ಇತ್ತೀಚಿನ ಸುದ್ದಿ
Chikkamagaluru | ಶೃಂಗೇರಿ: ತುಂಗಾ ನದಿ ಈಜಿ ದಡ ಹತ್ತಲು ಕಾಡಾನೆಗಳ ಪರದಾಟ
15/08/2025, 13:18

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnataka@gmail.com
ಲೋ… ಮಗಾ… ಇಲ್ಲಿ ಹೈಟ್ ಇದೆ ಕಣೋ… ಹತ್ತಕ್ಕಾಗಲ್ಲ… ಆಕಡೆ ನೋಡೋಣ ಬಾ…
ಬೇಡ… ಬೇಡ… ಇಲ್ಲೂ ಬೇಡ… ಅಲ್ ಮುಂದಕ್ಕೆ ಹೋಗು…
ಇದು ನಾಡಿಗೆ ಬಂದ ಕಾಡಾನೆಗಳ ನಡುವೆ ನಡೆದ ಡೈಲಾಗ್. ಶೃಂಗೇರಿ ದೇವಸ್ಥಾನ ಸಮೀಪ ತುಂಗಾ ನದಿಯಲ್ಲಿ ಈಜಿ ದಡ ಹತ್ತಲು ಆನೆಗಳ ನಡೆಸಿದ ಪರದಾಟ ವಿಷಯವಿದು.
ಒಂದು ಗುಂಪು ಕಾಡಲ್ಲಿದ್ರೆ, ಮತ್ತೊಂದು ಗುಂಪು ನಾಡಿಗೆ ಎಂಟ್ರಿ ಕೊಟ್ಟಿದೆ. ಶೃಂಗೇರಿ ಪಟ್ಟಣದ ನರಸಿಂಹವನದ ಸಮೀಪದ ಕಾಡಾನೆಗಳು ಪ್ರತ್ಯಕ್ಷವಾಗಿದೆ.
ಮೊನ್ನೆ ತುಂಗಾ ನದಿ ತಟ್ಟದಲ್ಲಿ ಮರಿ ಜೊತೆ ತಾಯಾನೆ ಕಾಣಿಸಿಕೊಂಡಿತ್ತು. ಕಾಡಾನೆ ಹಿಂಡು ಸಾಗಿದ ದಾರಿಯಲ್ಲೇ ಬರುತ್ತಿರುವ ಮತ್ತೊಂದು ಗುಂಪು ಇದಾಗಿದೆ. ಶೃಂಗೇರಿ ತಾಲೂಕಿನ ಹೊಸಹಕ್ಲು, ಕುಂತೂರು ವ್ಯಾಪ್ತಿಯಲ್ಲಿ ಆನೆಗಳ ಕಾಟ ಜಾಸ್ತಿಯಾಗಿದೆ.
ಆನೆಗಳು ಪಟ್ಟಣದ ಸಮೀಪವೇ ಇರೋದ್ರಿಂದ ಸ್ಥಳಿಯರಲ್ಲಿ ಆತಂಕ ಹೆಚ್ಚಿದೆ.