ಇತ್ತೀಚಿನ ಸುದ್ದಿ
ಬಂಟ್ವಾಳ: ಯುವಕ ಗಾಂಜಾ ಸೇವನೆ ವೈದ್ಯಕೀಯ ಪರೀಕ್ಷೆಯಿಂದ ದೃಢ; ಕೇಸು ದಾಖಲು
20/09/2025, 22:26
ಬಂಟ್ವಾಳ(reporterkarnataka.com): ಬಿಳಿಯೂರು ಗ್ರಾಮದ ಯುವಕನೊಬ್ಬ ಗಾಂಜಾ ಸೇವಿಸಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದ್ದು, ಕೇಸು ದಾಖಲಿಸಲಾಗಿದೆ.

ಬಂಟ್ವಾಳ ಅಬಕಾರಿ ಉಪಾಧೀಕ್ಷಕರ ತಂಡದವರು ಬಿಳಿಯೂರು ಗ್ರಾಮದಿಂದ ಇಬ್ಬರು ಯುವಕರನ್ನು ಗಾಂಜಾ ಸೇವನೆ ಬಗ್ಗೆ ಕರೆದು ಕೊಂಡು ಹೋಗಿದ್ದು ವೈದ್ಯಕೀಯ ಪರೀಕ್ಷೆ ಮಾಡಿದಾಗ ಬಿಳಿಯೂರು ಗ್ರಾಮ 26ರ ಹರೆಯದ ಅಬೂಬಕ್ಕರ್ ಸಿದ್ದೀಕ್ ಎಂಬುವವನ ಗಾಂಜಾ ಸೇವನೆ ಮಾಡಿರುವುದು ದೃಢಪಟ್ಟಿದ್ದು ಈತನ ಮೇಲೆ ಗಾಂಜಾ ಸೇವನೆ ಪ್ರಕರಣ ದಾಖಲಿಸಿ ನೋಟಿಸ್ ನೀಡಿ ತನಿಖೆ ಕೈಗೊಳ್ಳಲಾಗಿದೆ.
ಮತ್ತೊಬ್ಬ ಯುವಕ ಗಾಂಜಾ ಸೇವನೆಯ ಬಗ್ಗೆ ದೃಡಪಟ್ಟಿರುವುದಿಲ್ಲ.














