11:21 PM Sunday27 - July 2025
ಬ್ರೇಕಿಂಗ್ ನ್ಯೂಸ್
ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ Koppa | ಬೃಹತ್ ಮರ ರಸ್ತೆಗೆ ಪತನ: ಜಯಪುರ- ಬಸರೀಕಟ್ಟೆ,- ಕಳಸ- ಹೊರನಾಡು… ಕೊಡಗಿನಲ್ಲಿ ಭಾರೀ ಮಳೆ: ತುಂಬಿ ತುಳುಕುತ್ತಿರುವ ಕಾವೇರಿ, ಕನ್ನಿಕೆ, ಸುಜ್ಜ್ಯತಿ ನದಿಗಳು; ತ್ರಿವೇಣಿ… ಕೊಡಗು: ಮಳೆ ಹಾನಿ ಪ್ರದೇಶಗಳಿಗೆ ಕಂದಾಯ ಸಚಿವ ಕೃಷ್ಣಬೈರೇ ಗೌಡ ಭೇಟಿ; ಪರಿಹಾರ… BJP Leader | ಚುನಾವಣಾ ಉದ್ದೇಶದಿಂದ ಬೆಂಗಳೂರು ಒಡೆದ ಕಾಂಗ್ರೆಸ್‌: ಪ್ರತಿಪಕ್ಷ ನಾಯಕ… ಗ್ಯಾರಂಟಿಗಳ ಕಾರಣದಿಂದ ಕರ್ನಾಟಕ ತಲಾ ಆದಾಯದಲ್ಲಿ ದೇಶದಲ್ಲೇ ನಂಬರ್ ಒನ್ : ಸಿಎಂ… Mangaluru | ಸಂಸದ ತೇಜಸ್ವೀ ಸೂರ್ಯ ರಿಂದ ಲಾಲ್‌ಬಾಗ್‌ನಲ್ಲಿ ವೀಲ್‌ಚೇರ್ ಸ್ನೇಹಿ ಶೌಚಾಲಯ… Chikkamagaluru | ಕಳಸ: ಭದ್ರಾ ನದಿಯಲ್ಲಿ ಸತತ 23 ತಾಸುಗಳ ಶೋಧ ಬಳಿಕ… ಸೋಮವಾರಪೇಟೆ ಪಟ್ಟಣ ಪಂಚಾಯಿತಿ ಕಡತ ಕಳವು ಪ್ರಕರಣ: ಗುತ್ತಿಗೆ ಸಿಬ್ಬಂದಿ ಕೈಚಳಕ ಸಿಸಿಟಿವಿ… Kodagu | ಕೊಡಗಿನಲ್ಲಿ ಮತ್ತಷ್ಟು ಬಿರುಸುಗೊಂಡ ಮಳೆ: ಹಲವೆಡೆ ರಸ್ತೆಗೆ ಉರುಳಿದ ಮರಗಳು;…

ಇತ್ತೀಚಿನ ಸುದ್ದಿ

ಗದಗ -ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಗಡ್ಕರಿ ಭರವಸೆ: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ

27/07/2025, 23:09

ಗದಗ(ಲಕ್ಷ್ಮೇಶ್ವರ):reporterkarnataka.comಹೊಸ ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವ ಸಂದರ್ಭದಲ್ಲಿ ಗದಗ ಬಂಕಾಪುರ ರಾಷ್ಟ್ರೀಯ ಹೆದ್ದಾರಿಗೆ ಅನುಮತಿ ನೀಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.


