4:25 PM Monday19 - January 2026
ಬ್ರೇಕಿಂಗ್ ನ್ಯೂಸ್
ಹುಣಸೂರಿನ ಜುವೆಲ್ಲರಿ ದರೋಡೆ ಪ್ರಕರಣ: ಇಬ್ಬರು ಆರೋಪಿಗಳ ಬಿಹಾರದಲ್ಲಿ ಬಂಧನ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಅನುಷ್ಠಾನದಲ್ಲಿ ರಾಜ್ಯಕ್ಕೆ ದ್ವಿತೀಯ ಸ್ಥಾನ: ಕೃಷಿ… ಜನಾರ್ದನ ರೆಡ್ಡಿ, ಶ್ರೀರಾಮುಲು ಶಕ್ತಿ ಅಡಗಿಸಲು ಯಾರಿಂದಲೂ ಸಾಧ್ಯವಿಲ್ಲ: ಮಾಜಿ ಸಿಎಂ ಬಸವರಾಜ… ಕಾರು ಚಾಲಕನ ನಿರ್ಲಕ್ಷ್ಯ ಚಾಲನೆ: ಶ್ರಮಜೀವಿ ಶಿವರಾಜಪುರ ರಮೇಶ್ ದಾರುಣ ಸಾವು ಉಡುಪಿ ಪರ್ಯಾಯ: ಸರ್ವಜ್ಞ ಪೀಠ ಅಲಂಕರಿಸಿದ ಶೀರೂರು ಮಠದ ವೇದ ವರ್ಧನ ತೀರ್ಥರು;… 88 ಪ್ರಕರಣಗಳಲ್ಲಿ ಪೊಲೀಸಿನವರೇ ಶಾಮೀಲು; ಬೇಲಿಯೇ ಎದ್ದು ಹೊಲ ಮೇಯುವುದು ಅಕ್ಷಮ್ಯ ಅಪರಾಧ:… ಬೆಂಗಳೂರಿನಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ: ಅಜೀಂ ಪ್ರೇಮ್‌ಜಿ ಫೌಂಡೇಷನ್ ಜತೆ ಕೈಜೋಡಿಸಿದ… ಕುಶಾಲನಗರ – ಮಡಿಕೇರಿ ಹೆದ್ದಾರಿಯ ಆನೆಕಾಡು ಬಳಿ ಅಪಘಾತ: ಕಾಡು ಕುರಿ ಸಾವು,… ಕೊಡಗಿನಲ್ಲಿ ಅಕ್ರಮ ವಲಸಿಗರ ಬಗ್ಗೆ ಹೈ ಅಲರ್ಟ್: ನೂತನ ಎಸ್ಪಿ ಬಿಂದುಮಣಿ ಮಂಗಳೂರಿನಲ್ಲಿ ಸ್ಕೂಲ್ ಆಫ್ ಇಂಜಿನಿಯರಿಂಗ್ ಮತ್ತು ಕಾನೂನು ಶಾಲೆಗೆ ರಾಜ್ಯಪಾಲ ಗೆಹ್ಲೋಟ್ ಚಾಲನೆ

ಇತ್ತೀಚಿನ ಸುದ್ದಿ

ಲಾಕ್ ಡೌನ್ ನಿಯಮ ಪಾಲಿಸಿ ಊರಿನವರಿಂದಲೇ ಶಾಲೆ ಕಟ್ಟಡ ದುರಸ್ತಿ; ದ.ಕ. ಜಿಲ್ಲೆಯಲ್ಲೇ ಅಪರೂಪದ ಘಟನೆ !!

23/05/2021, 11:52

ಅನುಷ್ ಪಂಡಿತ್ ಮಂಗಳೂರು

Info.reporterkarnataka@gmail.com

ದೇಶದಾದ್ಯಂತ ಕೊರೊನಾ ತಂದ ಸಂಕಷ್ಟ ಅಷ್ಟಿಷ್ಟಲ್ಲ… ಜನರು  ಕೊರೊನಾ ಅಲೆಗೆ ತತ್ತರಿಸಿ ಹೋಗಿದ್ದಾರೆ. ಉದ್ಯೋಗಸ್ಥ ಲಾಕ್ ಡೌನ್ ನಿಂದ ಮನೆಯಲ್ಲಿ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಶಾಲಾ ಕಾಲೇಜು ಮಕ್ಕಳು ಆನ್ಲೈನ್ ಶಿಕ್ಷಣದ ಮೊರೆ ಹೋಗಿರುವುದು ಅನಿವಾರ್ಯ. ಅದರಂತೆ ಎಲ್ಲವೂ ಯಥಾಸ್ಥಿತಿ ತಲುಪಿದ ಮೇಲೆ ಶಾಲೆ ತೆರೆಯಬೇಕು. ಮಕ್ಕಳು ಕಲಿತು ದೇಶದ ಉಜ್ವಲ ಭವಿಷ್ಯ ರೂಪಿಸಬೇಕು. 


