ಇತ್ತೀಚಿನ ಸುದ್ದಿ
ಸಾಲದ ಬಾಧೆ: ಆಟೋ ಚಾಲಕ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನ; ಅರಣ್ಯ ಸಿಬ್ಬಂದಿಗಳಿಂದ ರಕ್ಷಣೆ
15/08/2025, 15:39

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಸಾಲದ ಬಾಧೆಯಿಂದ ಬೇಸತ್ತ ಆಟೋ ಚಾಲಕನೋರ್ವ ಕುಶಾಲನಗರ-ಕೊಪ್ಪ ನಡುವಿನ ಸೇತುವೆಯಿಂದ ಕಾವೇರಿ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದು ಅಲ್ಲೇ ಕರ್ತವ್ಯದಲ್ಲಿದ್ದ ಅರಣ್ಯ ಸಿಬ್ಬಂಧಿಗಳು ರಕ್ಷಿಸಿದ ಘಟನೆ ನಡೆದಿದೆ.
ಕುಶಾಲನಗರ ಪಟ್ಟಣದಲ್ಲಿ ಆಟೋ ಚಾಲಕನಾಗಿ ಕೆಲಸ ನಿರ್ವಹಿಸುತಿದ್ದ ಇಲ್ಲಿಗೆ ಸಮೀಪದ ಚಿಕ್ಕಹೊನ್ನೂರು ಗ್ರಾಮದ ನಿವಾಸಿ ಹರೀಶ್ (40) ಸಾಲದ ಸುಳಿಯಲ್ಲಿ ಸಿಲುಕಿ ನೊಂದು ಕೊಪ್ಪ ಗಡಿ ಕಾವೇರಿ ಸೇತುವೆ ಮೇಲಿನಿಂದ ಆತ್ಮಹತ್ಯೆಗೆ ಯತ್ನಿಸುತ್ತಿದ್ದ ಹರೀಶ್ ನನ್ನು ಚೆಕ್ ಪೋಸ್ಟ್ ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳಾದ ಸಂಪತ್ ಮತ್ತು ಧರ್ಮ ರವರ ಸಮಯ ಪ್ರಜ್ಞೆ ಯಿಂದ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.ಈ ಬಗ್ಗೆ ಕುಶಾಲನಗರ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.