ಇತ್ತೀಚಿನ ಸುದ್ದಿ
Chikkamagaluru | ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸ: ಬೆಟ್ಟವೇರಲಿರುವ ಭಕ್ತ ಸಾಗರ; ಜಿಲ್ಲಾಡಳಿತದಿಂದ ಮಾರ್ಗಸೂಚಿ ಬಿಡುಗಡೆಗೆ
14/10/2025, 18:35

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಇದೇ ಭಾನುವಾರ- ಸೋಮವಾರ ಬಿಂಡಿಗ ದೇವೀರಮ್ಮನ ಜಾತ್ರಾ ಮಹೋತ್ಸವ ಹಿನ್ನೆಲೆ ಭಕ್ತ ಸಾಗರ 5 ಕಿ.ಮೀ. ಬೆಟ್ಟ ಏರಲಿರುವ ಕಾರಣ ಮುಂಜಾಗೃತ ಕ್ರಮವಾಗಿ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡಿದೆ.
ಪ್ರತಿ ವರ್ಷ 60-70 ಸಾವಿರಕ್ಕೂ ಹೆಚ್ಚು ಭಕ್ತರು ದೇವೀರಮ್ಮನ ದರ್ಶನಕ್ಕೆ ಬೆಟ್ಟ ಹತ್ತುತ್ತಾರೆ.
15 ವರ್ಷ ಮೇಲ್ಪಟ್ಟು 60 ವರ್ಷ ಒಳಗಿನವರು ಮಾತ್ರ ಬೆಟ್ಟ ಹತ್ತಬೇಕು. ಪ್ರವಾಸಿ ತಾಣ ಹಾಗೂ ಭಕ್ತರ ನಡುವೆ ಜನಸಂದಣಿ ತಡೆಗೆ ಜಿಲ್ಲಾಡಳಿತ ಕ್ರಮಕೈಗೊಂಡಿದೆ.
19ರ ಬೆಳಗ್ಗೆ 6 ಗಂಟೆಯಿಂದ 20ರ ಸಂಜೆ 6 ಗಂಟೆವರೆಗೆ ಪ್ರವಾಸಿ ತಾಣಗಳಿಗೆ ಪ್ರವಾಸಿಗರು ಬರದಂತೆ ಮನವಿ ಮಾಡಲಾಗಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಗಾಳಿಕೆರೆ, ದತ್ತಪೀಠ, ಮಾಣಿಕ್ಯಾಧಾರಕ್ಕೆ ಪ್ರವಾಸಿಗರು ಬರದಂತೆ ಮನವಿ ಮಾಡಲಾಗಿದೆ.
ಹೋಂ ಸ್ಟೇ, ರೆಸಾರ್ಟ್ ಬುಕ್ ಮಾಡಿರುವವರಿಗೆ ಯಾವುದೇ ನಿರ್ಬಂಧ ಇರುವುದಿಲ್ಲ.
ರಾಜ್ಯ ಹೆದ್ದಾರಿ ತರೀಕೆರೆ ಮಾರ್ಗವನ್ನ ಬಿಂಡಿಗ ದೇವೀರಮ್ಮನ ಭಕ್ತರಿಗೆ ಮೀಸಲಿಡಲಾಗಿದೆ.
ಅನ್ಯ ಕಾರ್ಯದ ನಿಮಿತ್ತ ಚಿಕ್ಕಮಗಳೂರಿಗೆ ಬರುವವರು ಕಡ್ಡಾಯವಾಗಿ ಕಡೂರು ಮಾರ್ಗದಲ್ಲಿ ಬರುವಂತೆ ಸೂಚನೆ ನೀಡಲಾಗಿದೆ.
ಭಕ್ತರಿಗೆ ವರ್ಷಕ್ಕೊಮ್ಮೆ ದರ್ಶನ ನೀಡುವ ಬೆಟ್ಟದ ಮೇಲಿರೋ ಬಿಂಡಿಗ ದೇವೀರಮ್ಮ ಆಗಿದೆ.