ಇತ್ತೀಚಿನ ಸುದ್ದಿ
Chikkamagaluru | ಬಣಕಲ್: ಯುವಕನ ಜತೆ 22ರ ಹರೆಯದ ಗೃಹಿಣಿ ಪರಾರಿ: ಹೆದ್ದಾರಿ ತಡೆದು ಪ್ರತಿಭಟನೆ
14/08/2025, 21:34

ಸಂತೋಷ್ ಅತ್ತಿಗೆರೆ ಚಿಕ್ಕಮಗಳೂರು
info.reporterkarnata@gmail.com
ವಿವಾಹಿತ ಮಹಿಳೆಯೊಬ್ಬರು ಮುಸ್ಲಿಂ ಯುವಕನ ಜೊತೆ ಪರಾರಿ ಆರೋಪ ಹಿನ್ನೆಲೆಯಲ್ಲಿ ಹಿಂದೂ ಸಂಘಟನೆಯ ಕಾರ್ಯಕರ್ತರು ಮೂಡಿಗೆರೆ ತಾಲೂಕಿನ ಬಣಕಲ್ ಠಾಣೆ ಎದುರು ಜಮಾಯಿಸಿ, ರಸ್ತೆ ತಡೆ ನಡೆಸಿದರು.
2 ವರ್ಷದಿಂದ ಮದುವೆಯಾಗಿದ್ದ 22 ವರ್ಷದ ಪೂಜಾ ಎಂಬ ಗೃಹಿಣಿ ಮುಸ್ಲಿಂ ಯುವಕ ಆಶಿಕ್ ಎಂಬಾತನ ಜತೆ ಪರಾರಿಯಾದ ಹಿನ್ನೆಲೆಯಲ್ಲಿ ಉದ್ವಿಗ್ನ ಪರಿಸ್ಥಿತಿ ನೆಲೆಸಿದೆ.
ನಾಪತ್ತೆಯಾದ ಮಹಿಳೆಯ ಪತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.ದೂರಿನನ್ವಯ ಕಾರ್ಯಾಚರಣೆ ನಡೆಸಿದ ಪೊಲೀಸರು ಮಹಿಳೆಯನ್ನ ಪತ್ತೆ ಮಾಡಿದ್ದಾರೆ.
ಹಿಂದೂ ಸಂಘಟನೆ ಮುಖಂಡರು ಹಾಗೂ ಗ್ರಾಮಸ್ಥರು
ಪೊಲೀಸ್ ಠಾಣೆಯ ಮುಂದೆ ಜಮಾಯಿಸಿದರು. ಪೊಲೀಸ್ ಠಾಣೆಯ ಗೇಟ್ ಹಾಕಿದ್ದಕ್ಕೆ ಹಿಂದೂ ಸಂಘಟನೆಗಳ ಆಕ್ರೋಶ ವ್ಯಕ್ತಪಡಿಸಿದವು.
ಏಕಾಏಕಿ ರಾಷ್ಟ್ರೀಯ ಹೆದ್ದಾರಿ ರಸ್ತೆ ತಡೆ ನಡೆಸಿದ ಹಿಂದೂ ಮುಖಂಡರು ಪ್ರತಿಭಟನೆ ನಡೆಸಿದರು. ರಸ್ತೆ ತಡೆ ನಡೆಸಿದ ಸಂಘಟಕರು- ಗ್ರಾಮಸ್ಥರ ಮನವೋಲಿಸಲು ಪೊಲೀಸರ ಹರಸಾಹಸ ನಡೆಸಬೇಕಾಯಿತು. ನಂತರ ಠಾಣೆ ಮುಂಭಾಗಕ್ಕೆ ಬಿಡುವ ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಯಿತುಮ
ಮುಸ್ಲಿಂ ಯುವಕನ ವಿರುದ್ಧ ಕುಟುಂಬಸ್ಥರು ಹಾಗೂ ಹಿಂದೂ ಸಂಘಟಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಣಕಲ್ ಪೊಲೀಸ್ ಠಾಣೆಯ ಮುಂದೆ ಭಾರಿ ಪ್ರತಿಭಟನೆ ನಡೆಸಲಾಯಿತು.