ಇತ್ತೀಚಿನ ಸುದ್ದಿ
ವೈದ್ಯಕೀಯ ವಿದ್ಯಾರ್ಥಿನಿ ಅನನ್ಯಾ ಭಟ್ ನಾಪತ್ತೆ ಪ್ರಕರಣ: ಸುಜಾತ ಭಟ್ ದೂರು ಎಸ್ಐಟಿಗೆ ಹಸ್ತಾಂತರ
21/08/2025, 15:02

ಬೆಳ್ತಂಗಡಿ(reporterkarnataka.com): ವೈದ್ಯಕೀಯ ವಿಧ್ಯಾರ್ಥಿನಿ ಅನನ್ಯಾ ಭಟ್ ಎಂಬಾಕೆ 2003ನೇ ಇಸವಿಯಲ್ಲಿ ಧರ್ಮಸ್ಥಳ ದೇವಸ್ಥಾನದ ವಠಾರದಿಂದ ಕಣ್ಮರೆಯಾಗಿರುವ ಬಗ್ಗೆ ಯುವತಿ ತಾಯಿ ಸುಜಾತಾ ಭಟರ್ ನೀಡಿದ್ದ ದೂರನ್ನು ವಿಶೇಷ ತನಿಖಾ ತಂಡ(ಎಸ್ಐಟಿ)ಕ್ಕೆ ಹಸ್ತಾಂತರಿಸಲಾಗಿದೆ.
ಜುಲೈ 15ರಂದು ಧರ್ಮಸ್ಥಳ ಠಾಣೆಯಲ್ಲಿ ಸುಜಾತಾ ಭಟ್
ನೀಡಿದ್ದ ದೂರು ಅರ್ಜಿಯನ್ನು No:175/PTN/DPS/2025 ರಂತೆ ಸ್ವಿಕರಿಸಲಾಗಿದ್ದು, ಈ ಅರ್ಜಿಯನ್ನು ಡಿಜಿ & ಐಜಿಪಿ ಅವರು ಆಗಸ್ಟ್ 19ರಂದು ನೀಡಿದ ಆದೇಶದ ಮೇರೆಗೆ ಮುಂದಿನ ವಿಚಾರಣೆಗಾಗಿ ವಿಶೇಷ ತನಿಖಾ ತಂಡಕ್ಕೆ ಹಸ್ತಾಂತರಿಸಲಾಗಿದೆ.