ಇತ್ತೀಚಿನ ಸುದ್ದಿ
ಮಡಿಕೇರಿ ದಸರಾದಲ್ಲಿ ರಘು ದೀಕ್ಷಿತ್ ಮೋಡಿ: ವೇದಿಕೆಯೇರಿ ಹೆಜ್ಜೆ ಹಾಕಿದ ಶಾಸಕ ಡಾ.ಮಂತರ್ ಗೌಡ
02/10/2025, 11:45

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಂಜಿನ ನಗರಿ ಮಡಿಕೇರಿಯಲ್ಲಿ ದಸರಾ ವಿಜೃಂಭಣೆಯಿಂದ ನಡೆಯುತ್ತಾ ಬಂದಿದ್ದು,ಆಯುಧ ಪೂಜೆ ನಿಮಿತ್ತ ಗಾಂಧಿ ಮೈದಾನದಲ್ಲಿ ನಡೆದ ಸಂಗೀತಾ ಕಾರ್ಯಕ್ರಮದಲ್ಲಿ ಗಾಯಕ ಹಾಗೂ ಗಿಟಾರ್ ವಾದಕ ರಘು ದೀಕ್ಷಿತ್ ಮೋಡಿ ಮಾಡಿದರು.
ಪ್ರತಿಯೊಂದು ಹಾಡಿಗೂ ಯುವ ಸಮೂಹ ಹುಚೆದ್ದು ಕುಣಿಯುತ್ತಿದ್ದರೆ, ಇತ್ತ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ವೇದಿಕೆ ಏರಿ ಹೆಜ್ಜೆ ಹಾಕಿದರು, ಇದ್ರಿಂದ ಜೋಷ್ ಹೆಚ್ಚಾಗುತ್ತಿದ್ದಂತೆ ಶಾಸಕರ ಪತ್ನಿ ಸಹ ವೇದಿಕೆ ಏರಿ ಶಾಸಕರಿಗೆ ಸಾಥ್ ನೀಡಿದರು.