ಇತ್ತೀಚಿನ ಸುದ್ದಿ
Kodagu | ಮಡಿಕೇರಿ: ಅಸ್ಸಾಂ ಕಾರ್ಮಿಕರಿಂದ ಆಧಾರ್ ಕಾರ್ಡಿನ ದುರ್ಬಳಕೆ ಆರೋಪ
13/08/2025, 20:01

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಅಸ್ಸಾಂ ಕಾರ್ಮಿಕರು ಇತ್ತೀಚಿನ ದಿನಗಳಲ್ಲಿ ಕೊಡಗಿಗೆ ವಲಸಿಗರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ನೆಲೆಯೂರಿದ್ದು. ಅಸ್ಸಾಂ ಕಾರ್ಮಿಕರು ಆಧಾರ್ ಕಾರ್ಡನ್ನು ದುರ್ಬಳಕೆ ಮಾಡುತ್ತಿರುವುದು ಹೆಚ್ಚಾಗಿ ಕಂಡುಬರುತ್ತದೆ.
ಮಡಿಕೇರಿ ಇಂಡಿಯನ್ ಬ್ಯಾಂಕ್ ನಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು ಅಸ್ಸಾಂ ಕಾರ್ಮಿಕ ನೊಬ್ಬ ಖಾತೆ ತೆರೆಯಲು ಕೊಡಗಿನ ವಿಳಾಸ ಹೊಂದಿರುವ ಆಧಾರ್ ಕಾರ್ಡ್ನೊಂದಿಗೆ ಬಂದಿದ್ದು ಬ್ಯಾಂಕಿನ ಸಿಬ್ಬಂದಿಗಳು ಬಯೋಮೆಟ್ರಿಕ್ ನಲ್ಲಿ ಪರಿಶೀಲಿಸಿದಾಗ ವ್ಯಕ್ತಿಯ ಸಂಪೂರ್ಣ ವಿವರ ಅಸ್ಸಾಂ ವಿಳಾಸವನ್ನು ತೋರಿಸುತ್ತಿರುವುದು ಅಚ್ಚರಿಯ ಸಂಗತಿಯಾಗಿದೆ.
ವ್ಯಕ್ತಿಯ ಬಳಿ ಅಸ್ಸಾಮಿನ ವಿಳಾಸ ಹೊಂದಿರುವ ಆಧಾರ್ ಕಾರ್ಡ್, ಕೊಡಗಿನ ವಿಳಾಸ ಹೊಂದಿರುವ ಆಧಾರ ಕಾರ್ಡ್ ಇವೆರಡು ಇರುವುದು ಕಂಡು ಬಂದಿದೆ. ಕೊಡಗಿನಲ್ಲಿ ಇದೇ ರೀತಿ ಹಲವು ಸಂಸ್ಥೆಗಳು ಈ ಸಮಸ್ಯೆಯನ್ನು ಎದುರಿಸುತ್ತಿದೆ ಎನ್ನಲಾಗಿದೆ. ಈ ರೀತಿಯ ಪ್ರಕರಣಗಳ ಕುರಿತು ಸರ್ಕಾರವು ಗಂಭೀರವಾಗಿ ಪರಿಗಣಿಸಿ ಪರಿಶೀಲಿಸಬೇಕೆಂದು ಇಂಡಿಯನ್ ಬ್ಯಾಂಕಿನ ಮ್ಯಾನೇಜರ್ ಮನವಿ ಮಾಡಿದ್ದಾರೆ.