ಇತ್ತೀಚಿನ ಸುದ್ದಿ
Chikkamagaluru | ಮಲೆನಾಡ ಗಾಂಧಿ ದಿ. ಎಚ್.ಜಿ. ಗೋವಿಂದೇಗೌಡರ ಮನೆಯಿಂದ ಭಾರೀ ಕಳವು: ಮನೆಗೆಲಸಕ್ಕಿದ್ದ ದಂಪತಿಯಿಂದಲ್ಲೇ ಕೃತ್ಯ!
22/08/2025, 10:54

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@ail.com
ಮಲೆನಾಡ ಗಾಂಧಿ ಎಂದೇ ಖ್ಯಾತರಾಗಿರುವ ದಿ. ಎಚ್.ಜಿ. ಗೋವಿಂದೇಗೌಡ ಅವರ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್ ಮನೆಯಲ್ಲಿ ಕಳ್ಳತನ ನಡೆದಿದ್ದು, ಸುಮಾರು 7 ಲಕ್ಷ ರೂ. ಮೌಲ್ಯದ ನಗದು ಸಹಿತ ಚಿನ್ನಾಭರಣ ಕಳವು ಆಗಿದೆ
ಅನ್ನ ಕೊಟ್ಟ ಮನೆಗೆ ಕನ್ನವನ್ನು ನೇಪಾಳ ಮೂಲದ ದಂಪತಿ ಮಾಡಿದ್ದಾರೆ. ಮಾಜಿ ಸಚಿವ ದಿ. ಗೋವಿಂದಗೌಡರ ಮನೆಯಲ್ಲಿ ಮನೆಗೆಲಸಕ್ಕಿದ್ದ ದಂಪತಿ ಕಳ್ಳತನ ಮಾಡಿ ನಗದು ಸಹಿತ ಚಿನ್ನಾಭರಣ ದೋಚಿ ಪರಾರಿಯಾಗಿದ್ದಾರೆ.
ಅಂದಾಜು 7 ಲಕ್ಷಕ್ಕೂ ಅಧಿಕ ನಗದು, ಚಿನ್ನಾಭರಣ ದೋಚಿದ್ದಾರೆ.
ಗೋವಿಂದಗೌಡರ ಪುತ್ರ ವೆಂಕಟೇಶ್ ವಾಸವಿರುವ ಕೊಪ್ಪ ತಾಲೂಕಿನ ಮಣಿಪುರ ಎಸ್ಟೇಟ್ ನಲ್ಲಿ ಕಳ್ಳತನ ನಡೆದಿದೆ. ಕಳೆದ 15 ದಿನಗಳ ಹಿಂದಷ್ಟೆ ಕೆಲಸಕ್ಕೆ ಸೇರಿದ ನೇಪಾಳ ಮೂಲದ ದಂಪತಿ ಈ ಕೃತ್ಯವೆಸಗಿದ್ದಾರೆ.
ಮನೆಯವರು ನಿದ್ದೆಗೆ ಜಾರಿದಾಗ ಕಳ್ಳತನ ಮಾಡಿ ಎಸ್ಕೇಪ್ ಆಗಿದ್ದಾರೆ. ಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.