ಇತ್ತೀಚಿನ ಸುದ್ದಿ
Shivamogga | ತೀರ್ಥಹಳ್ಳಿ: ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇಗುಲದಿಂದ 1 ಲಕ್ಷಕ್ಕೂ ಅಧಿಕ ಹಣ ಕದ್ದ ಖತರ್ನಾಕ್ ಕಳ್ಳನ ಬಂಧನ
15/08/2025, 22:15

ರಶ್ಮಿ ಶ್ರೀಕಾಂತ್ ನಾಯಕ್ ತೀರ್ಥಹಳ್ಳಿ ಶಿವಮೊಗ್ಗ
info.reporterkarnataka@gmail.com
ತೀರ್ಥಹಳ್ಳಿಯ ಪುರಾಣ ಪ್ರಸಿದ್ಧ ಶ್ರೀ ರಾಮೇಶ್ವರ ದೇವಸ್ಥಾನದಿಂದ ಒಂದು ಲಕ್ಷಕ್ಕೂ ಅಧಿಕ ಹಣ ಕಳ್ಳತನ ಮಾಡಿದ್ದ ಖತರ್ನಾಕ್ ಕಳ್ಳನ ಬಂಧನವಾಗಿದೆ.
ಸಿಸಿ ಕ್ಯಾಮರಾ ಕಣ್ಣು ತಪ್ಪಿಸಿದ್ದ ಖತರ್ನಾಕ್ ಕಳ್ಳ ರಾಮೇಶ್ವರನ ಮೂರನೇ ಕಣ್ಣಿನಲ್ಲಿ ಸಿಕ್ಕಿಬಿದ್ದಂತೆ ಆಗಿದೆ ಎಂದು ಭಕ್ತರು ಮಾತನಾಡಿಕೊಳ್ಳುತ್ತಿದ್ದಾರೆ.
ಮೊದಲಿಗೆ ರಾಮೇಶ್ವರ ದೇವಸ್ಥಾನದ ಪಕ್ಕದಲ್ಲಿ ಇದ್ದಂತಹ ಮಾಧವ ದೇವಸ್ಥಾನದಲ್ಲಿ ಕಳ್ಳತನ ಮಾಡಲು ಯತ್ನಿಸಿ ಪಕ್ಕದ ವೆಂಕಟರಮಣ ದೇವಸ್ಥಾನದ ಸಿಸಿ ಕ್ಯಾಮರದಲ್ಲಿ ಸೇರಿಯಾಗಿತ್ತು. ನಂತರ ರಾಮೇಶ್ವರ ದೇವಸ್ಥಾನದ ಅನ್ನ ದಾಸೋಹ ಕೊಠಡಿಯಲ್ಲಿ ಇದ್ದ ಹಣವನ್ನು ಕಳ್ಳತನ ಮಾಡಿದ್ದ. ಅಷ್ಟೇ ಅಲ್ಲದೆ ಎರಡು ಮೊಬೈಲ್ ಕೂಡ ದೋಚಿದ್ದ. ಅನ್ನ ದಾಸೋಹ ಕೊಠಡಿಯ ಹಲವು ಬಾಗಿಲುಗಳನ್ನು ಮುರಿದು ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಾಗೂ ಸಣ್ಣದೊಂದು ಕಾಣಿಕೆ ಹುಂಡಿ ಸಹ ತೆಗೆದು ಅದರಲ್ಲಿದ್ದ ಹಣ ದೋಚಿಕೊಂಡು ಪರಾರಿಯಾಗಿದ್ದ.
ಮಾಸ್ಕ್ ಧರಿಸಿ ಕಳ್ಳತನ ಮಾಡಿದ್ದ ಆ ಮಾಸ್ಕ್ ಮ್ಯಾನ್ ಯಾರು? ಎಂಬುದು ಬಾರಿ ಸಂಚಲನ ಮೂಡಿಸಿದ್ದ. ತೀರ್ಥಹಳ್ಳಿ ಪೊಲೀಸರ ಚಾಣಕ್ಷತನದಿಂದ ಮೂರು ದಿನದೊಳಗೆ ಕಳ್ಳನನ್ನು ಬಂಧಿಸಲಾಗಿದೆ. ಡಿ ವೈ ಎಸ್ ಪಿ ಅರವಿಂದ್ ಕಲಗುಂಜಿ ಅವರ ನೇತೃತ್ವದಲ್ಲಿ ನಡೆದ ಕಾರ್ಯಚರಣೆಯಿಂದಾಗಿ ಖತರ್ನಾಕ್ ಕಳ್ಳನ ಬಂಧನವಾಗಿದೆ.
ಬಂಧನವಾದ ಖತರ್ನಾಕ್ ಕಳ್ಳನಿಂದ ಎರಡು ಮೊಬೈಲ್ ಹಾಗೂ 20 ಸಾವಿರ ಹಣ ವಶಕ್ಕೆ ಪಡೆಯಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.