12:04 AM Saturday9 - May 2026
ಬ್ರೇಕಿಂಗ್ ನ್ಯೂಸ್
ನಂಜನಗೂಡು ತಾಲೂಕು ಮಟ್ಟದ ಕ್ರಿಕೆಟ್ ಪಂದ್ಯಾವಳಿ: ಚಿಕ್ಕರಂಗನಾಯಕ ಚಾಲನೆ ಚಿಕ್ಕಮಗಳೂರು | ಕಾಡಿನೊಳಗೂ ಕಳ್ಳರ ಕೈಚಳಕ: ಮುತ್ತೋಡಿ ಅರಣ್ಯ ವಲಯದಲ್ಲಿದ್ದ ಕ್ಯಾಮೆರಾ ಹೊತ್ತೊಯ್ದ… ಚಾಲಕನಿಗೆ ಹಠಾತ್ ಕಾಣಿಸಿಕೊಂಡ ಎದೆನೋವು: ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಗೆ ಮಗುಚಿದ ಖಾಸಗಿ… ಮೂಡಿಗೆರೆ: ಬಾಳೂರು ಪೊಲೀಸರ 12 ತಾಸುಗಳ ಕಾರ್ಯಾಚರಣೆ ಬಳಿಕ ಪತ್ತೆಯಾದ ಒಂದೂವರೆ ವರ್ಷದ… Shivamogga | ತೀರ್ಥಹಳ್ಳಿ: ವಾಹನದಲ್ಲಿ ಅಕ್ರಮ ಗೋ ಸಾಗಾಟ; ಮೂವರು ವಶಕ್ಕೆ ರಕ್ತ ಸಂಬಂಧವನ್ನೇ ಮರೆತು ಹಸೆಮಣೆಗೆ ಏರಿದ ಅಕ್ಕ ತಮ್ಮ..! ದುಬಾರೆ | ಅರಣ್ಯ ಸಚಿವರಿಗೆ ಘೇರಾವ್ ಯತ್ನ: ಬಿಜೆಪಿ ಕಾರ್ಯಕರ್ತರು ಪೊಲೀಸ್ ವಶಕ್ಕೆ ಪಶ್ಚಿಮ ಬಂಗಾಳದಲ್ಲಿ ನೂತನ ಸರಕಾರ ರಚನೆ: ಚುನಾವಣಾ ಆಯೋಗ ಅಧಿಸೂಚನೆ ಸಚಿವ ಜಮೀರ್ ಅಹ್ಮದ್ ಖಾನ್ ಮನೆಯಲ್ಲಿ ಕಳ್ಳತನ ಪ್ರಕರಣ : ಇಬ್ಬರು ಆರೋಪಿಗಳು… ಪಶ್ಚಿಮ ಬಂಗಾಳ: ರಾಜೀನಾಮೆ ನೀಡಲು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನಿರಾಕರಣೆ

ಇತ್ತೀಚಿನ ಸುದ್ದಿ

ನರೇಗಾ ಯೋಜನೆಯಡಿ ಕಾರ್ಮಿಕ ಆಯವ್ಯಯ: ಗ್ರಾಮ ಪಂಚಾಯತಿಗಳಿಗೆ ಸಚಿವ ಪ್ರಿಯಾಂಕ್‌ ಖರ್ಗೆ ಸೂಚನೆ

16/10/2025, 10:07

ಬೆಂಗಳೂರು(reporterkarnataka.com): ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ʼಗ್ರಾಮಾಭಿವೃದ್ಧಿಯ ಹೊಸ ಹಾದಿ-ಯುಕ್ತಧಾರʼ ಮಾರ್ಗಸೂಚಿಗಳನ್ನು ಅನುಸರಿಸಿ 2026-27ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಸಂಬಂಧ ರಾಜ್ಯದ ಎಲ್ಲ ಗ್ರಾಮ ಪಂಚಾಯತಿಗಳಿಗೆ ಮಾರ್ಗದರ್ಶನ ನೀಡಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಹಾಗೂ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಅಕುಶಲ ಕೆಲಸಕ್ಕೆ ಬೇಡಿಕೆ ಸಲ್ಲಿಸುವ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ವರ್ಷದಲ್ಲಿ 100 ದಿನಗಳ ಅಕುಶಲ ಕೆಲಸ ಖಾತ್ರಿ ಪಡಿಸುತ್ತದೆ. ಕೂಲಿಕಾರರಿಗೆ ಸಕಾಲದಲ್ಲಿ ಅಕುಶಲ ಕೆಲಸ ಒದಗಿಸುವುದರೊಂದಿಗೆ ಬಹುಬಾಳಿಕೆ ಆಸ್ತಿಗಳನ್ನು ಸೃಜಿಸಲಾಗುತ್ತದೆ. ಹೀಗೆ ಸೃಜಿಸುವ ಆಸ್ತಿಗಳನ್ನು ಪ್ರತಿ ವರ್ಷ ಅಕ್ಟೋಬರ್‌ ಮಾಹೆಯಿಂದ ನವೆಂಬರ್‌ ಮಾಹೆವರೆಗೆ ಎಲ್ಲಾ ಗ್ರಾಮಪಂಚಾಯಿತಿಗಳಲ್ಲಿ ಕಾರ್ಮಿಕ ಆಯವ್ಯಯವನ್ನು ಸಿದ್ಧಪಡಿಸಲಾಗುತ್ತಿತ್ತು. ಈ ಬಾರಿ 2026-27ನೆ ಆರ್ಥಿಕ ಸಾಲಿನ ಕಾರ್ಮಿಕ ಆಯವ್ಯಯವನ್ನು ವೈಜ್ಞಾನಿಕವಾಗಿ ಸಿದ್ದಪಡಿಸಲು ʼಯುಕ್ತಧಾರʼ ತಂತ್ರಾಂಶವನ್ನು ಜಾರಿಗೊಳಿಸಲಾಗಿದೆ ಎಂದೂ ಸಚಿವರು ಮಾಹಿತಿ ನೀಡಿದ್ದಾರೆ.

ಪರೀಕ್ಷಾರ್ಥ ತಾಲ್ಲೂಕಿಗೊಂದು ಗ್ರಾಮ ಪಂಚಾಯತಿಯಲ್ಲಿ ಈಗಾಗಲೆ ತಂತ್ರಾಂಶದಡಿ ಆಯವ್ಯಯವನ್ನು ಸಿದ್ದಪಡಿಸಲಾಗಿತ್ತು, ಕಾರ್ಮಿಕ ಆಯವ್ಯಯವನ್ನು ಸಿದ್ದಪಡಿಸಲು ಎಲ್ಲಾ ಗ್ರಾಮಪಂಚಾಯಿತಿಗಳಿಗೂ ಈ ತಂತ್ರಾಂಶ ಸೌಲಭ್ಯವನ್ನು ವಿಸ್ತರಿಸಲಾಗಿದ್ದು ಈ ತಂತ್ರಾಂಶದ ಮೂಲಕವೇ ಮುಂದಿನ ಆಯವ್ಯಯ ಸಿದ್ದಪಡಿಸಬೇಕಿದೆ ಎಂದು ತಿಳಿಸಿರುವ ಸಚಿವರು ಈಗಾಗಲೇ ಅನುಷ್ಠಾನ ಅಧಿಕಾರಿಗಳಿಗೆ ತಾಂತ್ರಿಕ ತರಬೇತಿ ನೀಡಲಾಗಿದೆ. ಮಹಾತ್ಮಗಾಂಧಿ ನರೇಗಾ ಯೋಜನೆಯ 2026-27ನೇ ಸಾಲಿನ ಕಾರ್ಮಿಕ ಆಯವ್ಯಯ ತಯಾರಿಸುವ ಉದ್ದೇಶದಿಂದ “ಯುಕ್ತಧಾರ” ಮೂಲಕ ಸಿದ್ದಪಡಿಸಲಾದ ಕಾರ್ಮಿಕ ಆಯವ್ಯಯವನ್ನು ಗ್ರಾಮ ಸಭೆಯಲ್ಲಿ ಸಿದ್ಧಪಡಿಸಲು ಗ್ರಾಮ ಪಂಚಾಯತಿಗಳ ಅಭಿವೃದ್ಧಿ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕಾಗಿದೆ ಎಂದೂ ಸಚಿವರು ಹೇಳಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು