1:00 AM Thursday11 - September 2025
ಬ್ರೇಕಿಂಗ್ ನ್ಯೂಸ್
ವಿಧಾನ ಪರಿಷತ್ ಸದಸ್ಯರಾಗಿ ಡಾ. ಆರತಿಕೃಷ್ಣ, ರಮೇಶ್ ಬಾಬು ಸಹಿತ ನಾಲ್ವರು ಪ್ರಮಾಣ… ಅಸ್ಸಾಂ ಕಾರ್ಮಿಕರು ಕೊಡಗಿನಿಂದ ಹಾಸನ ಕಡೆಗೆ ವಲಸೆ: ಕುಶಾಲನಗರ ಬಸ್ ನಿಲ್ದಾಣದಲ್ಲಿ ಹಿಂಡು… Kodagu | ಕಾಲೇಜಿನಲ್ಲಿ ಮಚ್ಚು ಹಿಡಿದು ರೀಲ್ಸ್: ವಿದ್ಯಾರ್ಥಿ ವಿರುದ್ದ ಪ್ರಕರಣ ದಾಖಲು;… Kodagu | ಕೇರಳದ ಕಸಾಯಿಖಾನೆಗೆ ಕೋಣಗಳ ಸಾಗಾಟ: 34 ಕೋಣಗಳ ರಕ್ಷಣೆ ಸಂತೋಷದ ಬಾಗಿಲಿನತ್ತ ಪೂಜಾಳ ಪಯಣ: ಬಿಹಾರದಲ್ಲಿರುವ ಕುಟುಂಬ ಜತೆ ಪುನರ್ಮಿಲನ ಕರಾವಳಿಯಲ್ಲಿ ಸಂಭ್ರಮದ ಮೊಂತಿ ಹಬ್ಬ: ಚರ್ಚ್ ಗಳಲ್ಲಿ ವಿಶೇಷ ಬಲಿಪೂಜೆ; ತೆನೆ ವಿತರಣೆ ಮೈಸೂರು ದಸರಾ: ಗೋಲ್ಡ್​ ಕಾರ್ಡ್​; ಟಿಕೆಟ್​ ದರ ಎಷ್ಟು? ಖರೀದಿ ಹೇಗೆ? ಇಲ್ಲಿದೆ… Kodagu | ಮಡಿಕೇರಿ: ಮಾಂದಲಪಟ್ಟಿಗೆಯಲ್ಲಿ ಪ್ರವಾಸಿಗನ ಮೇಲೆ ಜೀಪ್ ಚಾಲಕ ಹಲ್ಲೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಬಿಲ್ಡಿಂಗ್ ಧ್ವಂಸ ಬೆದರಿಕೆ: ಆರೋಪಿ ಬಂಧನ ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತ: ಒಂದು ವಾರದೊಳಗೆ ಭೂ ಪರಿಹಾರಕ್ಕೆ ದರ…

ಇತ್ತೀಚಿನ ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ನಾರಾಯಣಗುರು ಜಯಂತಿ ವಿಶೇಷ ಉಪನ್ಯಾಸ

11/09/2025, 22:09

ಮಂಗಳೂರು(reporterkarnataka.com): ಮಂಗಳೂರು ವಿಶ್ವವಿದ್ಯಾನಿಲಯದ ಬ್ರಹ್ಮಶ್ರೀ ನಾರಾಯಣಗುರು ಅಧ್ಯಯನ ಪೀಠದ ಆಶ್ರಯದಲ್ಲಿ ನಾರಾಯಣಗುರು ಜಯಂತಿ – 2025 ಗುರುವಾರ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾಭವನದಲ್ಲಿ ಆಚರಿಸಲಾಯಿತು.


ಆಶೀರ್ವಚನವನ್ನು ನೀಡಿದ ಆರ್ಯ ಈಡಿಗ ಮಹಾಸಂಸ್ಥಾನ, ಸೋಲೂರಿನ ಪೀಠಾಧಿಪತಿ ಶ್ರೀ ವಿಖ್ಯಾತಾನಂದ ಸ್ವಾಮೀಜಿಗಳು ಮಾತನಾಡಿ, ನಾರಾಯಣ ಗುರುಗಳು ಯಾವುದನ್ನೂ ಬಯಸಲಿಲ್ಲ, ತನ್ನ ಸರ್ವಸ್ವವನ್ನೂ ಸಮಾಜಕ್ಕಾಗಿ ಧಾರೆಯೆರೆದವರು, ಯಾವುದೆ ಪ್ರತಿಭಟನೆ, ಜಗಳವಿರದೇ ಜನರನ್ನು ಪರಿವರ್ತಿಸುವ ಕಾರ್ಯವನ್ನು ಗುರುಗಳು ಮಾಡಿದರು.ದಲಿತರನ್ನು ನೂರು ಮೈಲಿ ದೂರ ಇಡುತ್ತಿದ್ದ ಕಾಲದಲ್ಲಿ, ನಾರಾಯಣಗುರು ಅವರಂತವರು ಆ ಮಕ್ಕಳನ್ನು ತಮ್ಮ ಮಡಿಲಲ್ಲಿ ಕೂಸಿನಂತೆ ಕೂರಿಸಿಕೊಂಡು ಪ್ರಾರ್ಥನೆ ಹೇಳಿಕೊಡುತ್ತಿದ್ದರು. “ದೇವಾಲಯಕ್ಕೆ ಪ್ರವೇಶವಿಲ್ಲ” ಎಂದು ತಡೆದಾಗ, ಅವರು ನದಿಗೆ ಹಾರಿ ಶಿವಲಿಂಗ ತಂದು ಕಣ್ಣೀರಿನಿಂದ ಅಭಿಷೇಕ ಮಾಡಿ ಪ್ರತಿಷ್ಠಾಪನೆ ಮಾಡಿದರು. ಇದರಿಂದ ದೇವರು ಎಲ್ಲರಿಗೂ ಸಮಾನವಾಗಿ ಲಭ್ಯ ಎಂಬ ಸಂದೇಶವನ್ನು ನೀಡಿದ್ದಾರೆ. ಆ ಮೂಲಕ ಸಮಾಜದಲ್ಲಿ ಸಮಾನತೆಯ ಬೆಳಕನ್ನು ಹರಿಸಿದರು ಎಂದರು.
ಶ್ರೀಲಂಕಾಕ್ಕೆ ತೆರಳಿದ ಸಂದರ್ಭ ಜನರು ಬಡವರೆಂದು ಗೋಗರೆದಾಗ ರಾತ್ರಿ ಶಾಲೆ ಆರಂಭಿಸುವಂತೆ ಕರೆ ನೀಡಿದರು ಈ ಸಂದರ್ಭ ಹಲವಾರು ರಾತ್ರಿ ಶಾಲೆ ಆರಂಭಗೊಂಡಿತು. ಆ ಬಳಿಕ ಬ್ರಿಟಿಷರ ಫ್ಯಾಕ್ಟರಿಗಳಲ್ಲಿ ಕೆಲಸ ಸಿಕ್ಕಿತು. ಈ ಮೂಲಕ ಶಿಕ್ಷಣಕ್ಕೂ ಅಪಾರ ಪ್ರಾಮುಖ್ಯತೆ ನೀಡಿದ್ದರು ಎಂದರು.
ಈ ಸಂದರ್ಭದಲ್ಲಿ “ವಿಶ್ವದ ಸಂತಸತ್ವ ನಾರಾಯಣಗುರು” ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸವನ್ನು ನಿಕಟಪೂರ್ವ ನಿರ್ದೇಶಕರಾದ ಡಾ. ಗಣೇಶ ಅಮೀನ್ ಸಂಕಮಾರ್ ನೀಡಿದರು.
ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳಾದ ಪ್ರೊ. ಪಿ.ಎಲ್. ಧರ್ಮ ಅಧ್ಯಕ್ಷತೆ ವಹಿಸಿದರು. ಪ್ರೊ. ಗಣಪತಿ ಗೌಡ ಎಸ್.(ಪ್ರಾಂಶುಪಾಲರು), ಡಾ. ಜಯರಾಜ್ ಎನ್. (ನಿರ್ದೇಶಕರು) ಹಾಗೂ ರಾಜು ಮೊಗವೀರ ಕೆ.ಕೆ.ಎ.ಎಸ್. ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು