ಇತ್ತೀಚಿನ ಸುದ್ದಿ
ಅಕ್ರಮ ಮಾದಕ ವಸ್ತು ಸಾಗಾಟ: ಇಬ್ಬರ ಬಂಧನ; 2.50 ಲಕ್ಷ ರೂ. ಮೌಲ್ಯದ 7 ಕೆಜಿಗೂ ಅಧಿಕ ಗಾಂಜಾ ವಶ
11/08/2025, 21:02

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಕೊಡಗು ಜಿಲ್ಲೆಯಿಂದ ಕೇರಳಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ವೇಳೆ ವಿರಾಜಪೇಟೆ ನಗರ ಪೊಲೀಸರು ದಾಳಿ ನಡೆಸಿ ಮಾಲು ಸಮೇತ ಇಬ್ಬರನ್ನು ಬಂಧಿಸಿದ್ದಾರೆ.
ವಿರಾಜಪೇಟೆ ಠಾಣಾ ವ್ಯಾಪ್ತಿಗೆ ಒಳಪಡುವ ಆರ್ಜಿ ಗ್ರಾಮದಲ್ಲಿ ಗಾಂಜಾ ವಸ್ತುಗಳನ್ನು ಕೇರಳಕ್ಕೆ ಮಾರಾಟ ಮಾಡಲು ಯತ್ನಿಸಿದ್ದ ಹುಣಸೂರಿನ ವಿಜಯನಗರದ ಅನೀಸ್ ಅಹಮದ್( 45 )ಮತ್ತು ಹುಣಸೂರು ಪಟ್ಟಣದ ಸ್ಕೋರ್ ಬೀದಿ ನಿವಾಸಿ ಚೇತನ್ (40) ಬಂಧಿತಾರಾಗಿದ್ದು, ಬಂಧಿತರಿಂದ ಸ್ವಿಫ್ಟ್ ಕಾರು, 7 ಕೆಜಿ 872 ಗ್ರಾಂ ತೂಕದ (2,50,000) ಮೌಲ್ಯದ ಗಾಂಜಾ ಪದಾರ್ಥ ನಾಲ್ಕು ಗಾಂಜಾ ಪ್ಯಾಕೆಟ್ ಮತ್ತು ಒಂದು ಮೊಬೈಲ್ ಅನ್ನು ವಶಕ್ಕೆ ಪಡೆಯಲಾಗಿದೆ.