ಇದಕ್ಕೆ ಪುಷ್ಟಿ ಕೊಡುವಂತೆ ದ. ಕ ಜಿಲ್ಲೆ ಯ ಪುತ್ತೂರು ತಾಲೂಕಿನ ಕುಂಜೂರು ಪಂಜ ಶಾಲೆ ಮಾದರಿಯಾಗಿದೆ.


ಊರಿನ ಕೆಲ ನಾಗರಿಕರು ಹಾಗೂ ಶಾಲೆಯ ಹಳೆಯ ವಿದ್ಯಾಥಿಗಳು ಇಂತಹದೊಂದು ಕಾರ್ಯಕ್ಕೆ ಮುಂದಾಗಿದ್ದಾರೆ ಎಂದರೆ ತಪ್ಪಾಗಲಾರದು. ಅದೇನೆಂದರೆ ಲಾಕ್ಡೌನ್ ನಲ್ಲಿ ಮನೆಯಲ್ಲಿ ಕುಳಿತು ಕಾಲ ಹರಣ ಮಾಡುವ ಬದಲು ಕೋವಿಡ್ ನಿಯಮ ಪಾಲಿಸಿ ಮಾಸ್ಕ್ ಧರಿಸಿ ಫೀಲ್ಡಿಗಿಳಿದಿದ್ದಾರೆ.


ಇಲ್ಲಿನ 70 ವರ್ಷ ಹಳೆಯದಾದ ಸರಕಾರಿ ಶಾಲೆಯು  ಗಾಳಿ ಮಳೆಗೆ ಸೋರುತ್ತದೆ. ಶಾಲಾ ಕೊಠಡಿಯಲೊಳಗೆ ನೀರು ಸೋರುತ್ತದೆ. ಇದನ್ನು ಮನಗಂಡ ಶಿಕ್ಷಣ ಪ್ರೇಮಿಗಳು ಮಕ್ಕಳ ಮುಂದಿನ ಕಲಿಕೆ ಅವಧಿಗೆ ಯಥಾಸ್ಥಿತಿಗೆ ತರಲು ಆಡಳಿತ ಮಂಡಳಿ ಹಾಗೂ ಹಳೆಯ ವಿದ್ಯಾಥಿಗಳು, ಊರಿನ ನಾಗರಿಕರೊಂದಿಗೆ ಸೇರಿಕೊಂಡು, ಊರ ನಾಗರೀಕರ, ಹಳೆ ವಿದ್ಯಾರ್ಥಿಗಳ ದೇಣಿಗೆ ಹಣದಲ್ಲಿ ದುರಸ್ತಿ ಕಾರ್ಯಾದಲ್ಲಿ ತೊಡಗಿದ್ದಾರೆ. ನಾವು ಕಲಿತ ಶಾಲೆ ಅಭಿಮಾನ ಮರೆಯದೆ ಮುಂದಿನ ಪೀಳಿಗೆ ಒಳ್ಳೆಯ ಶಿಕ್ಷಣ ಪಡೆಯಬೇಕೆಂಬ ದೃಷ್ಟಿಯಿಂದ ಇಂತಹ ಮಹತ್ವದ ಕಾರ್ಯದಲ್ಲಿ ತೊಡಗಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಹೆಮ್ಮೆಯಾಗಿದೆ.
ಇಂತಹ ಕಾರ್ಯಕ್ಕೆ ಜನಪ್ರತಿನಿಧಿಗಳು, ಸಹಾಯ ಹಸ್ತ ನೀಡಲಿ ಎನ್ನುವುದು ಆಶಯ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಅನುದಾನ ನೀಡುವ ಭರವಸೆ ನೀಡಿದೆ. ಹಾಗೂ ಕರ್ನಾಟಕ ಬ್ಯಾಂಕ್ ತನ್ನ ಸಿ ಎಸ್ ಆರ್ ಯೋಜನೆಯಡಿ ಅನುದಾನ ಕೊಡುತ್ತೇವೆ ಎಂದು ಹೇಳಿದ್ದಾರೆ. ಶಾಸಕರು ಕೂಡ ಭರವಸೆ ನೀಡಿದ್ದಾರೆ ಆದರೆ ಯಾವುದೇ ಅನುದಾನ ಸರಕಾರ ದಿಂದ ಈವರೆಗೆ ಬಂದಿಲ್ಲ.

ಲೋಕೇಶ್ ಬಲ್ಯಾಯ,ಹಳೆ ವಿದ್ಯಾರ್ಥಿ ದೊಡ್ಡಡ್ಕ

ಇತ್ತೀಚಿನ ಸುದ್ದಿ

ಜಾಹೀರಾತು