ಇತ್ತೀಚಿನ ಸುದ್ದಿ
Kodagu | ಸುಮಾರು 1.50 ಲಕ್ಷ ಮೌಲ್ಯದ ಅಕ್ರಮ ಮರದ ನಾಟ ಸಾಗಾಟ: ಓರ್ವನ ಬಂಧನ
15/08/2025, 21:12

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಅಕ್ರಮವಾಗಿ ಮರದ ನಾಟಗಳನ್ನು ಸಾಗಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಸಿಬ್ಬಂದಿಗಳು ಮಾಲು ಸಮೇತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅರಪಟ್ಟು ನಿವಾಸಿ ಕೆ. ಎ. ಆನಂದ ಬಂಧಿತ ಆರೋಪಿಯಾಗಿದ್ದು, ಈತ ವಿರಾಜಪೇಟೆ ವಲಯ ಅರಣ್ಯ ವ್ಯಾಪ್ತಿಗೆ ಒಳಪಡುವ ಮಡಿಕೇರಿ ವಿರಾಜಪೇಟೆ ಮುಖ್ಯ ರಸ್ತೆಯ ವಿರಾಜಪೇಟೆ ತಾಲ್ಲೂಕಿನ ಮಠದ ಗದ್ದೆ ಎಂಬಲ್ಲಿ ಪಿಕಪ್ ವಾಹನ ಕೆ ಎ 12,ಎ 3707 ನಲ್ಲಿ ನಾಟ ಗಳನ್ನು ಸಾಗಾಟ ಮಾಡುತ್ತಿರುವ ಬಗ್ಗೆ ಸಿಕ್ಕ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ 1.50 ಲಕ್ಷ ಮೌಲ್ಯದ ಮರ ಹಾಗೂ ವಾಹನವನ್ನು ವಶಕ್ಕೆ ಪಡೆಯಲಾಗಿದೆ.