ಇತ್ತೀಚಿನ ಸುದ್ದಿ
Chikkamagaluru | ಶೃಂಗೇರಿ: ನರಹಂತಕ ಕಾಡಾನೆ ಕೊನೆಗೂ ಸೆರೆ; ಸಾಕಾನೆಯ ಮೂಲಕ ಕಾರ್ಯಾಚರಣೆ
03/11/2025, 17:58
ಸಂತೋಷ್ ಅತ್ತಿಗೆ ಚಿಕ್ಕಮಗಳೂರು
info.reporterkarnataka@gmail.com
ಶೃಂಗೇರಿಯಲ್ಲಿ ಇಬ್ಬರನ್ನು ಬಲಿ ಪಡೆದ ಕಾಡಾನೆಯನ್ನು ಕೊನೆಗೂ ಸೆರೆ ಹಿಡಿಯಲಾಗಿದೆ.
ಸೆರೆ ಹಿಡಿಯಲು ಬಂದಿದ್ದ ಗಜಪಡೆಯನ್ನು ಒಂಟಿ ಸಲಗ
ಗರ್ವಭಂಗವಾಗುವಂತೆ ಮಾಡಿತು. ಸೆರೆ ಹಿಡಿಯಲು ಬಂದಿದ್ದ ಸಾಕಾನೆಗಳ ಮುಂದೆ ಒಂಟಿ ಸಲಗದ ರಾಜಗಾಂಭೀರ್ಯ ನಡಿಗೆ ಹಾಕಿತು. ನನ್ನ ನೀನು ಗೆಲ್ಲಲಾರೆ ಎಂದು ಒಂಟಿ ಸಲಗ ಲುಕ್ ನೀಡಿತು. ಸಾಕಾನೆಗಳಿದ್ದ ಕ್ಯಾಂಪ್ ಮುಂದೆಯೇ ನರಹಂತಕ ಆನೆಯ ಗತ್ತಿನ ನಡಿಗೆ ಹಾಕಿತು.






ನರಹಂತಕ ಪುಂಡಾನೆಯ ಗತ್ತಿನ ನಡಿಗೆಯನ್ನು ಸ್ಥಳೀಯರು ತಮ್ಮ ಮೊಬೈಲ್ ಗಳಲ್ಲಿ  ಸೆರೆ ಹಿಡಿದರು. ಭಾರೀ ಕಾರ್ಯಾಚರಣೆಯ ಬಳಿಕ ಕಾಡಾನೆಯನ್ನ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಯಿತು. ಭಗವತಿ ಕಾಡಿನಲ್ಲಿ ನರಹಂತಕ ಒಂಟಿ ಸಲಗವನ್ನು ಸೆರೆ ಹಿಡಿಯಲಾಯಿತು. ಸೆರೆಯಾಗುವುದಕ್ಕೂ ಮೊದಲೇ ಕ್ಯಾಂಪ್ ಗೆ ಒಂಟಿ ಸಲಗ ಎಂಟ್ರಿ ಕೊಟ್ಟಿತ್ತು.
ಕ್ಯಾಂಪ್ ಗೆ ಎಂಟ್ರಿಕೊಟ್ಟ ಕೆಲ ಕ್ಷಣದಲ್ಲಿ ಅರವಳಿಕೆ ನೀಡಿ ಪುಂಡಾನೆ ಸೆರೆ ಹಿಡಿಯಲಾಯಿತು.













