8:18 PM Tuesday19 - August 2025
ಬ್ರೇಕಿಂಗ್ ನ್ಯೂಸ್
Kodagu | ಸೋಮವಾರಪೇಟೆ: ಯುವಕನ ಆತ್ಮಹತ್ಯೆ; 3 ದಿನಗಳ ಹುಡುಕಾಟದ ಬಳಿಕ ಮೃತದೇಹ… ರಾಜ್ಯದ ಮೊದಲ ‘ವಿದೇಶ ಅಧ್ಯಯನ ಎಕ್ಸ್‌ಪೋ’ ಯಶಸ್ವಿ: 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು… ಸಂಸೆ ಯುವಕ ಆತ್ಮಹತ್ಯೆ ಪ್ರಕರಣ: ಕುದುರೆಮುಖ ಪೊಲೀಸ್ ಕಾನ್ ಸ್ಟೇಬಲ್ ಸಿದ್ದೇಶ್ ಗೋವಾದಲ್ಲಿ… ಮಲೆನಾಡು ಪ್ರದೇಶದಲ್ಲಿ ಭಾರೀ ಮಳೆ: ಶೃಂಗೇರಿ ಅಕ್ಷರಶಃ ಜಲಾವೃತ; ನಾಳೆ ಶಾಲೆಗಳಿಗೆ ರಜೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಅಬ್ಬರ: ಮಲೆನಾಡು ಅಕ್ಷರಶಃ ಜಲಾವೃತ ಆರ್‌ಎಸ್‌ಎಸ್‌ನ್ನು ತಾಲಿಬಾನಿಗೆ ಹೋಲಿಸುತ್ತಿರುವ ಕಾಂಗ್ರೆಸ್‌ಗೆ ನಾಚಿಕೆಯಾಗಬೇಕು: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Bangalore | ಬಿಜೆಪಿಯವರಿಗೆ ರಾಜಕಾರಣಕ್ಕಾಗಿ ಧರ್ಮಸ್ಥಳ ಬೇಕಾಗಿದೆ: ಡಿಸಿಎಂ ಡಿ.ಕೆ. ಶಿವಕುಮಾರ್ ಕಿಡಿ ವಿರಾಜಪೇಟೆ: ಅರಣ್ಯ ಇಲಾಖೆಯ ಕಾರ್ಯಾಚರಣೆ ಯಶಸ್ವಿ; ನಾಡಿನಲ್ಲಿ ಬೀಡು ಬಿಟ್ಟಿದ್ದ 10ಕ್ಕೂ ಅಧಿಕ… ‘ಧರ್ಮಸ್ಥಳ ವಿರುದ್ಧ ಷಡ್ಯಂತರʼ ರಾಜ್ಯ ಸರ್ಕಾರದ್ದೇ?: ಡಿ.ಕೆ. ಶಿವಕುಮಾರ್‌ ಹೇಳಿಕೆಗೆ ಕೇಂದ್ರ ಸಚಿವ… ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ…

ಇತ್ತೀಚಿನ ಸುದ್ದಿ

Chikkamagaluru | ಕೊಟ್ಟಿಗೆಹಾರ: ಡೆಮೋ ಕಾರಿನಿಂದಲೇ ಡಿಸೇಲ್ ಕದ್ದು ಮಾರಾಟ ಮಾಡಿದ ಶೋ ರೂಂ ಸಿಬ್ಬಂದಿ!

19/08/2025, 20:07

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು

info.reporterkarnataka@gmail.com

ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ-ಬಣಕಲ್ ರಸ್ತೆ ಮಧ್ಯೆ ಶೋ ರೂಂ ಸಿಬ್ಬಂದಿಗಳೇ ಡೆಮೋ ಕಾರಿನಿಂದ ಡಿಸೇಲ್ ಕಳವು ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಮಂಗಳೂರಿನಿಂದ ಕಡೂರಿನತ್ತ ಹೊಸ ಟಾಟಾ ಯೋಧ ಕಾರನ್ನು ಶೋ ರೂಂಗೆ ತಲುಪಿಸಲು ಹೊರಟಿದ್ದ ಸಿಬ್ಬಂದಿಗಳು ಮಾರ್ಗಮಧ್ಯೆ ಕಾರಿನ ಇಂಜಿನ್ ಪಕ್ಕದ ಪಂಪ್ ಪೈಪ್ ಬಿಚ್ಚಿ ಸುಮಾರು 10 ಲೀಟರ್ ಡಿಸೇಲ್ ಇಳಿಸಿ ಸ್ಥಳೀಯ ಅಂಗಡಿಗಳಿಗೆ ಮಾರಾಟ ಮಾಡಿದ್ದಾರೆ.


ಕಳ್ಳತನ ಮಾಡಿದ ಹಣದಿಂದ ಎಣ್ಣೆ ಹೊಡೆದು, ನಾನ್ ವೆಜ್ ಊಟ ಮಾಡಿ ವಾಪಸ್ ಹೋದ ಸಿಬ್ಬಂದಿಗಳ ಕಾರ್ಯ ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.


ಹೊಸ ವಾಹನಗಳನ್ನು ಶೋ ರೂಂಗಳಿಗೆ ತಲುಪಿಸುವಾಗಲೇ ಸಿಬ್ಬಂದಿಗಳು ಇಂತಹ ದುಷ್ಕೃತ್ಯದಲ್ಲಿ ತೊಡಗಿರುವುದು ಗಂಭೀರವಾಗಿದ್ದು,ಈ ಕುರಿತು ಸ್ಥಳೀಯರು ಕಂಪನಿ ಮಟ್ಟದಲ್ಲಿ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು