ಇತ್ತೀಚಿನ ಸುದ್ದಿ
ವಿರಾಜಪೇಟೆಯ ಪೆರಂಬಾಡಿ ಬಳಿ ಉದ್ಯಮಿ ಮೇಲೆ ಹಲ್ಲೆ, ದರೋಡೆ: ಪೊಲೀಸರು ಹೈ ಅಲರ್ಟ್
16/10/2025, 16:50

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೇರಳದ ಕಣ್ಣೂರು ನಿಂದ ಕೊಡಗು ಮಾರ್ಗವಾಗಿ ಮೈಸೂರು ಗೆ ತೆರಳುತ್ತಿದ್ದ ಉದ್ಯಮಿ ಯೊಬ್ಬರ ಮೇಲೆ 5 ಜನರ ದುಷ್ಕರ್ಮಿಗಳ ತಂಡ ದಾಳಿ ನಡೆಸಿ, ಹಣ, ಪರ್ಸ್ ದರೋಡೆ ಮಾಡಿರುವ ಘಟನೆ ವಿರಾಜಪೇಟೆ ತಾಲ್ಲೂಕಿನ ಪೆರಂಬಾಡಿ ಬಳಿ ನಡೆದಿದೆ.
ಕೇರಳದ ಕಣ್ಣಾನೂರು ಜಿಲ್ಲೆಯ ಕೂತುಪರಂಬುವಿನಲ್ಲಿ ಹೋಟೆಲ್ ಮತ್ತು ಬಟ್ಟೆ ವ್ಯಾಪಾರ ಮಾಡಿಕೊಂಡಿರುವ ರದೀಶ್ (30) ಮೇಲೆ ದರೋಡೆಕೋರರು ಕಾರನ್ನು ತಡೆದು ಗಂಭೀರವಾಗಿ ಹಲ್ಲೆ ಮಾಡಿದ್ದು, ಸ್ಥಳೀಯರ ಸಹಾಯದಿಂದ ವಿರಾಜಪೇಟೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ವಿರಾಜಪೇಟೆ ಪೊಲೀಸರಿಂದ ಆರೋಪಿಗಳ ಪತ್ತೆಗಾಗಿ ತೀವ್ರ ಶೋಧ ಕಾರ್ಯ ನಡೆಸಲಾಗುತ್ತಿದೆ.