ಇತ್ತೀಚಿನ ಸುದ್ದಿ
ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ದೂರು ಸೇರ್ಪಡೆ: 17 ವರ್ಷದ ತಂಗಿ ನಾಪತ್ತೆ ಬಗ್ಗೆ ಸಹೋದರ ದೂರು
14/08/2025, 22:25

ಮಂಗಳೂರು(reporterkarnataka.com): ಧರ್ಮಸ್ಥಳ ಪ್ರಕರಣಕ್ಕೆ ಮತ್ತೊಂದು ದೂರು ಸೇರ್ಪಡೆಯಾಗಿದೆ. 2012ರಲ್ಲಿ ಧರ್ಮಸ್ಥಳಕ್ಕೆ ಹೋಗಿದ್ದ ತನ್ನ ಅಪ್ರಾಪ್ತ ವಯಸ್ಸಿನ ತಂಗಿ ಕಾಣೆಯಾಗಿದ್ದಾಳೆ ಎಂದು ಆಕೆಯ ಸಹೋದರ ಪುಂಜಾಲಕಟ್ಟೆ ಠಾಣೆಗೆ ದೂರು ನೀಡಿದ್ದಾರೆ.
ಕಾವಳಮೂಡೂರು ನಿವಾಸಿ ನಿತಿನ್ ದೇವಾಡಿಗ ಎಂಬವರ ದೂರಿನಂತೆ, ಅವರ ಸಹೋದರಿ, 17ರ ಹರೆಯದ ಹೇಮಲತಾ ಎಂಬಾಕೆಯು 2012ರಲ್ಲಿ ಧರ್ಮಸ್ಥಳ ದೇವಸ್ಥಾನಕ್ಕೆ ತೆರಳಿದವರು, ಆ ಬಳಿಕ ಮನೆಗೆ ಹಿಂತಿರುಗಿ ಬಂದಿರುವುದಿಲ್ಲ. ಪ್ರಸ್ತುತ ಧರ್ಮಸ್ಥಳದಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಂಡು ನಾಪತ್ತೆಯಾಗಿರುವ ತನ್ನ ಸಹೋದರಿಯ ಬಗ್ಗೆ ತನಿಖೆ ನಡೆಸಬೇಕಾಗಿ ದೂರಿನಲ್ಲಿ ಒತ್ತಾಯಿಸಿದ್ದಾರೆ.
ದೂರುದಾರರು ಪುಂಜಾಲಕಟ್ಟೆ ಠಾಣೆಯಲ್ಲಿ ನೀಡಿದ ದೂರರ್ಜಿಯನ್ನು ಸ್ವೀಕರಿಸಿಕೊಳ್ಳಲಾಗಿದ್ದು, ಮುಂದಿನ ವಿಚಾರಣೆ ನಡೆಸಲಾಗುತ್ತಿದೆ.