ಇತ್ತೀಚಿನ ಸುದ್ದಿ
ಸಂಪಾಜೆ: ಕೆಎಸ್ಸಾರ್ಟಿಸಿ ಬಸ್ಸಿನ ಟೈಯರ್ ನಲ್ಲಿ ಆಕಸ್ಮಿಕ ಬೆಂಕಿ; ಅಪಾಯದಿಂದ ಪಾರು
12/11/2025, 21:40
ಸುಳ್ಯ(reporterkarnataka.com): ಮಡಿಕೇರಿಯಿಂದ ಸುಳ್ಯ ಕಡೆಗೆ ತೆರಳುತ್ತಿದ್ದ ಸಾರಿಗೆ ಬಸ್ಸಿನ ಹಿಂಬದಿಯ ಚಕ್ರದಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು ಆತಂಕ ಮೂಡಿಸಿದ ಘಟನೆ ನಡೆದಿದೆ. ಮಡಿಕೇರಿಯಿಂದ ಬಸ್ ಹೋರಾಟಗಿದ್ದ ಸಂದರ್ಭದಿಂದಲೇ ಬಸ್ ನಲ್ಲಿ ಪ್ರಯಾಣಿಕರಿಗೆ ಸುಟ್ಟ ವಾಸನೆ ಬರುತ್ತಿದ್ದು, ಈ ಬಗ್ಗೆ ಚಾಲಕ ಹಾಗೂ ನಿರ್ವಾಹಕರಿಗೆ ತಿಳಿಸಿದ್ದಾರೆ, ಆದರೆ ಇದಕ್ಕೆ ಕ್ಯಾರೇ ಅನ್ನದ ಚಾಲಕ ಸಂಪಾಜೆ ತಲುಪುತ್ತಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು, ಆತಂಕ ಸೃಷ್ಟಿ ಉಂಟು ಮಾಡಿದ್ದು ಪ್ರಯಾಣಿಕರು ಬಸ್ ನಿಂದ ಇಳಿದು ತಮ್ಮ ಆಕ್ರೋಶ ವ್ಯಕ್ತ ಪಡಿಸಿದರು. ಮತ್ತೆ ಸ್ವತಃ ಪ್ರಯಾಣಿಕರು ಬೆಂಕಿ ನಂದಿಸಲು ಮುಂದಾದರು. ಸದ್ಯ ಪ್ರಯಾಣಿಕರಿಗೆ ಬದಲಿ ಬಸ್ ವ್ಯವಸ್ಥೆ ಮಾಡಲಾಯಿತು.