ಅವರು ಇಂದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ನಗರದ ಶ್ರೀ ಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಶ್ರೀ ಶ್ರೀ 1008 ಜಗದ್ಗುರು ಶ್ರೀ ವೀರಗಂಗಾಧರ ಕೃಷಿ ಉತ್ಪನ್ನ ಮಾರುಕಟ್ಟೆ (ಎಪಿಎಂಸಿ ಯಾರ್ಡ್) ಪ್ರಾಂಗಣದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಗಣಪತಿ ದೇವಸ್ಥಾನದ ಪ್ರಾಣ ಪ್ರತಿಷ್ಠಾಪನೆ ಮತ್ತು ಲೋಕಾರ್ಪಣೆಯ ಕಾರ್ಯಕ್ರಮದ ಹೋಮ, ಹವನ ಮತ್ತು ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಾತನಾಡಿದರು.
ಇವತ್ತು ನನಗೆ ಬಹಳ ಸಂತೋಷವಾಗಿದೆ ಎಪಿಎಂಸಿಯಲ್ಲಿ ಗಣಪತಿ ದೇವಸ್ಥಾನ ಮಾಡಿದ್ದೀರಿ, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶ ಕೊಟ್ಡಿದ್ದಕ್ಕೆ ಧನ್ಯವಾದ. ಗಣಪತಿ ವಿಘ್ನ ನಿವಾರಕ, ಏನೇ ಒಳ್ಳೆಯ ಕೆಲಸ ಮಾಡಬೇಕೆಂದರೆ ಗಣಪತಿಯ ಪೂಜೆ ಮಾಡುತ್ತೇವೆ. ಎಪಿಎಂಸಿ ಯಾರ್ಡ್ ನಲ್ಲಿ ವ್ಯಾಪಾರ ವ್ಯವಹಾರ ಎರಡು ಮೂರು ಪಟ್ಟು ಗಣಪತಿ ಆಶೀರ್ವಾದದಿಂದ ಹೆಚ್ಚಾಗಲಿ, ನೊಣವಿನಕೆರೆ ಹಾಗೂ ಮುಕ್ತಿ ಮಂದಿರದ ಸ್ವಾಮಿಜಿಗಳ ಆಶೀರ್ವಾದ ಇಲ್ಲಿನ ರೈತ ಬಾಂಧವರಿಗೆ ಇರಲಿ. ಆಡಳಿತ ಮಂಡಳಿ ಸಂಪೂರ್ಣ ಶುಭ್ರವಾಗಿರುವ ಜೈಪುರದಿಂದ ಮಕ್ಕಾಣ ಕಲ್ಲಿನಿಂದ ಗಣಪತಿಯ ವಿಗ್ರಹವನ್ನು ಮಾಡಿಸಿಕೊಂಡು ಬಂದಿರುವುದು ವಿಶೇಷ ಭಕ್ತಿಯಾಗಿದೆ. ಅದು ಇಡೇರುತ್ತದೆ‌ ಎಂದು ಹೇಳಿದರು.
ತಮ್ಮೆಲ್ಲರ ಬೇಡಿಕೆ ಕಾರವಾರ ಇಲಕಲ್ ರಸ್ತೆ, ನಿಮ್ಮ ಪ್ರಕಾರ ಗದಗ ಬಂಕಾಪುರ ರಸ್ತೆ ಈಗಾಗಲೇ ಡಿಪಿಆರ್ ಆಗಿದೆ. ಹೊಸ ರಾಷ್ಟ್ರೀಯ ಹೆದ್ದಾರಿಗಳಿಗೆ ಅನುಮತಿ ನೀಡುವುದು ನಿಂತಿರುವುದರಿಂದ ಅದು ಹಾಗೆ ಉಳಿದಿದೆ. ಹೊಸ ಹೈವೆ ಮಾಡುವ ಸಂದರ್ಭದಲ್ಲಿ ಮಾಡಿಕೊಡುವುದಾಗಿ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ, ಖಂಡಿತವಾಗಿ ಅದು ಆಗುತ್ತದೆ. ಗದಗ ಯಲವಿಗಿ ರೈಲು ಸಂಪರ್ಕದ ಕುರಿತು ರೈಲ್ವೆ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎರಡು ತಿಂಗಳಲ್ಲಿ ಡಿಪಿಆರ್ ಮುಗಿಯುತ್ತದೆ. ದೇಹಲಿಯಿಂದ ಒಪ್ಪಿಗೆ ಪಡೆದುಕೊಂಡು ಬರುತ್ತೇವೆ‌. ಭೂಸ್ವಾಧಿನ ಆದ ತಕ್ಷಣ ಕಾಮಗಾರಿ ಆರಂಭ ಮಾಡುತ್ತೇವೆ. ಈಗಾಗಲೇ ಬಕೆಟ್ ನಲ್ಲಿ 200 ಕೋಟಿ ಮೀಸಲಿಟ್ಡಿದ್ದೇವೆ ಎಂದು ಅವರು ನುಡಿದರು.
ಕಾರ್ಯಕ್ರಮಕ್ಕೆ ತಾಯಂದಿರು ಹೆಚ್ಚಿನ ಸಂಖ್ಯೆಯಲ್ಲಿ ಬಂದಿದ್ದಾರೆ. ಅವರು ಶ್ರದ್ದೆ ಭಕ್ತಿಯಿಂದ ಪೂಜೆ ಮಾಡುತ್ತಾರೆ. ಶುದ್ದ ಮನಸ್ಸಿನಿಂದ ಹೋಮ ಮಾಡಿದ್ದೀರಿ ಅದರ ಫಲ ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕಿನ ಜನರಿಗೆ ಸಿಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಶ್ರೀ ಮ.ನಿ.ಪ್ರ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗಿಶ್ವರ ಮಹಾಸ್ವಾಮಿಗಳು, ಕಾಡಸಿದ್ದೇಶ್ವರ ಮಠ, ನೊಣವಿನಕೆರೆ ಹಾಗೂ ಶ್ರೀ ಷ.ಬ್ರ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯ ಮಹಾಸ್ವಾಮಿಗಳು, ಮುಕ್ತಿಮಂದಿರ ಉಭಯ ಶ್ರೀಗಳು ದಿವ್ಯಸಾನಿಧ್ಯ ವಹಿಸಿದ್ದರು. ಕಾರ್ಯಕ್ರಮದಲ್ಲಿ ಶಾಸಕರಾದ ಡಾ ಚಂದ್ರು ಲಮಾಣಿ, ಮಾಜಿ ಶಾಸಕರಾದ ಗಂಗಣ್ಣ ಮಹಾಂತಶೆಟ್ಟರ,ಎ.ಪಿ.ಎಂ.ಸಿ ಮರ್ಚೆಂಟ ಅಸೋಸಿಯೇಶನ್ ಅಧ್ಯಕ್ಷರಾದ ಓಂಪ್ರಕಾಶ ಜೈನ ಮುಖಂಡರಾದ ವಿಜಯಕುಮಾರ ಹತ್ತಿಕಾಳ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.

ಇತ್ತೀಚಿನ ಸುದ್ದಿ

ಜಾಹೀರಾತು