ಇತ್ತೀಚಿನ ಸುದ್ದಿ
ಕಾವೇರಿ ಸಂಕ್ರಮಣ: ಕೊಡಗು ಗೌಡ ಸಮಾಜದ ಬ್ಯಾನರ್ ಹರಿದು ಹಾಕಿದ ಕಿಡಿಗೇಡಿಗಳು
16/10/2025, 10:04

ಗಿರಿಧರ್ ಕೊಂಪುಳಿರ ಮಡಿಕೇರಿ
info reporterkarnataka@gmai.com
ಪವಿತ್ರ ಕಾವೇರಿ ಸಂಕ್ರಮಣ ಅಂಗವಾಗಿ ಶ್ರೀ ಕ್ಷೇತ್ರ ತಲಕಾವೇರಿಗೆ ಆಗಮಿಸುವ ಭಕ್ತರಿಗೆ ಸ್ವಾಗತಕೋರಲು ರಸ್ತೆ ಬದಿ ಅಳವಡಿಸಲಾದ ಬ್ಯಾನರ್ ಗಳನ್ನು ಕಿಡಿಗೇಡಿಗಳು ಹರಿದು ಹಾಕಿರುವ ಘಟನೆ ನಡೆದಿದೆ.
ಮೈಸೂರಿನ ಕೊಡಗು ಗೌಡ ಸಮಾಜದ ವತಿಯಿಂದ ಕಾರುಗುಂದದಲ್ಲಿ ಅಳವಡಿಸಿರುವ ಎರಡು ಬ್ಯಾನರ್ ಅನ್ನು ಹರಿದು ಹಾಕಿ ಉದ್ದಟತನ ಮೆರೆದಿರುವುದು ಸಮಾಜವರಲ್ಲಿ ಅಸಮಾಧಾನ ಮೂಡಿಸಿದೆ.