ಇತ್ತೀಚಿನ ಸುದ್ದಿ
Madikeri | ದಕ್ಷಿಣ ಕೊಡಗಿನಲ್ಲಿ ಮುಂದುವರೆದ ಹುಲಿ ದಾಳಿ: ಜಾನುವಾರು ಬಲಿ
07/10/2025, 12:40
ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಪೊನ್ನಂಪೇಟೆ ತಾಲ್ಲೂಕಿನ ಶ್ರೀಮಂಗಲ ಪಟ್ಟಣ ಸಮೀಪವೇ ಮೇಯಲು ಬಿಟ್ಟಿದ್ದ ಹಸುವೊಂದನ್ನು ಹುಲಿ ಬಲಿ ಪಡೆದುಕೊಂಡಿದೆ. ಗ್ರಾಮದ ಗಣಪತಿ ಎಂಬುವವರಿಗೆ ಸೇರಿದ ಹಸು ಇದಾಗಿದ್ದು, ಇದೀಗ ಈ ಭಾಗದಲ್ಲಿ ಆತಂಕ ಉಂಟಾಗಿದೆ.

ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಹುಲಿ ದಾಳಿ ನಡೆಯುತ್ತಿದ್ದರೂ ಅರಣ್ಯ ಇಲಾಖೆ ಬೋನ್ ಅಳವಡಿಸಿ, ಕ್ಯಾಮರಾ ಮೂಲಕ ಪತ್ತೆ ಕಾರ್ಯ ನಡೆಸಲಾಗುತ್ತಿದ್ದರೂ ಸಹ ನಾಗರಹೊಳೆ ಅಂಚಿನ ಗ್ರಾಮದಲ್ಲಿ ನಿರಂತರ ಹುಲಿ ದಾಳಿಯಿಂದಾಗಿ ಜನರು ಮನೆಯಿಂದ ಹೊರ ಬರಲು ಹೆದರುತ್ತಿದ್ದಾರೆ. ತಕ್ಷಣ ಹುಲಿ ಸೆರೆ ಹಿಡಿಯಬೇಕು ಮತ್ತು ಈಗಾಗಲೇ ಸಾವನಪ್ಪಿರುವ ಜಾನುವಾರುಗಳ ಮಾಲೀಕರಿಗೆ ಪರಿಹಾರ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ.














