ಇತ್ತೀಚಿನ ಸುದ್ದಿ
Mangaluru | ಕೊಂಕಣಿ ಕಾದಂಬರಿ ಸ್ಪರ್ಧೆ: ದ್ವಿತೀಯ ಸ್ಥಾನ ಪಡೆದ ವಿನ್ಸೆಂಟ್ ಪಿಂಟೊ ಅವರಿಗೆ ಬಹುಮಾನ ವಿತರಣೆ
20/10/2025, 15:46

ಮಂಗಳೂರು(reporterkarnataka.com): ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ನಡೆಸಿದ ಕೊಂಕಣಿ ಕಾದಂಬರಿ ಸ್ಪರ್ಧೆಯಲ್ಲಿ ವಿನ್ಸೆಂಟ್ ಪಿಂಟೊ ಅವರ ಕುದ್ರ್ಯಾಚೊ ರಾಕ್ವಲಿ ಕಾದಂಬರಿ ದ್ವಿತೀಯ ಸ್ಥಾನ ಪಡೆದುಕೊಂಡಿದೆ. ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ಸಮಾರಂಭದಲ್ಲಿ ದೆಹಲಿಯ ಜವಾಹರಲಾಲ್ ನೆಹರು ವಿಶ್ವ ವಿದ್ಯಾನಿಲಯದ ನಿವೃತ್ತ ಪ್ರೊಫೆಸರ್ ಪ್ರೊ. ವಲೇರಿಯನ್ ರೊಡ್ರಿಗಸ್ ಅವರು ಬಹುಮಾನ ವಿತರಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಸ್ಟ್ಯಾನಿ ಅಲ್ವಾರಿಸ್, ದಾಯಿಜಿ ವರ್ಲ್ಡ್ ಮೀಡಿಯಾದ ಸಂಸ್ಥಾಪಕ ವಾಲ್ಟರ್ ನಂದಳಿಕೆ, ಎಂಸಿಸಿ ಬ್ಯಾಂಕಿನ ಅಧ್ಯಕ್ಷ ಅನಿಲ್ ಲೋಬೊ, ಬಜ್ಜೋಡಿ ಇನ್ಫೆಂಟ್ ಮೇರಿ ಚರ್ಚ್ ನ ಪ್ರಧಾನ ಧರ್ಮಗುರು ವಂದನೀಯ ಫಾ. ಡೊಮಿನಿಕ್ ವಾಸ್ ಅವರು ಉಪಸ್ಥಿತರಿದ್ದರು. ವಿನ್ಸೆಂಟ್ ಪಿಂಟೊ ಅವರು ಬಜ್ಜೋಡಿ ಇನ್ಫೆಂಟ್ ಮೇರಿ ಚರ್ಚ್ ನ ಸದಸ್ಯರು ಹಾಗೂ ಅವಿಲಾ ವಾರ್ಡಿನ ಮುಖ್ಯಸ್ಥರಾಗಿದ್ದು, ಕೊಂಕಣಿ ಕಾದಂಬರಿ ಸ್ಪರ್ಧೆಯಲ್ಲಿ ದ್ವಿತೀಯ ಬಹುಮಾನ ಗಳಿಸಿರುವುದಕ್ಕಾಗಿ ಅವರನ್ನು ಚರ್ಚ್ ಧರ್ಮಗುರು ಮತ್ತು ಆಡಳಿತದವರು ಅಭಿನಂದಿಸಿದ್ದಾರೆ.