ಇತ್ತೀಚಿನ ಸುದ್ದಿ
Kodagu | ಭಾರಿ ಗಾಳಿಗೆ ಮುಚ್ಚಿದ ಮಡಿಕೇರಿ ಕೋಟೆ ಬೃಹತ್ ಬಾಗಿಲು: ಜೆಸಿಬಿ ಮೂಲಕ ಮತ್ತೆ ಓಪನ್
28/07/2025, 18:27

ಗಿರಿಧರ್ ಕೊಂಪುಳಿರ ಮಡಿಕೇರಿ
info.reporterkarnataka@gmail.com
ಮಡಿಕೇರಿಯ ಐತಿಹಾಸಿಕ ಶ್ರೀ ಕೋಟೆ ಮಹಾಗಣಪತಿಯ ದೇವಾಲಯಕ್ಕೆ ಮುಖ್ಯರಸ್ತೆಯಿಂದ ಹೋಗುವ ಕೋಟೆಯದ್ವಾರವು ವಿಪರೀತ ಗಾಳಿ ಮಳೆಗೆ ಮುಚ್ಚಿ ಹೋಗಿದ್ದು, ಜೇಸಿಬಿ ಸಹಾಯದಿಂದ ಮತ್ತೆ ತೆರೆಯಲಾಯಿತು.
ಬಾಗಿಲು ಮುಚ್ಚಿರುವುದರಿಂದ ಇದನ್ನು ಜನರಿಂದ ತೆರೆಯಲು ಅಸಾಧ್ಯವಾದ ಕಾರಣ ಭಕ್ತಾದಿಗಳಿಗೆ ದೇವಸ್ಥಾನಕ್ಕೆ ಹೋಗಲು ಸಹ ತೊಂದರೆ ಉಂಟಾಯಿತು. ನಂತರ ಮಡಿಕೇರಿಯ ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿಯವ ಈ ನಿಟ್ಟಿನಲ್ಲಿ ತಕ್ಷಣವೇ ಸ್ಪಂದಿಸಿ ನಗರಸಭೆಯ ಮುಖಾಂತರ ಜೆಸಿಬಿಯಿದ ಮುಖ್ಯ ದ್ವಾರವನ್ನು ತೆರೆಸಿಕೊಟ್ಟು ಭಕ್ತಾದಿಗಳಿಗೆ ಹಾಗೂ ಜನ ಸಾಮಾನ್ಯರಿಗೆ ಓಡಾಡಲು ಅನುವು ಮಾಡಿಕೊಡಲಾಯಿತು.