ಇರುತ್ತಾರೆ. ಕ್ರಾಂತಿ ನಂತರ ಒಗ್ಗಟ್ಟು ಉಳಿಸುವುದು ಕಷ್ಟ. ಫ್ರೆಂಚ್ ಕ್ರಾಂತಿ, ರಷ್ಯನ ಕ್ರಾಂತಿ, ನಮ್ಮ ಸ್ವಾತಂತ್ರ್ಯ ಹೋರಾಟವಾಗಲಿ ಎಲ್ಲವನ್ನೂ ಒಟ್ಟಾಗಿ ಹೋರಾಡಿದ್ದೇವೆ. ಅದನ್ನು ನಿಭಾಯಿಸುವ ವಿಚಾರದಲ್ಲಿ ಭಿನ್ನ ಅಭಿಪ್ರಾಯ ಹೊಂದಿದ್ದೇವೆ ಎಂದರು.

*ಷಡಕ್ಷರಿ ಹೆಸರಿನಲ್ಲಿ ಅಕ್ಷರ ಇದೆ:*
ಇದುವರೆಗೂ ಸಾಮಾನ್ಯ ಜನರು ಶೇ. 6% ರಷ್ಟು ಬುದ್ದಿವಂತರು 9% ವಿಜ್ಞಾನಿಗಳು ಶೇ 20% ಮಿದುಳು ಬಳಕೆ ಮಾಡುತ್ತಾರೆ‌ ಇನ್ನೂ ಶೇ 80% ರಷ್ಟು ಮೆದಳು ಬಳಕೆ ಮಾಡುವುದಿಲ್ಲ. ಷಡಕ್ಷರಿ ಅವರ ಜೀವನವನ್ನು ಸೂಕ್ಷ್ಮವಾಗಿ ನೋಡಿದಾಗ ಸಾಮಾನ್ಯ ಕುಟುಂಬದಿಂದ ಬಂದವರು. ಕಷ್ಟಪಟ್ಟು ಮೇಲೆ ಬಂದವರು. ಅವರು ಎಲ್ಲರ ಪ್ರೀತಿಯನ್ನು ಗಳಿಸಿದರು. ನಂತರ ಹಣ ಗಳಿಸಿದರು. ಷಡಕ್ಷರಿ ಅವರು ಬಹಳ ಆತ್ಮೀಯರು ನನಗೆ ಅವರ ಹೃದಯದಲ್ಲಿ ನನಗೆ ಸ್ಥಾನ ಇದಿಯಾ ಅಂತ ನೋಡಲಿಕ್ಕೆ ಅದನ್ನು ಪರೀಕ್ಷೆ ಮಾಡಿಸಿದೆ. ನನಗೆ ಕುತೂಹಲ ಡಾ. ವಿವೇಕ ಜವಳಿ ಅವರು ಅವರ ಹೃದಯಲ್ಲಿ ಬೇರೆ ಯಾರೂ ಇಲ್ಲ. ಅವರ ಮನೆಯವರು ಮಾತ್ರ ಇದ್ದಾರೆ ಎಂದರು. ಅವರ ಬದುಕು ಬಹಳ ಸರಳವಿದೆ‌. ಸೆನ್ಸ್ ಆಪ್ ಹ್ಯೂಮರ್ ಅವರಿಗೆ ಅದ್ಬುತವಾಗಿದೆ. ಹ್ಯೂಮರನ್ನು ಅನುಭವಿಸುವ, ಹಂಚುವ ಗುಣ ಇದ್ದರೆ ಎನರ್ಜಿಯಾಗಿ ಜೀವನ ನಡೆಸುತ್ತಾರೆ. ತಮ್ಮ ವೃತ್ತಿಯಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಅದಕ್ಕಿಂತ ದೊಡ್ಡ ಸಾಧನೆ ಇಷ್ಟೆಲ್ಲ ಜನರನ್ನು ಗಳಿಸಿದ್ದಾರೆ. ಷಡಕ್ಷರಿ ಅವರ ಹೆಸರಿನಲ್ಲಿಯೇ ಅಕ್ಷರ ಇದೆ. ಅವರ ಕ್ಷಣ ಹೊತ್ತು ಅಣಿ ಮುತ್ತು ಅದನ್ನು ಓದಿದವರಿಗೆ ಗೊತ್ತು ಒಂದು ವಿಚಾರವನ್ನು ಹೇಳುವ ಶೈಲಿಯಲ್ಲಿ ಜನರನ್ನು ಆಕರ್ಷಿಸಬೇಕು. ವಚನ ಸಾಹಿತ್ಯ ಯಾಕೆ ಅಷ್ಟು ಜನಪ್ರಿಯವಾಯಿತು ಅಂದರೆ ಶರಣರು ಬದುಕಿಗೆ ಹತ್ತಿರವಾಗಿರುವ ವಿಚಾರ ಅತ್ಯಂತ ಪ್ರೀತಿ ಯಿಂದ ಮಾರ್ಮಿಕವಾಗಿ ಕಠೋರವಾಗಿ ಹೇಳಿದ್ದಾರೆ. ವಚನಕಾರರು ಬದುಕಿನ ಚಿಂತನೆ ಮಾಡಿದ್ದಾರೆ ಎಂದರು.
ಆಧುನಿಕ ಜಗತ್ತಿಗೆ ವಚನದ ರೀತಿಯಲ್ಲಿ ಪರಿಣಾಮಕಾರಿಯಾಗಿ ಉದಾಹರಣೆಗಳ ಸಮೇತ ಅದ್ಬುತವಾಗಿ ಹೇಳಿರುವ ಕನ್ನಡ ಸಾಹಿತ್ಯ ಷಡಕ್ಷರಿ ಅವರದು.
ಇವರು ಬರೆದಿರುವುದು ಜಿವನಕ್ಕೆ ಬಹಳ ಹತ್ತಿರವಾಗಿದೆ. ಇವರ ಬರಹ ಓದಿ ಬಹಳ ಜನರು ಜೀವನ ಬದಲಾಯಿಸಿಕೊಂಡಿದ್ದಾರೆ. ಅವರ ಹೆಸರಿನಲ್ಲಿ ಅಕ್ಷರ ಇರುವುದಕ್ಕೆ ಸಾರ್ಥಕತೆಯನ್ನು ಷಡಕ್ಷರಿಯವರು ಮಾಡಿದ್ದಾರೆ ಎಂದು ಹೇಳಿದರು.
ಪತ್ರಕರ್ತ ವಿಶ್ವೇಶ್ವರ ಭಟ್ ಅವರು ವಿದೇಶಕ್ಕೆ ಹೋದಾಗ ಅಲ್ಲಿಯ ಜೀವನ ಶೈಲಿಯ ಬಗ್ಗೆ ಪುಸ್ತಕ ಬರೆಯುತ್ತಾರೆ. ಇಡಿ ಜಗತ್ತನ್ನು ಅತ್ಯಂತ ಸರಳವಾಗಿ ಕನ್ನಡಿಗರಿಗೆ ಪರಿಚಯಿಸಿದವರು. ವಿಶ್ವೇಶ್ವರ ಭಟ್ ಅವರು ಎಂದು ಹೇಳಿದರು.
ಈ ಸಂದರ್ಭದಲ್ಲಿ ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ಬೃಹತ್ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್, ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸಿ. ಸೋಮಶೇಖರ, ಹಿರಿಯ ಸಾಹಿತಿ ಗೋ.ರು. ಚನ್ನಬಸಪ್ಪ, ಪುಸ್ತಕದ ಕೃತಿಕಾರ ಷಡಕ್ಷರಿ, ಪತ್ರಕರ್ತ ವಿಶ್ವೇಶ್ವರ ಭಟ್ ಹಾಜರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು