ಇತ್ತೀಚಿನ ಸುದ್ದಿ
ಧಾರವಾಡ: ಪತ್ರಕರ್ತ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠಗೆ ಬಸವ ಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
21/08/2025, 22:08

ಧಾರವಾಡ(reporterkarnataka.com): ಇಲ್ಲಿನ ರಂಗಾಯಣ ಭವನದಲ್ಲಿ ನಡೆದ ವಿಶ್ವ ದರ್ಶನ ಫೌಂಡೇಶನಿನ 5ನೇ ವಾರ್ಷಿಕೋತ್ಸವ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ ಮಾಧ್ಯಮ ಕ್ಷೇತ್ರದ ಬಸವಭೂಷಣ ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಮಸ್ಕಿ ತಾಲೂಕು ಅಧ್ಯಕ್ಷ. ಹಾಗೂ ಜಂಗಮ ಸಮಾಜದ ಮುಖಂಡರಾದ ವಿರುಪಾಕ್ಷಯ್ಯ ಸ್ವಾಮಿ ಸಾಲಿಮಠ ಅವರಿಗೆ.
2025-26ನೇ ಸಾಲಿನ ಈ ಪ್ರಶಸ್ತಿ ನೀಡಲಾಯಿತು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸ್ಥಾಪಕ ರಾಜ್ಯಾಧ್ಯಕ್ಷ ಬಂಗ್ಲೆ ಮಲ್ಲಿಕಾರ್ಜುನ, ವಿಶ್ವ ದರ್ಶನ ಫೌಂಡೇಶನ್ ಅಧ್ಯಕ್ಷ ಎಸ್. ಎಸ್. ಪಾಟೀಲ್ ಹುಬ್ಬಳ್ಳಿ ಹಾಗೂ ಹೈಕೋರ್ಟ್ ಕೋರ್ಟ್ ನಿವೃತ್ತ ನ್ಯಾಯಾಧೀಶರಾದ ಅರಳಿ ನಾಗರಾಜ್ ಸೇರಿದಂತೆ ಮಠಾಧೀಶರು, ಶಾಸಕರು,ಹಿರಿಯ ಸಾಹಿತಿಗಳು,ಹೋರಾಟಗಾರರು, ಚಿಂತಕರು ಉಪಸ್ಥಿತರಿದ್ದರು.