12:27 PM Sunday20 - April 2025
ಬ್ರೇಕಿಂಗ್ ನ್ಯೂಸ್
DCM In Dharmastala | ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಧರ್ಮಸ್ಥಳಕ್ಕೆ ಭೇಟಿ:… Chikkamagaluru | ಜನಿವಾರ ತೆಗೆಸಿದ ಪ್ರಕರಣ: ಶೃಂಗೇರಿಯಲ್ಲಿ ಪೇಜಾವರ ಸ್ವಾಮೀಜಿ ಅಸಮಾಧಾನ Gokarna | ಜನಿವಾರ ಪ್ರಕರಣ: ಸಂಘಟಿತ ಪ್ರತಿಭಟನೆಗೆ ಹೊಸನಗರ ಮಠದ ರಾಘವೇಶ್ವರ ಶ್ರೀ… ಮುಳಿಯ ಗೋಲ್ಡ್ ಆ್ಯಂಡ್ ಡೈಮಂಡ್ ಶೋರೂಮ್ ಗೆ ನಾಳೆ ಪ್ರಸಿದ್ದ ಚಲನಚಿತ್ರ ನಟ… Mangaluru | ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಬೃಹತ್ ಪ್ರತಿಭಟನೆ; ಅಡ್ಯಾರ್ ಮೈದಾನದಲ್ಲಿ… Karnataka BJP | ಕಲಬುರ್ಗಿಯಲ್ಲಿ ಬಿಜೆಪಿ ಜನಾಕ್ರೋಶ ಯಾತ್ರೆ: ಕಾಂಗ್ರೆಸ್ ತುಘಲಕ್ ದರ್ಬಾರ್… Bagalkote | ಅನುಭವ ಮಂಟಪ-ಬಸವಾದಿ ಶರಣರ ವೈಭವದ ರಥಯಾತ್ರೆ: ಸಿಎಂ ಸಿದ್ದರಾಮಯ್ಯ ಚಾಲನೆ Kolara | ಮಾವು ಸುಗ್ಗಿ ಅಂತ್ಯಕ್ಕೆ ದಿನಗಣನೆ ಆರಂಭ: ಈ ವರ್ಷ ಇಳುವರಿಯೂ… Mangaluru | ಸರಕಾರದ ಆಶಯ ಅರಿತು ಕೆಲಸ ಮಾಡಿ: ಮುಂಗಾರು ಹಂಗಾಮು ಉದ್ಘಾಟಿಸಿ… ಮಹಿಳೆ ಮೇಲೆ ಲೈಂಗಿಕ ಕಿರುಕುಳ ಹಾಗೂ ಹಲ್ಲೆ: ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ…

ಇತ್ತೀಚಿನ ಸುದ್ದಿ

ಅಜೆಕಾರು: ಸ್ಕೂಟರ್ ಗೆ ಡಿಕ್ಕಿ ಹೊಡೆದು ಪರಾರಿಯಾದ ಟವೇರಾ ವಾಹನ ಆಟೋಗೆ ಡಿಕ್ಕಿ; ರಿಕ್ಷಾ ಚಾಲಕ ಸಾವು

31/08/2021, 18:29

ಕಾರ್ಕಳ(reporterkarnataka.com): ಇಲ್ಲಿನ ಅಜೆಕಾರು ನೂಜಿಗುರಿ ಎಂಬಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ರಿಕ್ಷಾ ಚಾಲಕ ಸಾವನ್ನಪ್ಪಿದ್ದಾರೆ. ಮೃತಪಟ್ಟ ರಿಕ್ಷಾ ಚಾಲಕರನ್ನು ಅಂಡಾರು ಗ್ರಾಮದ ಬಾಳ್ಜೆ ನಿವಾಸಿ ಶೇಖರ ಮೂಲ್ಯ(58) ಎಂದು ಗುರುತಿಸಲಾಗಿದೆ.

ನೂಜಿಗುರಿ ತಿರುವಿನಲ್ಲಿ ಟವೇರಾ ಕಾರನ್ನು ಅತಿವೇಗವಾಗಿ ಚಲಾಯಿಸಿ ಆಟೋರಿಕ್ಷಾಗೆ ಡಿಕ್ಕಿದ ಪರಿಣಾಮ ಈ ದುರ್ಘಟನೆ ನಡೆದಿದೆ.

ಅಪಘಾತದಲ್ಲಿ ಗಂಭೀರ ಗಾಯಗೊಂಡ ರಿಕ್ಷಾ ಚಾಲಕ ಶೇಖರ ಮೂಲ್ಯ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಅಸುನೀಗಿದ್ದಾರೆ.

ಶೇಖರ ಮೂಲ್ಯ ಕಾಡುಹೊಳೆ ಎಂಬಲ್ಲಿಂದ ಪ್ರಯಾಣಿಕರೊಬ್ಬರನ್ನು ಅಜೆಕಾರಿಗೆ ಬಿಟ್ಟು ವಾಪಸು ಕಾಡುಹೊಳೆ ರಿಕ್ಷಾ ಸ್ಟ್ಯಾಂಡ್ ಗೆ ಬರುತ್ತಿದ್ದಾಗ ದೊಂಡೇರಂಗಡಿ ಕಡೆಯಿಂದ ಅತೀವೇಗವಾಗಿ  ಬಂದ ಟವೇರಾ ವಾಹನ ನೂಜಿಗುರಿಯ ತಿರುವಿನಲ್ಲಿ ರಸ್ತೆಯ ಬಲಬದಿಗೆ ಬಂದು ಶೇಖರ ಮೂಲ್ಯ ಚಲಾಯಿಸುತ್ತಿದ್ದ ರಿಕ್ಷಾಗೆ ರಭಸವಾಗಿ ಡಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಶೇಖರ ಅವರ ತಲೆ ಹಾಗೂ ಕಾಲಿಗೆ ತೀವೃ ಗಾಯಗಳಾಗಿದ್ದು, ರಿಕ್ಷಾ ನುಜ್ಜುಗುಜ್ಜಾಗಿದ್ದು  ಶೇಖರ ಮೂಲ್ಯ ಅವರ ದೇಹ ರಿಕ್ಷಾದೊಳಗೆ ಸಿಲುಕಿಕೊಂಡಿದ್ದು ಬಳಿಕ ಸ್ಥಳೀಯರು ಹೊರತೆಗೆದು ಆಸ್ಪತ್ರೆಗೆ ಸಾಗಿಸಲು ನೆರವಾದರು. ಅಪಘಾತವೆಸಗಿದ ಕಾರು ನಿಯಂತ್ರಣ ಕಳೆದುಕೊಂಡು ಬಲಬದಿಯ ಚರಂಡಿಗೆ ಮಗುಚಿಬಿದ್ದಿದೆ. ಕಾರಿನ ಹಿಂಬದಿಯ ಚಕ್ರ ಕಿತ್ತುಹೋಗಿದ್ದು  ಅಪಘಾತದ ತೀವ್ರತೆಗೆ ಸಾಕ್ಷಿಯಾಗಿತ್ತು.

ಟವೇರಾ ಚಾಲಕ ದೊಂಡೇರಂಗಡಿಯ ಸನಿತ್ ಶೆಟ್ಟಿ ಎಂಬಾತ ಪಡುಬಿದ್ರೆಯ ಅದಾನಿ ಕಂಪನಿಯಲ್ಲಿ ಕಾರು ಚಾಲಕನಾಗಿದ್ದು, ಸೋಮವಾರ  ತನ್ನ ಸಹೋದರಿಯ ನಿಶ್ಚಿತಾರ್ಥ ಕಾರ್ಯಕ್ರಮಕ್ಕೆಂದು ಅದೇ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಯುವತಿಯೊಂದಿಗೆ ಬಂದಿದ್ದ. ಪೆರ್ಡೂರಿನಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಮುಗಿಸಿ ವಾಪಾಸು ಪಡುಬಿದ್ರೆಗೆ ಟವೇರಾ ಕಾರಿನಲ್ಲಿ ಯುವತಿಯೊಂದಿಗೆ ತೆರಳುತ್ತಿದ್ದಾಗ ತನ್ನ ವೇಗದ ಹಾಗೂ ನಿರ್ಲಕ್ಷ್ಯತನದ ಚಾಲನೆಯಿಂದ ಅಪಘಾತವೆಸಗಿ ಪರಾರಿಯಾಗಲು ಯತ್ನಿಸಿದ್ದ. ದೊಂಡೇರಂಗಡಿಯಿಂದ ಬರುತ್ತಿದ್ದಾಗ ಅಜೆಕಾರು ಸಮೀಪದ ಗುಡ್ಡೆಯಂಗಡಿ ಎಂಬಲ್ಲಿ ಸ್ಕೂಟರಿಗೆ ಡಿಕ್ಕಿ ಹೊಡೆದು ಅಲ್ಲಿಂದ ನಿಲ್ಲಿಸದೇ ಪರಾರಿಯಾಗಲು ಯತ್ನಿಸಿ ಕಾರನ್ನು ಅತೀ ವೇಗವಾಗಿ ಓಡಿಸಿ ಅಮಾಯಕ ರಿಕ್ಷಾ ಚಾಲಕನ ಬಲಿಪಡೆದ ಕಾರು ಚಾಲಕನನ್ನ ಸ್ಥಳೀಯರು ತರಾಟೆಗೆ ತೆಗೆದುಕೊಂಡಿದ್ದು,ಈತ  ಕಂಠಪೂರ್ತಿ ಕುಡಿದು ಚಾಲನೆ ಮಾಡಿದ್ದಾನೆ ಎಂದು ಆರೋಪಿಸಿರುವ ಸ್ಥಳೀಯರು ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿದ್ದಾರೆ. ಕಾರು ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಪಘಾತ ವಲಯ: ಅಜೆಕಾರಿನ ನೂಜಿಗುರಿ ಎಂಬಲ್ಲಿನ ಅಪಾಯಕಾರಿ ತಿರುವಿನಲ್ಲಿ ಎದುರಿನಿಂದ ಬರಹ ವಾಹನಗಳು ಗೋಚರಿಸದೇ ಪದೇ ಪದೇ ಅಪಘಾತಗಳು ಸಂಭವಿಸುತ್ತಿದ್ದು, ಈ ಭಾಗದ ರಸ್ತೆಯನ್ನು ಅಗಲೀಕರಣಗೊಳಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಈ ಕುರಿತು ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ

ಜಾಹೀರಾತು