3:55 AM Thursday21 - August 2025
ಬ್ರೇಕಿಂಗ್ ನ್ಯೂಸ್
ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ… ಕುಶಾಲನಗರ: ರಾಷ್ಟ್ರ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೆರೇಹಳ್ಳಿ ಪೊಲೀಸ್ ವಶಕ್ಕೆ ದಲಿತ ಸಿಎಂ ಕೂಗು ತಪ್ಪಿಸಲು ಒಳ ಮೀಸಲಾತಿ ಜಾರಿ: ದಿಲ್ಲಿಯಲ್ಲಿ ಮಾಜಿ ಸಿಎಂ… ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿ ಹೆಕ್ಕಿದ್ದಕ್ಕೆ ಮಾಲೀಕನಿಂದ ಅಮಾನುಷ ಹಲ್ಲೆ: ಯುವಕ ಸಾವು ಧರ್ಮಸ್ಥಳ ಪ್ರಕರಣವನ್ನು ಎನ್ಐಎ ತನಿಖೆಗೆ ವಹಿಸಬೇಕು: ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಮಟ್ಟು ಗುಳ್ಳ ನಂಟು ಉಡುಪಿ ಮಠಕ್ಕೂ ಉಂಟು: ವಾದಿರಾಜ ತೀರ್ಥರು ಬದನೆಗೆ ಹೆಸರಿಟ್ಟರಂತೆ! Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ

ಇತ್ತೀಚಿನ ಸುದ್ದಿ

ಶಿವಳ್ಳಿ ಸಮುದಾಯದ ಸಾತ್ವಿಕ ಅಹಾರ ಸಂಸ್ಕೃತಿ ಇಷ್ಟ: ಪತ್ರಕರ್ತ ರವೀಂದ್ರ ಜೋಶಿ

21/08/2025, 22:26

ಮಂಗಳೂರು(reporterkarnataka.com): ಶಿವಳ್ಳಿ ನಂಬಿಕಸ್ತ ಸಮುದಾಯ, ವಿಶಿಷ್ಟ ಆಹಾರ ಸಂಸ್ಕೃತಿಯ ಶಿವಳ್ಳಿ ಬ್ರಾಹ್ಮಣರ ಖಾದ್ಯಗಳು ತುಂಬಾ ರುಚಿಕರ ಎಂದು ಸಾಹಿತಿ, ಪತ್ರಕರ್ತ ರವೀಂದ್ರ ಜೋಶಿ ಹೇಳಿದರು.
ನಗರದ ಕದ್ರಿ ಶ್ರೀಮಾತಾಕೃಪಾದಲ್ಲಿ ಶಿವಳ್ಳಿ ಸ್ಪಂದನ ಕದ್ರಿ ವಲಯದ ವತಿಯಿಂದ ನಡೆದ ಆಟಿ ಕೂಟ ಸಂಭ್ರಮಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದರು.

