8:51 PM Thursday7 - August 2025
ಬ್ರೇಕಿಂಗ್ ನ್ಯೂಸ್
ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ ಮುತ್ತಾಲಿಕ್ ಜತೆ ವೇದಿಕೆ ಹಂಚಿಕೊಂಡ ಕೈ ಶಾಸಕಿ: ನಯನಾ ಮೋಟಮ್ಮ ವಿರುದ್ಧ ಪ್ರಾಯಶ್ಚಿತ್ತ… ಮತದಾರರ ಹಕ್ಕು ರಕ್ಷಣೆ ರಾಜಕೀಯ ಪಕ್ಷಗಳ ಕರ್ತವ್ಯ: ಡಿಸಿಎಂ ಡಿ.ಕೆ. ಶಿವಕುಮಾರ್ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ‘ರಿದಂ ಆಫ್ ಬಿಎಲ್‌ಆರ್‌’: ವಿಶಿಷ್ಟ ಧ್ವನಿ ಗುರುತು… ಶಿಬು ಸೊರೇನ್ ನಿಧನ: ಮತಗಳ್ಳತನ ವಿರುದ್ಧ ಪ್ರತಿಭಟನಾ ಸಭೆ ಆ. 8ಕ್ಕೆ ಮುಂದೂಡಿಕೆ:… ವಿಶ್ವ ವಿಖ್ಯಾತ ಮೈಸೂರು ದಸರಾ: ಪುಷ್ಪಾರ್ಚನೆ ಮೂಲಕ ಅಭಿಮನ್ಯು ನೇತೃತ್ವದ ಗಜ ಪಯಣಕ್ಕೆ… Shivamogga | ತೀರ್ಥಹಳ್ಳಿ: ಮನೆಗಾಗಿ ಸಾಲ; ಮನನೊಂದ ವೃದ್ದ ದಂಪತಿ ಒಂದೇ ಮರಕ್ಕೆ… Kodagu | ಬೆಕ್ಕೆಸುಡ್ಲೂರಿನಲ್ಲಿ ತಡರಾತ್ರಿ ರಸ್ತೆ ಮಧ್ಯೆ ಲಾರಿ ಪಲ್ಟಿ: ಕುಟ್ಟ- ಪೊನ್ನಂಪೇಟೆ… Kodagu | ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ: ರ್‍ಯಾಂಬುಟನ್ ಹಣ್ಣು ಮಾರಾಟಕ್ಕೆ ನಿರ್ಬಂಧ; ವ್ಯಾಪಾರಸ್ಥರ… SIT | ಧರ್ಮಸ್ಥಳ ಪ್ರಕರಣ: ದೂರು ನೀಡಲು ಮತ್ತೊಬ್ಬ ದೂರುದಾರ ಎಸ್ಐಟಿ ಕಚೇರಿಗೆ…

ಇತ್ತೀಚಿನ ಸುದ್ದಿ

ಶ್ರೀರಂಗಪಟ್ಟಣ: ಕಾವೇರಿ ನದಿಯಲ್ಲಿ ಅಳಿವಿನoಚಿನಲ್ಲಿರುವ ನೀರು ನಾಯಿಗಳ ಕಳ್ಳಬೇಟೆ: ಪ್ರಾಣಿ ಪ್ರಿಯರಿಂದ ಕಾರ್ಯಾಚರಣೆ

07/08/2025, 19:45

ಗಿರಿಧರ್ ಕೊಂಪುಳಿರ ಮಡಿಕೇರಿ

info.reporterkarnata@gmail.com

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ರೈಲ್ವೆ ನಿಲ್ದಾಣದ ಬಳಿ ಇರುವ ರಾಂಪುರ ಹಳೆಯ ಸೇತುವೆಯ ನದಿ ತೀರದಲ್ಲಿ ನೀರು ನಾಯಿಗೆ ಬೇಟೆಯಾಡಲು ಬಳಸುವ ಬೋನುಗಳನ್ನು ಇರಿಸುತ್ತಿದ್ದ ವಿರುದ್ಧ ಸಾಮಾಜಿಕ ಕಾರ್ಯಕರ್ತರು ಕಾರ್ಯಾಚರಣೆ ನಡೆಸಿದ್ದಾರೆ.


ಸಾಮಾಜಿಕ ಕಾರ್ಯಕರ್ತರು ಕಾರ್ಯನಿಮಿತ ರಾಂಪುರ ಮಾರ್ಗದಿಂದ ಶ್ರೀರಂಗಪಟ್ಟಣಕ್ಕೆ ಬರುವ ಸೇತುವೆಯ ಮೇಲ್ಬಾಗದಿಂದ ಬೋನ್ ಗಳನ್ನು ಗಮನಿಸಿದ್ದಾರೆ. ಶ್ರೀರಂಗಪಟ್ಟಣ ಚಂದನ್ ನೇತ್ರತ್ವದಲ್ಲಿ ಬೋನ್ ಹಾಕುತ್ತಿರುವ ವ್ಯಕ್ತಿಯನ್ನು ವಿಚಾರಿಸಿದಾಗ ಮೀನು ಹಿಡಿಯಲು ಬೋನ್ ಹಾಕುತ್ತಿದ್ದೇವೆ ಎಂದು ಹೇಳಿದ ತಕ್ಷಣದಲ್ಲೇ ಶ್ರೀರಂಗಪಟ್ಟಣ ಹಿರಿಯ ಸ್ವಯಂ ಸೇವಕರಾದ ಲಕ್ಷ್ಮೀನಾರಾಯಣ, ಕರವೇ ತಾಲೂಕು ಅಧ್ಯಕ್ಷರಾದ ಚಂದ್ಗಾಲ್ ಶಂಕ್ರಣ್ಣ ಪೈಲ್ವಾನ್ ಸತೀಶ್ , ಗಂಜಾಂ ಮೀನುಗಾರರ ಸೊಸೈಟಿಯ ನಿರ್ದೇಶಕರಾದ ಶ್ರೀಯುತ ಗುಲ್ಕನ್ ರಾಮಣ್ಣ ಸಮ್ಮುಖದಲ್ಲಿ ಈ ಅಕ್ರಮವನ್ನು ತಕ್ಷಣದಲ್ಲಿ ಶ್ರೀರಂಗಪಟ್ಟಣ ಅರಣ್ಯ ಇಲಾಖೆಯ ಗಮನಕ್ಕೆ ತಂದರು. ಅರಣ್ಯ ಇಲಾಖೆಯ ವಾಚರ್ ಗಳಾದ ಬಸವರಾಜುರವರು ಹಾಗೂ ತುಳಸಿ ರವರು ಖುದ್ದು ಸ್ಥಳಕ್ಕೆ ಬಂದು ಬೋನ್ ಗಳನ್ನು ಸೀಜ್ ಮಾಡಿ ದೂರು ದಾಖಲಿಸುವಂತೆ ಒತ್ತಾಯಿಸಲಾಯಿತು. ಹುಲಿಯಷ್ಟೇ ಪ್ರಾಮುಖ್ಯತೆ ಉಳ್ಳ ನೀರು ನಾಯಿಗಳ ಉಳಿವು ಸಾರ್ವಜನಿಕರ ಕರ್ತವ್ಯದೊಂದಿಗೆ ಅರಣ್ಯ ಇಲಾಖೆಯ ಕರ್ತವ್ಯವು ಹೌದು ಹಾಗೂ ಈ ರೀತಿ ಮೀನುಗಾರರ ಸಂಘದವರು ಎಂದು ಹೇಳಿಕೊಂಡು ಬೋನ್ ಗಳನ್ನು ಇರಿಸುವವರಿಗೆ ಮೀನುಗಾರರ ಸಂಘದಿಂದ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿ ಪರಿಸರದ ನದಿ ತೀರದ ಜಲಚರ ಪ್ರಾಣಿಗಳನ್ನು ಉಳಿವಿಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸುವಂತಹ ಕಾರ್ಯಕ್ರಮವಾಗಬೇಕೆಂದು ಒತ್ತಾಯಿಸಿದರು. ಶ್ರೀರಂಗಪಟ್ಟಣದ ನದಿ ತೀರದಲ್ಲಿ ರಾತ್ರಿಯ ವೇಳೆ ಅತಿ ಹೆಚ್ಚು ನೀರು ನಾಯಿ ಬೇಟೆಯಾಡುವ ಕಳ್ಳ ಬೇಟೆಗಾರರು ತಡೆಯಲು ಕ್ರಮಸೂಚಿಸುವಂತೆ ಅರಣ್ಯ ಇಲಾಖೆಯ ಸಿಬ್ಬಂದಿಗೆ ತಿಳಿಸಲಾಯಿತು. ಕಳೆದ ಏಳು ವರ್ಷದಲ್ಲಿ ಇದೇ ರೀತಿ ಕಳ್ಳ ಬೇಟೆಯಾಡಲು ಪ್ರಯತ್ನಿಸಿದವರನ್ನು ಅರಣ್ಯ ಇಲಾಖೆ ಗಮನಕ್ಕೆ ತಂದು ಎಫ್ಐಆರ್ ಕೂಡ ದಾಖಲಿಸಲಾಗಿತ್ತು.

ಇತ್ತೀಚಿನ ಸುದ್ದಿ

ಜಾಹೀರಾತು