ಇತ್ತೀಚಿನ ಸುದ್ದಿ
Mysore | ಹುಣಸೂರಿನ ಪಪ್ಪಾಯಿ ತ್ಯಾಜ್ಯ ಬಿಟ್ಟಂಗಾಲ ರಸ್ತೆ ಬದಿ ಡಂಪ್: 10 ಸಾವಿರ ರೂ. ದಂಡ, ಕಸ ಮತ್ತೆ ಪಾರ್ಸೆಲ್!
17/10/2025, 12:20

ಗಿರಿಧರ್ ಕೊಂಪುಳಿರ ಮೈಸೂರು
info.reporterkarnataka@gmail.com
ಹುಣಸೂರಿನ ಪಪ್ಪಾಯಿ ತ್ಯಾಜ್ಯವನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿದ ವಾಹನಕ್ಕೆ 10 ಸಾವಿರ ರೂ. ದಂಡ ಹಾಕಿ, ತ್ಯಾಜ್ಯವನ್ನು ಅದೇ ಲಾಯಿಯಲ್ಲಿ ಮರಳಿಸಿದ ಘಟನೆ ನಡೆದಿದೆ.
ಹುಣಸೂರಿನಿಂದ ಪಪ್ಪಾಯಿಯನ್ನು ಕೇರಳಕ್ಕೆ ತುಂಬಿಸಿಕೊಂಡು ಹೋದ ಅಶೋಕ್ ಲೈಲ್ಯಾಂಡ್ ವಾಹನವೊಂದು ಹಿಂತಿರುಗಿ ಬರುವಾಗ ಅದರ ತ್ಯಾಜ್ಯಗಳನ್ನು ಬಿಟ್ಟಂಗಾಲದ ರಸ್ತೆ ಬದಿಯಲ್ಲಿ ಸುರಿಯುತ್ತಿದ್ದಾಗ, ಸಾರ್ವಜನಿಕರು ಈ ವಾಹನವನ್ನು ಗಮನಿಸಿ ಬಿಟ್ಟಂಗಾಲ ಗ್ರಾಮ ಪಂಚಾಯಿತಿಗೆ ದೂರು ನೀಡಿದ್ದರು. ಕ್ರಮಕ್ಕೆ ಮುಂದಾದ ಗ್ರಾಮ ಪಂಚಾಯಿತಿ ಈತನಿಗೆ 10,000 ದಂಡವನ್ನು ವಿಧಿಸಿ, ತ್ಯಾಜ್ಯವನ್ನು ಮತ್ತೆ ವಾಹನಕ್ಕೆ ತುಂಬಿಸಿ ಕಳಿಸಿರುವ ಘಟನೆ ಗುರುವಾ ಸಂಜೆ ನಡೆದಿದೆ.
ಕೊಡಗಿನ ಎಲ್ಲಾ ಭಾಗದಲ್ಲೂ ಇದೇ ರೀತಿ ಸಾರ್ವಜನಿಕರು ಎಚ್ಚೆತ್ತುಕೊಂಡು ತ್ಯಾಜ್ಯವನ್ನು ಕಂಡಲ್ಲಿ ಬಿಸಾಕುವವರನ್ನು ಪತ್ತೆ ಹಚ್ಚಿ ಗ್ರಾಮ ಪಂಚಾಯಿತಿ ಅಥವಾ ಪೊಲೀಸರಿಗೆ ಸುದ್ದಿ ಮುಟ್ಟಿಸಿ ದಂಡ ವಿಧಿಸಿದರೆ ಒಂದಿಷ್ಟು ಹೊರ ಜಿಲ್ಲೆಯ ಹೊರ ರಾಜ್ಯದ ತ್ಯಾಜ್ಯಗಳ ಸಂಖ್ಯೆ ಕೊಡಗಿನಲ್ಲಿ ವಿಲೇವಾರಿಯಾಗುವುದ್ದನ್ನು ತಪ್ಪಿಸಬಹುದಾಗಿದೆ.