ಸಾತ್ವಿಕ ಆಹಾರದಿಂದ ಜನರಲ್ಲಿ ಸಾತ್ವಿಕತೆ ಹೆಚ್ಚುತ್ತದೆ. ಶಿವಳ್ಳಿ ಹೆಸರಿನ ಹೋಟೆಲ್‌ಗಳಲ್ಲಿ ಆಹಾರದಲ್ಲಿ ಮೋಸ ಇರೋದಿಲ್ಲ, ಹೊಟ್ಟೆಗೆ ಸಮಸ್ಯೆ ಆಗುವುದಿಲ್ಲ. ವಿಶಿಷ್ಟ ರುಚಿ ಇರುತ್ತವೆ. ಆದರೆ ಅಂತಹ ಹೋಟೆಲ್‌ಗಳು ಈಗ ನಶಿಸುತ್ತಿವೆ ಎಂದರು. ಸಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯ ಕಳೆದರೆ ಖಿನ್ನತೆ ಉಂಟಾಗುತ್ತದೆ. ಮಾನವ ಸಂಘಜೀವಿ ಇದೇ ರೀತಿಯ ಸಮುದಾಯ ಚಟುವಟಿಕೆಗಳಲ್ಲಿ ಭಾಗಿಯಾಗುವ ಮೂಲಕ ಮಾನಸಿ, ದೈಹಿಕ ಆರೋಗ್ಯ ಹೆಚ್ಚಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.
ಕದ್ರಿ ದೇವಸ್ಥಾನ ಅರ್ಚಕರಾದ ವೇದಮೂರ್ತಿ ಕೃಷ್ಣ ಅಡಿಗರು ಪ್ರವಚನ ನೀಡಿ, ಆಟಿ ತಿಂಗಳಿನಲ್ಲಿ ಮಹಿಳೆಯರು ಹೊಸ್ತಿಲು ಬರೆಯುವ ಕ್ರಮದಿಂದ ಪ್ರಾರಂಭಿಸಿ ತುಳುನಾಡಿನಲ್ಲಿ ಆಟಿ ತಿಂಗಳನ್ನು ವಿಶೇಷ ಕ್ರಮದಿಂದ ಆಚರಿಸುತ್ತಾರೆ. ವಿವಿಧ ಆಚರಣೆಗಳಿವೆ, ಇದಕ್ಕೆ ವೈಜ್ಞಾನಿಕ/ಶಾಸ್ತ್ರದ ಹಿನ್ನೆಲೆ ಇದೆ ಎಂದರು.
ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕಿನ ಅಧ್ಯಕ್ಷ ವಾಸುದೇವ ಭಟ್, ಕಾರ್ಯದರ್ಶಿ ಕೃಷ್ಣ ಭಟ್, ಉಪಾಧ್ಯಕ್ಷ ರಾಮಚಂದ್ರ ಭಟ್ ಎಲ್ಲೂರು, ಆಡಳಿತ ಮಂಡಳಿಯ ಸದಸ್ಯ ನೋಡು ಶ್ರೀನಿವಾಸ ಆಚಾರ್, ಮಾಧ್ಯಮ ಸಲಹೆಗಾರ ಜಿತೇಂದ್ರ ಕುಂದೇಶ್ವರ, ಧಾರ್ಮಿಕ ಪರಿಷತ್‌ ಮಾಜಿ ಸದಸ್ಯ ಗಿರಿಪ್ರಕಾಶ್‌ ತಂತ್ರಿ, ಶಿವಳ್ಳಿ ತಾಲೂಕು ಮಹಿಳಾಘಟಕದ ಅಧ್ಯಕ್ಷೆ ರಮಾಮಣಿ, ವಲಯ ಅಧ್ಯಕ್ಷೆ ಗೀತ ಬೆಳ್ಳೆ, ಕಾರ್ಯದರ್ಶಿ ಶೀಲಾ ಜಯಪ್ರಕಾಶ, ಕೋಶಾಧಿಕಾರಿ ರವಿಕಾಂತ ಭಟ್ ಇದ್ದರು.
ಅನಂತ ಭಟ್ ಮತ್ತು ರಾಮಚಂದ್ರ ಭಟ್ ಎಲ್ಲೂರು ಕಾರ್ಯಕ್ರಮ ನಿರೂಪಿಸಿದರು. ಆ ನಂತರ ಆಟಿ ತಿಂಗಳ ವಿಶೇಷ ಖಾದ್ಯ ವನ್ನು ತಯಾರಿಸಿದ ಮಹಿಳಾ ಸದಸ್ಯರನ್ನು ಸನ್ಮಾನಿಸಲಾಯಿತು. ಖಾದ್ಯಗಳನ್ನು ಎಲ್ಲಾ ಸದಸ್ಯರಿಗೆ, ಅತಿಥಿಗಳಿಗೆ ಉಣಬಡಿಸಲಾಯಿತು.

ಇತ್ತೀಚಿನ ಸುದ್ದಿ

ಜಾಹೀರಾತು