ಇತ್ತೀಚಿನ ಸುದ್ದಿ
ಹಾರಂಗಿ ಆಣೆಕಟ್ಟಿಗೆ ಹರಿದು ಬಂದ 43 ಟಿಎಂಸಿ ನೀರು:ಕಳೆದ ಬಾರಿಗಿಂತ 11 ಟಿಎಂಸಿ ಅಧಿಕ
08/10/2025, 15:43

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕಾವೇರಿ ಜಲನಯನ ಪ್ರದೇಶದ ಪ್ರಮುಖ ಆಣೆಕಟ್ಟೆಯಾದ ಹಾರಂಗಿಗೆ ಈ ವರೆಗೆ 43 ಟಿಎಂಸಿ ನೀರು ಹರಿದು ಬಂದಿದ್ದು, ಕಳೆದ ಬಾರಿಗೆ ಹೋಲಿಸಿದರೆ ಈ ವರ್ಷ 11 ಟಿಎಂಸಿ ನೀರು ಅಧಿಕ ನೀರು ಹರಿದು ಬಂತಂತಾಗಿದೆ.
ಇಲ್ಲಿವರೆಗೆ 36.651 ಟಿಎಂಸಿ ನೀರನ್ನು ನದಿಗೆ ಮತ್ತು 4.045 ಟಿಎಂಸಿ ನೀರನ್ನು ನಾಲೆಗೆ ಹರಿಸಲಾಗಿದೆ. ಕಳೆದ 25 ವರ್ಷದಲ್ಲಿ ಅವಧಿಗೆ ಮುನ್ನ ಹೆಚ್ಚುವರಿ 11 ಟಿಎಂಸಿ ಅಷ್ಟು ನೀರು ಹರಿದು ಬಂದಿರುವುದು ಹೊಸ ದಾಖಲೆ ಬರೆದಂತಾಗಿದೆ. ಸದ್ಯಕ್ಕೆ 649 ಕ್ಯೂಸೆಕ್ಸ್ ನೀರು ಒಳಹರಿವು ಇದ್ದು, ನಾಲೆಗೆ 800 ಕ್ಯೂಸೆಕ್ಸ್ ಪ್ರಮಾಣದಲ್ಲಿ ನೀರು ಹರಿಸಲಾಗುತ್ತಿದೆ.