2:26 PM Friday3 - October 2025
ಬ್ರೇಕಿಂಗ್ ನ್ಯೂಸ್
Bangaluru | ವೈದ್ಯ ದಂಪತಿಯಿಂದ ಮನೆಯಲ್ಲೇ ನವದುರ್ಗೆಯರ ಆರಾಧನೆ: ಸಾಲು ಸಾಲು ದಸರಾ… ಮಡಿಕೇರಿ ದಸರಾ ಶೋಭಯಾತ್ರೆಗೆ ತೆರೆ: ದಶಮoಟಪಗಳ ತೀರ್ಪುಗಾರರ ವಿರುದ್ದ ಆಕ್ರೋಶ; ಪ್ರತಿಭಟನೆ ಮುಂದಿನ ವರ್ಷವೂ ನಾನೇ ದಸರಾ ಪುಷ್ಪಾರ್ಚನೆ ಮಾಡುತ್ತೇನೆ: ಸಿಎಂ ಸಿದ್ದರಾಮಯ್ಯ ಭರವಸೆಯ ನುಡಿ ಮೈಸೂರು ದಸರಾ: ಅರಮನೆ ಆವರಣದಲ್ಲಿ ಯದುವೀರ್ ಒಡೆಯರ್ ರಿಂದ ಶಮಿ ಪೂಜೆ ವಿಶ್ವ ವಿಖ್ಯಾತ ಮೈಸೂರು ದಸರಾ: ಜಂಬೂ ಸವಾರಿಗೆ ಗಜಪಡೆ ಸಜ್ಜು ಮೈಸೂರು ಅರಮನೆಗೆ ಬೆಳ್ಳಿ ರಥದಲ್ಲಿ ಹೊರಟ ಚಾಮುಂಡಿ ದೇವಿ: ಬಿಗಿ ಬಂದೋಬಸ್ತ್ Bangaluru | ಇತಿಹಾಸಕಾರ, ಲೇಖಕ ಡಾ. ರಾಮಚಂದ್ರ ಗುಹಾಗೆ ಮಹಾತ್ಮ ಗಾಂಧಿ ಸೇವಾ… ಮೈಸೂರು ಅರಮನೆಯಲ್ಲಿ ಆಯುಧ ಪೂಜೆ ಸಂಭ್ರಮ: ಪಟ್ಟದ ಆನೆ, ಕುದುರೆ, ಒಂಟೆಗೂ ಪೂಜೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಸರಾ ಸಂಭ್ರಮ: ದೇಶ – ವಿದೇಶಗಳ ಪ್ರಯಾಣಿಕರಿಗೆ… ಸಾಲ ಮರು ಪಾವತಿಸಲು ಬ್ಯಾಂಕ್ ಅಧಿಕಾರಿಗಳ ಕಿರುಕುಳ: ರೈತ ಮನನೊಂದು ಆತ್ಮಹತ್ಯೆ

ಇತ್ತೀಚಿನ ಸುದ್ದಿ

Mangaluru | ಐಸಿವೈಎಂ ಸಿಟಿ ವಲಯದ ವತಿಯಿಂದ ವಿಶಿಷ್ಟ ಕಾರ್ಯಕ್ರಮ ‘ರೂಟ್‌ ಆಫ್‌ ಕೇರ್‌’ ಗೆ ಚಾಲನೆ

03/08/2025, 21:17

ಮಂಗಳೂರು(reporterkarnataka.com): ಮಂಗಳೂರು ಧರ್ಮ ಪ್ರಾಂತ್ಯದ ಕ್ಯಾಥೊಲಿಕ್ ಯುವಜನರ ಸಂಘಟನೆ – ಐಸಿವೈಎಂ ಇದರ ಸಂತ ಪೀಟರ್ ಡೀನರಿ ಅಂದರೆ ಸಿಟಿ ವಲಯವು ಪರಿಸರ ಸಂರಕ್ಷಣೆಯ ದೃಷ್ಟಿಯಿಂದ ‘ರೂಟ್‌ ಆಫ್‌ ಕೇರ್‌’ ಎಂಬ ವಿಶಿಷ್ಟ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.


ಅದರನ್ವಯ ಐಸಿವೈಎಂ ಸದಸ್ಯರು 12 ಚರ್ಚ್ ಗಳನ್ನು ಒಳಗೊಂಡ ಸಂತ ಪೀಟರ್ ಡೀನರಿ ವ್ಯಾಪ್ತಿಯಲ್ಲಿ ವಿವಿಧ ಗಿಡಗಳನ್ನು ನೆಡಲಿದ್ದಾರೆ.ಮುಂದಿನ ವರ್ಷ ಇದೇ ಸಮಯಕ್ಕೆ ಈ ಗಿಡಗಳ ಪರಿಶೀಲನೆ ನಡೆಸಿ ಬೆಳವಣಿಗೆಯನ್ನು ಗಮನಿಸಿ ಬಹುಮಾನ ನೀಡಲಾಗುತ್ತದೆ. ಮಂಗಳೂರಿನ ಸಂತ ತೆರೆಸಾ ಚರ್ಚ್‌ ಚರ್ಚ್ ಧರ್ಮಗುರು ವಂದನೀಯ ಫಾ. ರಿಚಾರ್ಡ್ ಅಲೋಶಿಯಸ್‌ ಕುವೆಲ್ಲೊ ಅವರು ಆಗಸ್ಟ್ 3ರಂದು ರವಿವಾರ ಕಾರ್ಯಕ್ರಮಕ್ಕೆ ಪಾಲ್ದನೆ ಚರ್ಚ್ ಆವರಣದಲ್ಲಿ ಪೇರಳೆ ಗಿಡ ನೆಡುವ ಮೂಲಕ ಚಾಲನೆ ನೀಡಿದರು. ಬಳಿಕ ಅವರು ಮಾತನಾಡಿ ಯುವಜನತೆ ಪರಿಸರದ ಬಗ್ಗೆ ಬಹಳಷ್ಟು ಕಾಳಜಿ ವಹಿಸ ಬೇಕು. ಯುವಕರು ಮನಸ್ಸು ಮಾಡಿದರೆ ಪ್ರಕೃತಿಯಲ್ಲಿ ಪ್ರತಿ ವರ್ಷ ಗಿಡಗಳನ್ನು ನೆಟ್ಟು ಮುಂದಿನ ದಿನಗಳಲ್ಲಿ ಪರಿಸರ ಕಾಪಾಡುವ ಕೆಲಸಕ್ಕೆ ತಮ್ಮಕೊಡುಗೆ ನೀಡ ಬಹುದೆಂದರು.
ಕಾರ್ಯಕ್ರಮದಲ್ಲಿ ಸಿಟಿ ವಲಯದ ಅಧ್ಯಕ್ಷ ರಾಯನ್‌ ಮಾರ್ಸೆಲ್‌ ನೊರೊನ್ಹಾ, ಘಟಕದ ಅಧ್ಯಕ್ಷೆ ವಿಲೀಶಾ ಬ್ರ್ಯಾಗ್ಸ್, ಕಾರ್ಯದರ್ಶಿ ವಿಶೆಲ್‌ ಲೋಬೊ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷ ಎಲಿಯಾಸ್‌ ಫೆರ್ನಾಂಡಿಸ್‌ ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು