11:56 PM Monday29 - June 2026
ಬ್ರೇಕಿಂಗ್ ನ್ಯೂಸ್
ಗೆಳೆಯ ವೈಶಾಖ್‌ ಆತ್ಮಹತ್ಯೆ ಪ್ರಕರಣ: ಫಸ್ಟ್‌ ರಿಯಾಕ್ಷನ್ ಕೊಟ್ಟ ನಟಿ ಕೃಷಿ ತಾಪಂಡ ರೆಸಾರ್ಟ್ ನ ಈಜುಕೊಳದಲ್ಲಿ ದುರಂತ | 10 ಅಡಿ ಎತ್ತರದಿಂದ 4 ಅಡಿ… 2 ದಿನಗಳ ರಾಜ್ಯ ಪ್ರವಾಸ ಮುಗಿಸಿದ ಉಪ ರಾಷ್ಟ್ರಪತಿ ಸಿ.ಪಿ. ರಾಧಾಕೃಷ್ಣನ್ ಅವರಿಗೆ… ಆರೆಸ್ಸೆಸ್ ವಿರುದ್ಧ ಪೋಸ್ಟ್ : ಗೃಹ ಸಚಿವ ಪ್ರಿಯಾಂಕ್ ಖರ್ಗೆ, ನಲಪಾಡ್‌ಗೆ ಕೋರ್ಟ್… ಕ್ರಿಪ್ಟೋ ಹೂಡಿಕೆ ಹೆಸರಿನಲ್ಲಿ ಕೋಟ್ಯಂತರ ರೂ. ವಂಚನೆ ಆರೋಪ: ತೀರ್ಥಹಳ್ಳಿ ಕಾಲೇಜು ಪ್ರಾಧ್ಯಾಪಕ… ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ತೂರಿದ ಪ್ರಕರಣ | 4 ಮಂದಿ… ಮುಂಬೈ | ಮೊಹರಂ ವೇಳೆ ಸಾಮೂಹಿಕ ವಿಷಪ್ರಾಶನಕ್ಕೆ ಸಂಚು: 14,900 ಕ್ಯಾಪ್ಸುಲ್‌ ವಶಕ್ಕೆ;… ತೀರ್ಥಹಳ್ಳಿ: ಪಲ್ಸ್ ಪೋಲಿಯೋ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ಟ್ರೆಕ್ಕಿಂಗ್ ವೇಳೆ ದುರಂತ: ಹೃದಯಾಘಾತದಿಂದ ಚಿತ್ರ ನಿರ್ಮಾಪಕ ಭಾ ಮಾ ಹರೀಶ್ ಪುತ್ರ… ವಿರಾಜಪೇಟೆ: ಕಾಡಾನೆ ದಾಳಿಯಿಂದ ಕೂದಲೆಳೆ ಅಂತರದಲ್ಲಿ ಮಹಿಳೆ ಪಾರು

ಇತ್ತೀಚಿನ ಸುದ್ದಿ

Udupi | ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌: ಉಡುಪಿಯ ಮಾನ್ಸಿಗೆ ಕಂಚು; ಸಚಿವೆ ಹೆಬ್ಬಾಳ್ಕರ್ ಶ್ಲಾಘನೆ

13/08/2025, 19:10

ಉಡುಪಿ(reporterkarnataka.com): ಉತ್ತರ ಪ್ರದೇಶದ ಗ್ರೇಟರ್‌ ನೊಯಿಡಾದಲ್ಲಿ ನಡೆದ ರಾಷ್ಟ್ರೀಯ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನಲ್ಲಿ ಉಡುಪಿ ಜಿಲ್ಲೆಯ ಮಾನ್ಸಿ ಜೆ ಸುವರ್ಣ ಅವರು ಕಂಚಿನ ಪದಕ ಗೆದ್ದಿದ್ದು, ಅವರ ಸಾಧನೆಯನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಅವರು ಶ್ಲಾಘಿಸಿದ್ದಾರೆ.


ಮೀನುಗಾರಿಕೆಯಲ್ಲಿ ತೊಡಗಿರುವ ಮಲ್ಪೆಯ ಮಾಲತಿ ಹಾಗೂ ಜಗದೀಶ್ ಸುವರ್ಣ ದಂಪತಿ ಪುತ್ರಿ ಮಾನ್ಸಿ ಗೆದ್ದಿರುವ ಕಂಚಿನ ಪದಕ ರಾಜ್ಯದ ಇತರ ಬಾಕ್ಸರ್‌ಗಳಿಗೆ ಸ್ಫೂರ್ತಿಯಾಗಿದೆ. ಕರಾವಳಿ ಜಿಲ್ಲೆಗಳಲ್ಲಿ ಬಾಕ್ಸಿಂಗ್‌ ಕ್ರೀಡೆ ವಿರಳ. ಈ ಕ್ರೀಡೆ ಮತ್ತಷ್ಟು ಬೆಳೆಯಲಿ. ಕರಾವಳಿಯ ಮಕ್ಕಳು ಬಾಕ್ಸಿಂಗ್‌ನಲ್ಲಿ ಮಿಂಚಲಿ ಎಂದು ಸಚಿವರು ಹಾರೈಸಿದ್ದಾರೆ.
ಮಾನ್ಸಿ ಸುವರ್ಣ ಮುಂದಿನ ದಿನಗಳಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಹೆಚ್ಚು ಪದಕಗಳನ್ನು ಜಯಿಸಲಿ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿ ತರಲಿ. ಆಕೆಯ‌ ಸಾಧನೆಗೆ ನಮ್ಮ ಸರ್ಕಾರ ಸದಾ ಬೆನ್ನೆಲುಬು ಆಗಿ ನಿಲ್ಲಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

ಜಾಹೀರಾತು